




ಸೈನಿಕರ ಬಗ್ಗೆ ಹೆಚ್ಚು ಅಭಿಮಾನವಿಟ್ಟುಕೊಂಡವರಂತೆ ಮಾತನಾಡುವವರ ರಾಜಕಾರಣ ಎಲ್ಲರಿಗೂ ಅರ್ಥವಾಗುತ್ತಿದೆ. ರೈತರ ಬಗೆಗಿನ ಕಾಳಜಿ ಪರೀಕ್ಷೆಗೊಳಪಡುತ್ತಿದೆ. ಈ ವಿದ್ಯಮಾನಗಳ ನಡುವೆ ಸ್ವಾಭಿಮಾನ, ಸಮಾಜಸೇವೆಗೆ ನಿಜವಾದ ಅರ್ಥ ಕಲ್ಪಿಸಿದವರು ಸಿದ್ಧಾಪುರ ತಾಲೂಕಿನ ಹಂಗಾರಕಂಡ, ತ್ಯಾಗಲಿ ಭಾಗದ ಜನ.
ರಸ್ತೆ ಸಮಸ್ಯೆ, ದುರಸ್ತಿ ಬಗ್ಗೆ ಹೇಳಿದರೆ ಎಂದೋ ಒಂದು ದಿನ ಬರುವ ಸರ್ಕಾರಿ ವ್ಯವಸ್ಥೆಯ ಜನ ಬರುವ ಮೊದಲೇ ತಿಂಗಳು, ಕಾಲಗಳೇ ಕಳೆದುಹೋಗುತ್ತವೆ. ಮನೆಗೆ ವಿದ್ಯುತ್ ತೊಂದರೆ ಎಂದರೆ ಮಳೆ, ಮರ ಬಿತ್ತು ಎನ್ನುವ ಹೆಸ್ಕಾಂ ರಗಳೆ .ಇವುಗಳ ಗೋಜೇ ಬೇಡ ಎಂದು ತೀರ್ಮಾನಿಸಿದ ತ್ಯಾಗಲಿ ಹಂಗಾರಕಂಡ ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಸದಸ್ಯರು ಜೂನ್ 13 ರ ರವಿವಾರ ತಾವೇ ಒಂದಾಗಿ ರಸ್ತೆ ದುರಸ್ತಿ, ವಿದ್ಯುತ್ ತಂತಿ ಮೇಲೆ ಬೀಳುವ ಮರದ ಟೊಂಗೆಗಳನ್ನು ಕಡಿದು ಟ್ರಿಮ್ ಮಾಡಿದರು. ಈ ಗ್ರಾಮ ಸ್ವಾವಲಂಬನೆಯ ಕೆಲಸ ಮಾಡಿದವರಲ್ಲಿ ನಾಗರಾಜ್ ಹೆಗಡೆ, ರಮೇಶ್ ನಾಯ್ಕ, ಪ್ರಕಾಶ್ ಹೆಗಡೆ, ರಮೇಶ್ ನಾಯ್ಕ ಬಾಳೆಕೈ, ಜಿ.ವಿ.ನಾಯ್ಕ ಸೇರಿದಂತೆ ಕೆಲವರಿದ್ದಾರೆ. ಜನಪ್ರತಿನಿಧಿಗಳು ಗಮನಿಸದ ಸರ್ಕಾರಿ ವ್ಯವಸ್ಥೆಗಾಗಿಯೇ ಕಾಯದ ತಾಳ್ಮೆ ಇಲ್ಲದ ಈ ಭಾಗದ ಸಾರ್ವಜನಿಕರ ಕೆಲಸ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
