

ಉದ್ಯೋಗ ಖಾತ್ರಿ ಅನುಕೂಲ… 2021-22 ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಕಾಳುಮೆಣಸು, ಅಡಿಕೆ, ಮರಸಂಬಾರು ಬೆಳೆ, ತೆಂಗು, ಮಾವು, ಗೇರು, ಅಂಗಾಂಶ ಬಾಳೆ, ಅಂಗಾಂಶ ಪಪ್ಪಾಯ ಪ್ರದೇಶ ವಿಸ್ತರಣೆ, ಅಡಿಕೆ ಮತ್ತು ಕಾಳುಮೆಣಸು ಪುನಃಶ್ಚೇತನ, ಅಡಿಕೆ ತೋಟದಲ್ಲಿ ಅಂತರ್ಗತ ಬಸಿಗಾಲುವೆ ನಿರ್ಮಾಣ ಕಾರ್ಯಕ್ರಮಗಳನ್ನು ಮಾರ್ಗಸೂಚಿ ಅನುಸಾರ ಅನುಷ್ಠಾನಗೊಳಿಸಿ, ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
- ಶ್ರೀ ಕಾಶಿನಾಥ ಪಾಟಿಲ್ (ಉಂಬಳಮನೆ ಹೋಬಳಿ) ; 9535906269
- ಶ್ರೀ ತೇಜಸ್ವಿ ನಾಯ್ಕ (ಕೊಂಡ್ಲಿ ಹೋಬಳಿ) : 9740636382
- ಶ್ರೀಮತಿ ದೀಪಾ ಮಡಿವಾಳ (ಕೋಡ್ಕಣಿ ಹೋಬಳಿ) : 9480644550
2021- 22 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಕುರಿತು.
2021-22 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಸಿದ್ದಾಪುರ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರವು ಅಧಿಸೂಚನೆಯನ್ನು ನೀಡಿ ಆದೇಶಿಸಿದೆ. ಅಡಿಕೆ ಬೆಳೆಯ ವಿಮಾ ಮೊತ್ತ ರೂ. 51200.00 ಪ್ರತಿ ಎಕರೆಗೆ ಆಗಿದ್ದು, ರೈತರು ರೂ. 2560.00 ಪ್ರತಿ ಎಕರೆಗೆ ಪ್ರೀಮಿಯಂ ಮೊತ್ತ ಪಾವತಿಸಬೇಕಾಗುತ್ತದೆ. ಕಾಳುಮೆಣಸು ಬೆಳೆಯ ವಿಮಾ ಮೊತ್ತ ರೂ. 18800.00 ಪ್ರತಿ ಎಕರೆಗೆ ಆಗಿದ್ದು, ರೈತರು ರೂ. 940.00 ಪ್ರತಿ ಎಕರೆಗೆ ಪ್ರೀಮಿಯಂ ಮೊತ್ತ ಪಾವತಿಸಬೇಕಾಗುತ್ತದೆ. ವಿಮಾ ಕಂತು ಪಾವತಿಸಲು ಕೊನೆಯ ದಿನಾಂಕ 30/06/2021. ನಿಗದಿತ ನಮೂನೆಯಲ್ಲಿ ಅರ್ಜಿ, ಬ್ಯಾಂಕ್ ಪಾಸ ಬುಕ್ ನಕಲು. ಬೆಳೆ ನಮೂದಾಗಿರುವ ಪಹಣಿ ಪತ್ರಿಕೆ, ಸ್ವಯಂ ದೃಡೀಕರಣ ಹಾಗೂ ಆಧಾರ ಕಾರ್ಡ ನಕಲು ಪ್ರತಿಯನ್ನು ಹತ್ತಿರದ ಬ್ಯಾಂಕ್ / ಸೊಸೈಟಿಯಲ್ಲಿ ನೀಡಿ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 08389-230713
ಪರಿಹಾರ– ಸಿದ್ದಾಪುರ ತಾಲೂಕಿನ ಕಡಕೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರು ಹಾಗೂ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಸದಸ್ಯತ್ವ ಪಡೆದಿದ್ದ ಕೆರಿಯಾ ತಿಮ್ಮ ನಾಯ್ಕ ಅವರು ಇತ್ತೀಚೆಗೆ ನಿಧನಹೊಂದಿದ್ದು ಅವರ ವಾರಸುದಾರರಾದ ಅವರ ಪತ್ನಿ ಜಾಂಬವತಿ ಕೆರಿಯಾ ನಾಯ್ಕ ಅವರಿಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ 10ಸಾವಿರ ರೂಗಳ ಪರಿಹಾರದ ಚೆಕ್‍ನ್ನು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಗುರುವಾರ ವಿತರಿಸಿದರು.
ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೇಗಾರ, ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಕೆ, ಮುಖ್ಯ ಕಾರ್ಯನಿರ್ವಾಹಕಿ ಹೇಮಾವತಿ ಭಾಸ್ಕರ ನಾಯ್ಕ ಹಾಗೂ ರಮೇಶ ನಾಯ್ಕ ಇದ್ದರು.
ಗುರುವಾರ ಅರ್ಧದಿನ ವಿದ್ಯುತ್ ನಿಲುಗಡೆ- 110/11ಕೆ.ವಿ ಸಿದ್ದಾಪುರ ಉಪಕೇಂದ್ರದಲ್ಲಿ ದುರಸ್ತಿ ಹಾಗೂ ನಿರ್ವಹಣೆ ಮಾಡುವ ಕಾರ್ಯಕ್ಕೆ ದಿನಾಂಕ: : 17-6-2021 (ಗುರುವಾರ) ದಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆಯವರೆಗೆ 110/11ಕೆ.ವಿ ಸಿದ್ದಾಪುರ ಉಪ ಕೇಂದ್ರದ ಮಾರ್ಗ ಮುಕ್ತತೆ ಪಡೆಯುವುದರಿಂದ ಸಿದ್ದಾಪುರ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಗೊಳಿಸಬೇಕಾಗಿರುತ್ತದೆ. ಆದ್ದರಿಂದ ಈ ವಿಷಯದ ಬಗ್ಗೆ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆ ಮೂಲಕ ಕೋರಿದೆ.

