

ಸಿದ್ಧಾಪುರದ ನೂತನ ಮಿನಿ ವಿಧಾನಸೌಧದ ಸಾಂಕೇತಿಕ ಉದ್ಘಾಟನೆ ಜೂನ್ 17 ರ ಬೆಳಿಗ್ಗೆ ಸರಳವಾಗಿ, ಕೋವಿಡ್ ನಿಯಮಾನುಸಾರ ನಡೆಯಲಿದೆ.

ವಿದ್ಯುತ್ ನಿಲುಗಡೆ ಮುಂದೂಡಿಕೆ- 110/11ಕೆ.ವಿ ಸಿದ್ದಾಪುರ ಉಪ ಕೇಂದ್ರದಲ್ಲಿ ವಿದ್ಯುತ್ ಉಪಕರಣಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳುವುದರಿಂದ ದಿನಾಂಕ: 17-6-2021 (ಗುರುವಾರ)ದಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಸಿದ್ದಾಪುರ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಗೊಳಿಸಬೇಕಾಗುತ್ತದೆ ಎನ್ನುವುದನ್ನು ತಿಳಿಸಲಾಗಿತ್ತು. ಆದರೆ ಆಡಳಿತಾತ್ಮಕ ಕಾರಣಗಳಿಂದ ದುರಸ್ತಿ ಕಾರ್ಯಗಳನ್ನು ಮುಂದೂಡಲಾಗಿದ್ದು ದಿನಾಂಕ: 18-6-2021 (ಶುಕ್ರವಾರ) ದಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 05.00 ಗಂಟೆಯವರೆಗೆ 110/11ಕೆ.ವಿ ಸಿದ್ದಾಪುರ ಉಪ ಕೇಂದ್ರದ ಮಾರ್ಗ ಮುಕ್ತತೆ ಪಡೆಯುವುದರಿಂದ ಸಿದ್ದಾಪುರ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಗೊಳಿಸಬೇಕಾಗಿರುತ್ತದೆ. ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ದಿನಸಿ ವಿತರಣೆ- ಸಿದ್ಧಾಪುರದ ಹೆಗ್ಗರಣಿ ಸೇವಾ ಸಹಕಾರಿ ಸಂಘದಿಂದ ಸಂಘದ ವ್ಯಾಪ್ತಿಯಲ್ಲಿ ಬರುವ ಅತಿ ಬಡವರಾದ ಆಯ್ದ 30 ಕುಟುಂಬದವರಿಗೆ ದಿನಸಿ ಕಿಟ್ ವಿತರಿಸಲಾಯಿತು. ಈ ಸಂದರ್ಭ ದಲ್ಲಿ ಸಂಘದ ಅಧ್ಯಕ್ಷರಾದ ಎಂ.ಎಲ್.ಭಟ್ಟ ಉಂಚಳ್ಳಿ ಮಾತನಾಡಿ ಕೋವಿಡ ಕಾರಣದಿಂದ ಲಾಕ್ ಡೌನ್ ಆದ ಸಮಯದಲ್ಲಿ ಸಂಘದ ಸದಸ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಘವು ಕಾರ್ಯನಿರ್ವಹಿಸಿದೆ ಮತ್ತು ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿದೆ. ಜೊತೆಗೆ ಸದಸ್ಯರ ಹಣಕಾಸಿನ ಸಮಸ್ಯೆಗೂ ,ಸೂಕ್ತವಾಗಿ ಸ್ಪಂದಿಸಿದೆ. ಬೆಳೆ ಸಾಲದ ಹಂಚಿಕೆಯನ್ನು ಪ್ರತ್ಯೇಕ ಕೌಂಟರ್ ತೆರದು ಯಾವುದೇ ರೀತಿಯ ಜನಸಂದಣಿ ಆಗದಂತೆ ನೋಡಿ ಕೊಂಡಿದ್ದು ಕೋವಿಡ್ ಉಸ್ತುವಾರಿ ಅಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ . ಒತ್ತಡ ಹಾಗೂ ಭಯದ ನಡುವೆಯೂ ಕೂಡ ಆಡಳಿತ ಮಂಡಳಿಯ ಸದಾಶಯವನ್ನು ತುಂಬಾ ಅಚ್ಚುಕಟ್ಟಾಗಿ ಮುತುವರ್ಜಿಯಿಂದ ನಿರ್ವಹಿಸಿದ ಸಂಘದ ಸಿಬ್ಬಂದಿಗಳಿಗೂ, ಆಡಳಿತ ಮಂಡಳಿಯ ಸದಸ್ಯರಿಗೂ ಧನ್ಯವಾದಗಳನ್ನು ಸಮರ್ಪಿಸಿ ಕೋವಿಡ್ ಸಂಪೂರ್ಣ ನಿರ್ನಾಮವಾಗುವವರೆಗೂ ಸ್ವಯಂ ನಿರ್ಬಂಧ ಹಾಗೂ ಎಚ್ಚರಿಕೆ ಜೊತೆ ಬದುಕಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಚೌಡು.ರಾಮ.ಗೌಡ,ಮುಖ್ಯ ಕಾರ್ಯ ನಿರ್ವಾಹಕ ಚಿದಂಬರ ನಾಯ್ಕ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.
