

ಸಿದ್ದಾಪುರ: ಕರೋನಾ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಜನರ ಆರೋಗ್ಯ ದ ಕಡೆ ಗಮನ ಕೊಡಬೇ ಕಿತ್ತು, ಬೇಜವಾಬ್ದಾರಿ ಸರಕಾರ ಗಳಿಂದ ನಾವು ಹಲವರನ್ನು ಕಳೆದುಕೊಳ್ಳಬೇಕಾಯಿತು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಅಭಿಪ್ರಾಯ ಪಟ್ಟರು.
ಅವರು ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಗಲಿದ ಕಾಂಗ್ರೆಸ್ ನಾಯಕರ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ನಮನ ಸಲ್ಲಿಸಬೇಕು. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಕೊರೋನಾ ಸಮಯದಲ್ಲಿ ಮಡಿದ ಮುಖಂಡರ ಕುಟುಂಬಗಳಿಗೆ ದುಖಃ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ ಎನ್ ನಾಯ್ಕ ಬೇಡ್ಕಣಿಯಲ್ಲಿ ಮಾತನಾಡಿ ಹನುಮಂತ ನಾಯ್ಕ ಹೊಸೂರು ಪಟ್ಟಣ ಪಂಚಾಯಿತ ಅಧ್ಯಕ್ಷ ರಾಗಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿ ಬದುಕು ಕಟ್ಟಿಕೊಳ್ಳುವಲ್ಲಿ ನೆರವು ನೀಡಿದ್ದರು ಅವರ ನಿಧನದಿಂದ ಪಕ್ಷ ಹಿರಿಯರನ್ನು ಕಳೆದುಕೊಂಡತಾಗಿದೆ ಎಂದರು.
ಸಭೆಯಲ್ಲಿ ಕರೋನಾ ದಿಂದ ನಿಧನರಾದ ಹನುಮಂತ ನಾಯ್ಕ ಹೊಸೂರ, ಗೋವಿಂದ ನಾಯ್ಕ ಕಡಕೇರಿ, ಲಕ್ಷ್ಮಣ ನಾಯ್ಕ ಮನ್ಮನೆ, ಶಿವರಾಮ ಗೌಡರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಸಿ ಆರ್ ನಾಯ್ಕ, ಪ. ಪಂ. ಮಾಜಿ ಸದಸ್ಯ ಮಾರುತಿ ಕಿಂದ್ರಿ, ಜಿ ಐ ನಾಯ್ಕ ಕಾನಗೋಡು ಮಾತನಾಡಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿವೇಕ ಭಟ್, ಮನೋಹರ ಗುರಕಾರ, ಗಾಂಧೀಜಿ, ಜಗದೀಶ್ ಹೊಸೂರ,ಪಾಂಡುರಂಗ ಹಳದೋಟ, ಸತೀಶ್ ನಾಯ್ಕ, ಸಾವೇರ್ ಡಿಸಿಲ್ವಾ , ಉಪಸ್ಥಿತರಿದ್ದರು.
ಕೆ ಟಿ ಹೊನ್ನೆಗುಂಡಿ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಎ. ಬಿ. ನಾಯ್ಕ ಕಡಕೇರಿ ವಂದಿಸಿದರು.

