

ಸರ್ಕಾರಿ ಶಿಷ್ಟಾಚಾರ,ಕೋವಿಡ್ ನಿಯಮ ಗಳನ್ನು ಉಲ್ಲಂಘಿಸಿ ಸಿದ್ಧಾಪುರ ಮಿನಿ ವಿಧಾನಸೌಧ ಕ್ಕೆ ಸಾಂಕೇತಿಕ ಚಾಲನೆ ನೀಡಿದ ಸ್ಫೀಕರ್ ಕಾಗೇರಿ ವಿಶ್ವೇಶ್ವರ ಹೆಗಡೆಯವರ ವಿರುದ್ಧದ ಸಾರ್ವಜನಿಕ ಆಕ್ರೋಶ ಹೆಚ್ಚಿದೆ. ಇಲಿಯಾಸ್ ಶೇಖ್, ಆಕಾಶ್ ಕೊಂಡ್ಲಿ, ಸಮಾಜವಾದಿ ಪಕ್ಷದ ನಾಗರಾಜ್ ನಾಯ್ಕ ಬಹಿರಂಗ ಹೇಳಿಕೆ ನೀಡಿದ ಬೆನ್ನಿಗೇ ಇಂದು ಈ ಬಗ್ಗೆ ರಾಜ್ಯಪಾಲರಿಗೆ ಮನವಿ ನೀಡಿರುವ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಘಟಕ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿ ಅವರೇ ಕೆಲವು ಜನಪ್ರತಿನಿಧಿಗಳು,ಬಿ.ಜೆ.ಪಿ. ಕಾರ್ಯಕರ್ತರೊಂದಿಗೆ ನೀತಿ-ನಿಯಮ ಧಿಕ್ಕರಿಸಿ ಅಪಚಾರ ಮಾಡಿದ್ದಾರೆ. ಅವರ ಮೇಲೆ ಹಾಗೂ ಅದಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಶೀಘ್ರ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.



