local news-ವಾಜಗೋಡು ವಿ.ಎಸ್.ಎಸ್.ನಿಂದ 9 ಲಕ್ಷ ಕರೋನಾ ಪ್ಯಾಕೇಜ್

ಸಿದ್ದಾಪುರ ತಾಲೂಕಿನ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ತನ್ನ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಲಾ ಒಂದು ಸಾವಿರದಂತೆ ಕೋವಿಡ್ ಪರಿಹಾರ ನೀಡಲು 9ಲಕ್ಷ ರೂಗಳ ಪ್ಯಾಕೇಜ್ ಬಿಡುಗಡೆಮಾಡಿದೆ ಎಂದು ಸಂಘದ ಅಧ್ಯಕ್ಷ ಎಂ..ಐ.ನಾಯ್ಕ ಕೆಳಗಿನಸಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.19ರಂದು ನಡೆದ ಸಂಘದ ಆಡಳಿತ ಮಂಡಳಿಯಲ್ಲಿ ಈ ಕುರಿತು ಸರ್ವಾನುಮತದಿಂದ ಸಭೆ ತೀರ್ಮಾನಿಸಿದೆ. ಕರೊನಾ ಎರಡನೇ ಅಲೆಯಿಂದ ಸಂಘದ ಸದಸ್ಯರು ಸಂಕಟ ಅನುಭವಿಸುವಂತಾಗಿದೆ. ಅವರಿಗೆ ಆರ್ಥಿಕವಾಗಿ ಸಹಾಯ ಮಾಡುವ ದೃಷ್ಠಿಯಿಂದ ಈ ಕುರಿತು ತೀರ್ಮಾನಿಸಲಾಗಿದೆ. ಸಂಘದಲ್ಲಿ ಖಾತೆ ಹೊಂದಿದ 900ಜನ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಲಾ ಒಂದು ಸಾವಿರ ರೂಗಳನ್ನು ಕೋವಿಡ್ ಪರಿಹಾರ ನೀಡಲಾಗುತ್ತಿದ್ದು ಅದನ್ನು ಅವರ ಸಂಘದ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು. ಇದಕ್ಕಾಗಿ 9ಲಕ್ಷ ರೂಗಳ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಪಾಧ್ಯಕ್ಷ ಜಿ.ಜಿ.ಭಟ್ಟ ದಾಸನಹುಡಿಲು, ನಿರ್ದೇಶಕರಾದ ಎಂ.ಎನ್. ಹೆಗಡೆ ತಲೆಕೇರಿ,ನಾರಾಯಣ ಹೆಗಡೆ ಗೊದ್ಲಮನೆ,ಮಹೇಂದ್ರ ಈರಾ ನಾಯ್ಕ ಅರಶಿನಗೋಡ, ಕೃಷ್ಣ ಲಿಂಗ ನಾಯ್ಕ ಸುತ್ತಲಮನೆ, ನಾರಾಯಣ ನಾಯ್ಕ ಗಾಳಮಾವ, ಗಣಪತಿ ನಾಯ್ಕ ಕಲಕೈ, ಈರ ಫಕೀರ ಹಸ್ಲರ್ ಬಿಜ್ಜಾಳ, ಮಾದೇವಿ ತಿಮ್ಮಪ್ಪ ನಾಯ್ಕ ಅರಶಿನಗೋಡ, ಸುಭದ್ರ ಆರ್.ಹೆಗಡೆ ತ್ಯಾಗ್ಲಿಮನೆ,ರಮಾನಂದ ಹೆಗಡೆ ಮಳಗುಳಿ ಹಾಗೂ ಸಂಘದ ಮುಖ್ಯಕಾರ್ಯನಿರ್ವಾಹಕ ಬಾಲಚಂದ್ರ ಜಿ.ಭಟ್ಟ ಹಾಗೂ ಸಿಬ್ಬಂದಿಗಳು ಸಭೆಯಲ್ಲಿದ್ದರು.

ಗುಣಮಟ್ಟ ಪರಿಶೀಲನೆ- ಸಿದ್ದಾಪುರ
ತಾಲೂಕಿನ ನಿಡಗೋಡಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ ಸಾಂದ್ರ ಶೀಥಲೀಕರಣ ಘಟಕಕ್ಕೆ (ಬಿಎಂಸಿ)ಒಕ್ಕೂಟದ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಹಾಲಿನ ಗುಣಮಟ್ಟವನ್ನು ಪರಿಶೀಲಿಸಿದರು.
ಶೀಥಲೀಕರಣ ಘಟಕದಲ್ಲಿ ಹಾಲಿನ ಗುಣಮಟ್ಟದ ಕುರಿತು ಹೆಚ್ಚು ಗಮನ ನೀಡಬೇಕು. ಪ್ರತಿಯೊಂದು ಸಂಘದಿಂದ ಬಂದ ಹಾಲಿನ ಗುಣಮಟ್ಟವನ್ನು ಸರಿಯಾಗಿ ನೋಡಬೇಕು. ಸ್ವಚ್ಛತೆ ಕುರಿತು ಹೆಚ್ಚು ಗಮನ ನೀಡಬೇಕು ಎಂದು ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಕೆಎಂಎಫ್‍ನ ಸಲಹೆಗಾರರಾದ ಡಾ.ಡಿ.ಎನ್.ಹೆಗಡೆ, ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತೇಶ್ವರ, ಧಾರವಾಡ ಹಾಲು ಒಕ್ಕೂಟದ ಅಧಿಕಾರಿ ಜಿ.ಡಿ.ದೇಸಾಯಿ ಬಿಎಂಸಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ಸಂಘದ ಆಡಳಿತ ಮಂಡಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ನಿಡಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ.ಗೌಡರ್ ಹೂಕಾರ್, ನಿದೇಶಕರಾದ ಲಕ್ಷ್ಮೀನಾರಾಯಣ ಹೆಗಡೆ,ರಾಮ ಜಿ.ನಾಯ್ಕ, ಎಸ್.ಎಸ್.ಗೌಡರ್ ಹೆಗ್ಗೋಡಮನೆ, ವಿಸ್ತರಾಣಾಧಿಕಾರಿ ಚಂದನ್, ಸಂಘದ ಮುಖ್ಯಕಾರ್ಯನಿರ್ವಾಹಕ ವೆಂಕಟೇಶ್ ನಾಯ್ಕ ಹಾಗೂ ಸಿಬ್ಬಂದಿಗಳಿದ್ದರು.
ಇದೇ ಸಂದರ್ಭದಲ್ಲಿ ಸಂಘದಿಂದ ಡಾ.ಡಿ.ಎನ್.ಹೆಗಡೆ ಹಾಗೂ ಡಾ.ಲೋಹಿತೇಶ್ವರ ಅವರನ್ನು ಸನ್ಮಾನಿಸಲಾಯಿತು.

ಸೇವಾ ಭಾರತಿ ಸಿದ್ದಾಪುರದ ಪ್ರಕರಣೆ-

ಕೋವಿಡ್ 2.0 ಆಪತ್ಕಾಲೀನ ಸಮಯದಲ್ಲಿ ನಡೆದ ಸೇವಾ ಚಟುವಟಿಕೆಗಳ ಈವರೆಗಿನ ಸಮಗ್ರ ವಿವರ

 ದಿನಸಿ ಕಿಟ್ ಗಳ ವಿತರಣೆ
ಒಟ್ಟೂ 27 ಪ್ರಾಯೋಜಕರಿಂದ ಪಡೆದ 410(254+156) ದಿನಸಿ ಕಿಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ಸೇವಾ ಭಾರತಿ ಸಿದ್ದಾಪುರ ವತಿಯಿಂದ ತಲುಪಿಸಲಾಯಿತು.
 ಹೋಮಿಯೋಪಥಿ ಔಷಧಿ ವಿತರಣೆ
ಕನ್ನೇರಿ ಮಠದಿಂದ ಪೂರೈಸಿದ ರೋಗ ನಿರೋಧಕ ಶಕ್ತಿ ವರ್ಧಕ ಔಷಧಿಯನ್ನು 1022 ಮನೆಗಳಿಂದ 3746 ಜನರಿಗೆ ತಲುಪಿಸಲಾಯಿತು.
 ತಾಲೂಕಾ ಆಸ್ಪತ್ರೆ ಸಿದ್ದಾಪುರದಲ್ಲಿರುವ ವೆಂಟಿಲೇಟರ್‍ಗಳ ನಿರ್ವಹಣೆ ಕುರಿತು
ಸೇವಾ ಭಾರತಿ ಸಿದ್ದಾಪುರ ಕೋರಿಕೆಯ ಮೇರೆಗೆ ಹೋಲಿ ಫ್ಯಾಮಿಲಿ ಆಸ್ಪತ್ರೆ ಮುಂಬಯಿ ಅಲ್ಲಿ ಸೇವೆ ಸಲ್ಲಿಸುತ್ತಿರುವ ನುರಿತ ಅರವಳಿಕೆ ಹಾಗೂ ವೆಂಟಿಲೇಟರ್ ತಜ್ಞ ವೈದ್ಯರಾದ ಸಿದ್ದಾಪುರದ ಡಾ ವಿದ್ಯಾಧರ ಗಜಾನನ ಲಕ್ಕಪ್ಪನ್ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಆಸ್ಪತ್ರೆಯಲ್ಲಿ ¯ಲಭ್ಯವಿರುವ ವೆಂಟಿಲೇಟರ್ ಗಳ ನಿರ್ವಹಣೆ ಹಾಗೂ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು ತದನಂತರ ತಾಲೂಕ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ವೆಂಟಿಲೇಟರ್‍ಗಳ ಬಳಕೆ ಪ್ರಾರಂಭಿಸಲಾಯಿತು.
 ಶವ ಸಂಸ್ಕಾರ ಮತ್ತು ಉತ್ತರಕ್ರಿಯೆ
• ಪೋಲಿಸ್ ಇಲಾಖೆ ಸಿದ್ದಾಪುರ ಮಾಹಿತಿಯ ಮೇರೆಗೆ ಅನಾಥವಾಗಿ ಮರಣ ಹೊಂದಿರುವಂತಹ ಕಳೆದ ಸುಮಾರು 40 ವರ್ಷಗಳಿಂದ ಸಿದ್ದಾಪುರದ ಎಪಿಎಮ್‍ಸಿ ಬಳಿ ನೆಲಸಿ ಸನ್ಯಾಸಿ ಜೀವನ ನೆಡೆಸುತ್ತಿದ್ದ ಅವಧೂತರಾದ ಭದ್ರಾಚಾರಿ ಯವರ ಶವ ಸಂಸ್ಕಾರ, ಅಸ್ತಿ ವಿಸರ್ಜನೆ ಮತ್ತು ಉತ್ತರಕ್ರಿಯೆಯನ್ನು ಪೂರೈಸಲಾಯಿತು.
• ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಕೋರಿಕೆಯಂತೆ ಕೋವಿಡ್ ನಿಂದ ಮೃತರಾದ ಹೊಸೂರಿನ ಮಹಿಳೆಯ ಶವ ಸಂಸ್ಕಾರಕ್ಕೆ ಕುಟುಂಬದವರೊಂದಿಗೆ ಸಹಕರಿಸಿಲಾಯಿತು.
 ಲಸಿಕಾ ಕೇಂದ್ರದ ಸ್ಥಳಾಂತರ ಮತ್ತು ನಿರ್ವಹಣೆ
ತಾಲೂಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಲಸಿಕಾ ಅಭಿಯಾನವನ್ನು ಸುರಕ್ಷತಾ ದೃಷ್ಟಿಯಿಂದ ಲಸಿಕಾ ಕೇಂದ್ರಕ್ಕೆ ಅನುಕೂಲಕರವಾದ ಶ್ರೀ ರಾಘವೇಂದ್ರ ಮಠದ ಸಭಾಭವನಕ್ಕೆ ಸ್ಥಳಾಂತರಿಸುವಂತೆ ತಾಲೂಕಾ ದಂಡಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಮನವಿ ಸಲ್ಲಿಸಿ ಸ್ಥಳಾಂತರಿಸುವಲ್ಲಿ ಸೇವಾ ಭಾರತಿ ಸಿದ್ದಾಪುರ ವತಿಯಿಂದ ಸಹಕಾರ ನೀಡಲಾಯಿತು. ಆ ಬಳಿಕ ದಿನಾಂಕ 28-05-2021 ರಿಂದ ಪ್ರಾರಂಭಗೊಂಡ ಲಸಿಕ ಕೇಂದ್ರದಲ್ಲಿ ಲಸಿಕೆಯನ್ನು ಈ ವರೆಗೆ ಸುಮಾರು 2866 ಜನರಿಗೆ ಲಸಿಕಾ ನೊಂದಣಿ ಸೇರಿದಂತೆ ಲಸಿಕೆ ಕಾರ್ಯ ನಡೆಯುವಂತೆ ಸ್ವಯಂ ಸೇವಕರಿಂದ ನಿರ್ವಹಿಸಲಾಯಿತು.
 ಸುರಕ್ಷತಾ ಕಿಟ್ ವಿತರಣೆ
ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಕೊರೋನಾ ಮುಂಚೂಣಿ ವಾರಿಯರ್ಸ ಗಳಾದ 17 ಅಂಗನವಾಡಿ ಹಾಗೂ 12 ಆಶಾ ಕಾರ್ಯಕರ್ತೆಯರಿಗೆ ಫೇಸ್ ಶೀಲ್ಡ್ , ಎನ್95 ಮಾಸ್ಕ್, ಬಟ್ಟೆ ಮಾಸ್ಕ್ , ಸ್ಯಾನಿಟೈಸರ್ ಮತ್ತು ಛತ್ರಿಗಳನ್ನು ರಾಘವೇಂದ್ರ ಮಠದ ಸಭಾಭವನದಲ್ಲಿ ವಿತರಿಸಲಾಯಿತು. ಇದರ ಹೊರತಾಗಿ ಹೇರೂರು ಭಾಗದಲ್ಲಿ 19 ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಫೇಸ್ ಶೀಲ್ಡ್ , ಎನ್95 ಮಾಸ್ಕ್, ಸ್ಯಾನಿಟೈಸರ್ ಮತ್ತು ಛತ್ರಿಗಳನ್ನು ವಿತರಿಸಲಾಯಿತು.
 ಅಲೋಪಥಿಕ್ ಮೆಡಿಕಲ್ ಕಿಟ್ ಗಳ ವಿತರಣೆ.
ಯೂಥ್ ಫಾರ್ ಸೇವಾ ಬೆಂಗಳೂರು ಇವರು ನೀಡಿದ 50 ಸುಸಜ್ಜಿತ ಮೆಡಿಕಲ್ ಕಿಟ್ ಗಳನ್ನು ಸೇವಾ ಭಾರತಿ ಸಿದ್ದಾಪುರ ಇವರ ಮೂಲಕ ಕೋವಿಡ್ ರೋಗಿಗಳಿಗೆ ನೀಡುವಂತೆ ಕೋರಿ ತಾಲೂಕಾ ಆರೋಗ್ಯಾಧಿಕಾರಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪೋಲಿಸ್ ಠಾಣಾಧಿಕಾರಿಗಳು ಉಪಸ್ಥಿತರಿದ್ದರು. ಹಾಗೂ ಹೇರೂರು ಭಾಗದಲ್ಲಿ 7 ಸುಸಜ್ಜಿತ ಮೆಡಿಕಲ್ ಕಿಟ್‍ಗಳನ್ನು ಕೋವಿಡ್ ರೋಗಿಗಳಿಗೆ ವಿತರಿಸಲಾಯಿತು.
 ಪೌಷ್ಟಿಕ ಆಹಾರದÀ ಕಿಟ್ ವಿತರಣೆ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕೋರಿಕೆಯ ಮೇರೆಗೆ ತಾಲೂಕಿನಲ್ಲಿ ಗುರುತಿಸಿದ ಅಪೌಷ್ಟಿಕತೆಯಿಂದ ಬಳಲುತ್ತಿರುವ 14 ಜನ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್‍ಗಳನ್ನು ಸೇವಾ ಭಾರತಿ ಸಿದ್ದಾಪುರ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್ 2 ನೇ ಅಲೆಯ ತುರ್ತು ಸಂದರ್ಭದಲ್ಲಿ ಸೇವಾ ಭಾರತಿ ಸಿದ್ದಾಪುರ ಇವರಿಂದ ಈ ಮೇಲ್ಕಾಣಿಸಿದ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಈ ಸಂದರ್ಭದಲ್ಲಿ ನಮಗೆ ಸಹಕರಿಸಿದ ಮಾನ್ಯ ಜಿಲ್ಲಾಧಿಕಾರಿಗಳು, ತಾಲೂಕಾ ದಂಡಾಧಿಕಾರಿಗಳು, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು, ಪೋಲಿಸ್ ಇಲಾಖಾ ಸಿಬ್ಬಂದಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು, ತಾಲೂಕಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪತ್ರಿಕಾ ವರದಿಗಾರರು, ಎಲ್ಲಾ ಮುಂಚೂ ಣಿ ವಾರಿಯರ್ಸ ಹಾಗೂ ಈ ಎಲ್ಲಾ ಸೇವಾ ಚಟುವಟಿಕೆಗಳಿಗೆ ತನು ಮನ ಧನಗಳಿಂದ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.


Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *