

ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರನ್ನು ಗುಣಪಡಿಸುವಲ್ಲಿ ಶ್ರಮಿಸಿದ ಸಿದ್ಧಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಾಲೂಕಿನ ಸ್ಪಂದನ ಸೇವಾ ಸಂಸ್ಥೆ, ಸೇವಾ ಸಂಕಲ್ಪ ಟ್ರಸ್ಟ್ ಮತ್ತು ಚಿರಂತನ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿಶುಕ್ರವಾರ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ, ನರ್ಸ್, ಡಿ ದರ್ಜೆ ನೌಕರಿಗೆ, ತಂತ್ರಜ್ಞರು, ಚಾಲಕರು ಸೇರಿದಂತೆ ಎಲ್ಲಾ ವರ್ಗದ ಅಧಿಕಾರಿಗಳು ಸಿಬ್ಬಂದಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಪ್ರಮಾಣ ಪತ್ರವನ್ನು ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು
ಸನ್ಮಾನಿತರಾದ ತಾಲೂಕು ಅರೋಗ್ಯ ಅಧಿಕಾರಿ ಡಾಕ್ಟರ್ ಲಕ್ಷ್ಮಿಕಾಂತ ನಾಯ್ಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಪ್ರಕಾಶ್ ಪುರಾಣಿಕ್
ಮತ್ತು ಡಾ ಕೆ ಶ್ರೀಧರ್ ವೈದ್ಯ ರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ ಬಿ ಹೊಸೂರು ವಹಿಸಿಕೊಂಡಿದ್ದರು. ಸುಧಾರಾಣಿ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ನಾಯ್ಕ್, ಸುರೇಂದ್ರ ದಫೇದಾರ್ ಲೋಕೇಶ್ ನಾಯ್ಕ್ , ಉಮೇಶ್ ಟಪಾಲ್, ಸಿ ಏನ್ ನಾಯ್ಕ್, ಮಂಗೇಶ್ ನಾಯ್ಕ್, ರಂಗನಾಥ್ ಶೇಟ್, ಪ್ರಜ್ವಲ್ ನಾಯ್ಕ್ ಮುಂತಾದವರುಉಪಸ್ಥಿತರಿದ್ದು
ಕಾರ್ಯಕ್ರಮ ನೆರವೇರಿಸಿದರು.





