

ಸಿದ್ಧಾಪುರ ವಡಗೇರಿ ಮೂಲದ ಬೆಂಗಳೂರಿನ ಸಾಫ್ಟವೇರ್ ಉದ್ಯೋಗಿ ಪ್ರಥ್ವಿರಾಜ್ ಪಾಟೀಲ್ ತಾಲೂಕಿನ ಯುವ ಡಯಾಲಿಸಿಸ್ ರೋಗಿ ದಿವಾಕರ ನಾಯ್ಕ ಕಬಗಾರರಿಗೆ ನೆರವಾದರು. ಸಮಾಜಮುಖಿ ಸಮೂಹ ಸಂಸ್ಥೆಗಳಲ್ಲಿ ಬಂದ ವರದಿಗಳನ್ನು ನೋಡಿ ದಿವಾಕರ ನಾಯ್ಕರನ್ನು ಸಂಪರ್ಕಿಸಿದ ಅವರು ತಮ್ಮ ವೈಯಕ್ತಿಕ ಧನಸಹಾಯವನ್ನು ನೀಡಿದರು.
ಸಿಸ್ಕೋ ಸಿಸ್ಟಮ್ಸ್ ಕಂಪನಿಯಲ್ಲಿ ಗ್ಲೋಬಲ್ ಡೈರೆಕ್ಟರ್ ಆಗಿರುವ ಪ್ರಥ್ವಿರಾಜ್ ಪಾಟೀಲ್ ಸೊರಬದ ಆರೋಗ್ಯ ಇಲಾಖೆಯ ನಿವೃತ್ತ ನೌಕರ ಆಯ್.ಕೆ.ಪಾಟೀಲ್ ಮಗ.ತಮ್ಮ ಸಾಮಾಜಿಕ ಕಾಳಜಿ,ಯುವ ನಾಯಕತ್ವಗಳಿಂದ ಸಾರ್ವಜನಿಕರ ಗಮನ ಸೆಳೆಯುತ್ತಿರುವ ಪ್ರಥ್ವಿ ಸೊರಬ,ಸಿದ್ಧಾಪುರ ಸೇರಿದಂತೆ ಅನೇಕ ಜನರಿಗೆ ಸಹಾಯ ಸಹಕಾರ ನೀಡುತಿದ್ದಾರೆ.ಇವರ ಮಿತ್ರಮಂಡಳಿ ಕೂಡಾ ಸಾಮಾಜಿಕ,ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ ಅಸಹಾಯಕರು,ಅಬಲರಿಗೆ ನೆರವಾಗಿರುವ ಬಗ್ಗೆ ಹೆಮ್ಮೆಯಿಂದ ಹೇಳುವ ಪ್ರಥ್ವಿರಾಜ್ ಪಾಟೀಲ್ ಅಸಹಾಯಕರಿಗೆ ಕೈಲಾದ ಸಹಾಯ, ಸಹಕಾರ ನೀಡುವುದೇ ಮಾನವೀಯ ಧರ್ಮ ಎನ್ನುತ್ತಾರೆ.

