

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಂಕೋಲಾ, ಮತ್ತು ಕಾರವಾರ ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ 07 ಜನ ಆರೋಪಿತರನ್ನು ಹಾಗೂ ಒಬ್ಬ ಕಳುವಿನ ಮಾಲನ್ನು ಸ್ವೀಕರಿಸುವ ವ್ಯಕ್ತಿ ಸೇರಿದಂತೆ 08 ಜನರನ್ನು ಕುಮಟಾ ವೃತ್ತ ನಿರೀಕ್ಷಕರಾದ ಶಿವಪ್ರಕಾಶ ನಾಯ್ಕ ರವರ ನೇತೃತ್ವದಲ್ಲಿ ಗೋಕರ್ಣ ಪೊಲೀಸರು ಬಂಧಿಸಿ, ಗೋಕರ್ಣ ಪೊಲೀಸ್ ಠಾಣೆಯ 05 ಪ್ರಕರಣಗಳು, ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ 11 ಪ್ರಕರಣಗಳು ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 02 ಪ್ರಕರಣಗಳು ಸೇರಿದಂತೆ ಒಟ್ಟೂ 18 ಕಳ್ಳತನ ಪ್ರಕರಣಗಳನ್ನು ಭೇಧಿಸಿ ಒಟ್ಟೂ 08 ಜನ ಆರೋಪಿತರನ್ನು ಬಂಧಿಸಿದ್ದಾರೆ.

ಈ ಆರೋಪಿತರಿಂದ ಕಳ್ಳತನ ಮಾಡಿದ 351 ಗ್ರಾಂ ಬಂಗಾರದ ಆಭರಣಗಳು, 01 ಕೆ.ಜಿ ಬೆಳ್ಳಿಯ ಆಭರಣ, 05 ಗ್ಯಾಸ್ ಸಿಲೆಂಡರಗಳು , 01 ಏರ್ ಗನ್, 03 ಮೋಟಾರ್ ಸೈಕಲ್ ಹಾಗೂ 08 ಮೊಬೈಲ್ ಪೋನ್ ಗಳೂ ಸೇರಿದಂತೆ ಒಟ್ಟೂ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ವಿವರ ಈ ಕೆಳಗಿನಂತಿ ದೆ.
1. ಪ್ರಶಾಂತ್ ತಂದೆ ಕಿಶೋರ ನಾಯ್ಕ, ಪ್ರಾಯ- 23 ವರ್ಷ, ವೃತ್ತಿ- ಚಾಲಕ ಸಾ|| ಬಬ್ರುವಾಡ, ಅಂಕೋಲಾ.2. ಹರ್ಷಾ ತಂದೆ ನಾಗೇಂದ್ರ ನಾಯ್ಕ. ಪ್ರಾಯ 22 ವರ್ಷ, ವೃತ್ತಿ- ಚಾಲಕ ಸಾ|| ತೆಂಕಣಕೇರಿ, ಅಂಕೋಲಾ.3. ಶ್ರೀಕಾಂತ್ ತಂದೆ ಗಣಪತಿ ದೇವಾಡಿಗ, ಪ್ರಾಯ- 27 ವರ್ಷ, ವೃತ್ತಿ- ಗೌಂಡಿ ಕೆಲಸ ಸಾ|| ಕಸ್ತೂರಬಾ ನಗರ, ಶಿರಸಿ 4. ನಿಹಾಲ ತಂದೆ ಗೋಪಾಲಕೃಷ್ಣ ದೇವಳಿ ಪ್ರಾಯ- 26 ವರ್ಷ, ವೃತ್ತಿ- ಗಾರೆ ಕೆಲಸ ಸಾ|| ಕಸ್ತೂರಬಾ ನಗರ 2 ನೇ3 ಕ್ರಾಸ್, ಶಿರಸಿ5. ಸಂದೀಪ ತಂದೆ ಹನುಮಂತ ಮರಾಠೆ, ಪ್ರಾಯ- 25 ವರ್ಷ, ವೃತ್ತಿ- ಬಾರ್ಬೆಂಡಿಂಗ್ ಸಾ|| ಲಂಡಕನಳ್ಳಿ, ದೊಡ್ನಳ್ಳಿ ರಸ್ತೆ, ಶಿರಸಿ. 6) ಗಣೇಶ ಮಾರುತಿ ನಾಯ್ಕ ಪ್ರಾಯ 24 ವರ್ಷ, ವೃತ್ತಿ ಚಾಲಕ ಸಾ|| ಶಿರಕುಳಿ, ಅಂಕೋಲಾ.7) ರಾಹುಲ್ ತಂದೆ ಕೃಷ್ಣಾನಂದ ಬಂಟ್ ಪ್ರಾಯ- 22 ವರ್ಷ, ವೃತ್ತಿ- ಟೈಲ್ಸ್ ಪಿಟ್ಟಿಂಗ್ ಸಾ|| ಕೇಣಿ, ಅಂಕೋಲಾ ಅಶೋಕ ತಂದೆ ಗಣಪತಿ ರೈಕರ್, ಪ್ರಾಯ- 42 ವರ್ಷ, ವೃತ್ತಿ- ಬಂಗಾರದ ಕೆಲಸ ಸಾ|| ಅರೆಕಪ್ಪ, ಬನವಾಸಿ ರಸ್ತೆ,ಶಿರಸಿ.(ಕಳುವಿನ ಮಾಲು ಸ್ವೀಕಾರ) ಈ ಕಾರ್ಯಾಚರಣೆಯಲ್ಲಿ ಶ್ರೀ ಬೆಳ್ಳಿಯಪ್ಪ ಕೆ.ಯು, ಪೊಲೀಸ್ ಉಪಾಧೀಕ್ಷಕರು ಭಟ್ಕಳ ಉಪ ವಿಭಾಗ, ಭಟ್ಕಳ, ಶ್ರೀ ಶಿವಪ್ರಕಾಶ ಆರ್ ನಾಯ್ಕ, ವೃತ್ತ ನಿರೀಕ್ಷಕರು, ಕುಮಟಾ, ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ಎಸ್ ನಾಯ್ಕ, ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರವೀಣಕುಮಾರ್, ಪೊಲೀಸ್ ಸಿಬ್ಬಂದಿಯವರಾದ ರಾಜೇಶ ಹೆಚ್ ನಾಯ್ಕ, ಸಚಿನ್ ಜಿ ನಾಯ್ಕ, ಗೋರಕನಾಥ ರಾಣೆ, ಕಿರಣಕುಮಾರ್ ಬಾಳೂರ, ನಾಗರಾಜ ಪಟಗಾರ, ರಾಜು ನಾಯ್ಕ, ಅರುಣ ನಾಯ್ಕ, ನಾಗರಾಜ ನಾಯ್ಕ, ಎ.ಎಸ್.ಐ ಅರವಿಂದ ಶೆಟ್ಟಿ, ಎ.ಎಸ್.ಐ ನಾರಾಯಣ ಗುನಗಿ, ಎ.ಎಸ್.ಐ ರಾಜು ಜೆ ಆಗೇರ, ವಿನಯ ಗೌಡ, ಜಗದೀಶ ನಾಯಕ, ಅನುರಾಜ ನಾಯ್ಕ, ಸಂಜೀವ ನಾಯ್ಕ, ಅರುಣ ಮುಕ್ಕಣ್ಣನವರ, ಶಿವಾನಂದ ಗೌಡ, ಅಮಿತ ಸಾವಂತ್, ವಸಂತ ನಾಯ್ಕ, ರವಿ ಹಾಡಕರ, ಮಹೇಶ ನಾಯ್ಕ, ರಾಮಯ್ಯ ನಾಯ್ಕ, ರಾಜು ಮಾಳಿ, ಉದಯ ತಾಂಡೇಲ ಮತ್ತು ಅಂಕೋಲಾ ಪೊಲೀಸ್ ಠಾಣೆಯ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕೆ ಹಾಗೂ ತಾಂತ್ರಿಕ ವಿಭಾಗ, ಜಿಲ್ಲಾ ಪೊಲೀಸ್ ಕಚೇರಿಯ ರಮೇಶ ನಾಯ್ಕ, ಸುಧೀರ ಮಡಿವಾಳ ರವರು ಪಾಲ್ಗೊಂಡಿದ್ದ್ರು, ಇವರ ಪತ್ತೆ ಕಾರ್ಯವನ್ನು ಪ್ರಶಂಸಿಸಿ, ಬಹುಮಾನ ಘೋಷಿಸಿರುತ್ತೇನೆ.
