ಸಿದ್ಧಾಪುರ ತಾಲೂಕಿನ ಮುಗದೂರಿನ ಪ್ರಚಲಿತ ಆಶ್ರಯಧಾಮಕ್ಕೆ ಭೇಟಿ ನೀಡಿದ ಸಾಫ್ಟ್ ವೇರ್ ಇಂಜಿನಿಯರ್ ಪ್ರಥ್ವಿರಾಜ್ ಪಾಟೀಲ್ ವಡಗೇರಿ ಆಶ್ರಮದ ಕೆಲಸಗಳನ್ನು ಪ್ರಶಂಸಿದರು. ಅಸಹಾಯಕರು, ಅನಾಥರಿಗೆ ಸೇವೆ ಮಾಡುತ್ತಿರುವ ನಾಗರಾಜ್ ನಾಯ್ಕ ಕುಟುಂಬವನ್ನು ಶ್ಲಾಘಿಸಿದ ಪಾಟೀಲ್ ತಮ್ಮ ಆರ್ಥಿಕ ನೆರವನ್ನು ಒದಗಿಸಿದರು.
ಪ್ರಚಲಿತ ಆಶ್ರಯಧಾಮ ಅನೇಕ ಏಳುಬೀಳುಗಳ ನಡುವೆ ಸಾಗುತ್ತಿದೆ. ಸಮಾಜಮುಖಿ ಸಮೂಹ ಕೂಡಾ ನಮ್ಮ ಸೇವೆಗೆ ತಮ್ಮ ನೈತಿಕ ಧೈರ್ಯ ನೀಡುತ್ತಿದೆ. ವ್ಯಕ್ತಿಗಳು, ಮಾಧ್ಯಮಗಳ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನೇಶ್ ಆಶ್ರಮದ ಪರವಾಗಿ ಸಹಕಾರ ನೀಡುತಿದ್ದಾರೆ. ಪ್ರಥ್ವಿರಾಜ್ ಪಾಟೀಲ್ ರಂಥ ಅನೇಕ ಸಹೃದಯರೇ ನಮ್ಮ ಸೇವೆಯ ಹಿಂದಿನ ಸ್ಪೂರ್ತಿ. ಹೀಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಸೇವೆಗೆ ಬೆಂಬಲಿಸುವ ಜನರು ನಮ್ಮ ಶ್ರಮ, ಸೇವೆಯ ಹಿಂದಿನ ನಿಜವಾದ ಶಕ್ತಿ ಎಂದು ಕೃತಜ್ಞತೆ ಸಲ್ಲಿಸಿದ ಪ್ರಚಲಿತ ಆಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ ಮಾನವೀಯ ಸೇವೆಗೆ ಮಿಡಿದ ಪ್ರಥ್ವಿರಾಜ್ ಪಾಟೀಲ್ ಮತ್ತು ಸಮಾಜಮುಖಿ.ನೆಟ್ ನ್ಯೂಸ್ ಗೆ ಧನ್ಯವಾದ ಅರ್ಪಿಸಿದರು.