ಇದು ಬ್ರಾಹ್ಮಣ್ಯವಲ್ಲದಿದ್ದರೆ ಮತ್ತೇನು? ಭಾಗ-01

ಬ್ರಾಹ್ಮಣ, ಬ್ರಾಮಣ್ಯದ ಬಗ್ಗೆ ಜೋರು ಚರ್ಚೆ ನಡೆಯುತಿದ್ದಾಗ ನನಗೆ ಆರೋಗ್ಯ ತಪ್ಪಿತ್ತು. ನನ್ನ ಆರೋಗ್ಯ ಸುಧಾರಿಸಿದ ಮೇಲೆ ಕೂಡಾ ಈ ಬಗ್ಗೆ ಬರೆಯಬಾರದು,ಮಾತನಾಡಬಾರದು ಎಂದುಕೊಂಡವನಿಗೆ ನನ್ನ ಅನುಭವ ಬ್ರಾಹ್ಮಣ್ಯಕ್ಕೆ ತುತ್ತಾದದ್ದೋ? ಬ್ರಾಹ್ಮಣರಿಗೆ ತುತ್ತಾದದ್ದೋ ಎನ್ನುವ ಜಿದ್ಞಾಸೆ ಉಂಟಾಗಿ ನನ್ನಂಥ ಅನೇಕರ ಅನುಭವ ಬ್ರಾಹ್ಮಣ್ಯದ ಅಹಂ ಮತ್ತು ಅವರ ಲೆಕ್ಕದ ಸಹಜ ವಿದ್ಯಮಾನ ಎನ್ನುವ ಉಪಾಯದ ಉದಾರತೆ! ಹಿನ್ನೆಲೆಯಲ್ಲಿ ಈ ಅನುಭವ ಕಥನ.

ನಮ್ಮ ಓರಗೆಯ ಅನೇಕರಂತೆ ನಾನೂ ಕೂಡಾ ಮಾಧ್ಯಮ ಕ್ಷೇತ್ರದ ಪರಿವರ್ತನಾ ಗುಣ,ಮಾಧ್ಯಮ ಸಮಾಜಸುಧಾರಣೆಯ ಅಸ್ತ್ರ ಎನ್ನುವ ಕನಸು ಕಟ್ಟಿಕೊಂಡೇ ಬಂದವನು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಅರ್ಹತೆ ನನಗಿಲ್ಲದಿದ್ದರೆ ನಾನು ನನ್ನಂಥ ಕೆಲವರು ಮಾಧ್ಯಮಕ್ಷೇತ್ರ ಪ್ರವೇಶಿಸುವುದೂ ಸುಲಭದ ಸಾಧ್ಯತೆಯಾಗಿರಲಿಲ್ಲ. ಹೀಗಿದ್ದ ವಸ್ತುಸ್ಥಿತಿ-ಪರಿಸ್ಥಿತಿ ಮಧ್ಯೆ ಸ್ಫರ್ಧೆಯಲ್ಲಿ ಸಾಂಪ್ರದಾಯಿಕ ಮಾಧ್ಯಮಜೀವಿಗಳೊಂದಿಗೆ ಸ್ಫರ್ಧಿಸಿ ಗೆದ್ದ ಕೆಲವರಲ್ಲಿ ನಾನೂ ಒಬ್ಬ.

ನಮ್ಮ ಆಯ್ಕೆಯಂತೆ 2000ನೇ ಇಸ್ವಿಯಲ್ಲಿ ಅಂದಿನ ಪ್ರಭಾವೀ ಮಾಧ್ಯಮದ ವರದಿಗಾರನಾಗಿ ಶಿರಸಿಗೆ ಬಂದಿಳಿದೆ. ಬಹುಶ: ಶಿರಸಿ ಜಿಲ್ಲೆಯ ಮೊದಲ ಜಿಲ್ಲಾ ಕೇಂದ್ರವಾಗಿ ಜಿಲ್ಲಾ ವರದಿಗಾರನನ್ನು ಹೊಂದಿದ್ದು ಅದೇ ಮೊದಲು, ಅಲ್ಲಿಯ ವರೆಗೆ ಶಿರಸಿಯಲ್ಲಿ ಯಾವ ಪತ್ರಿಕೆ, ಮಾಧ್ಯಮದ ವರದಿಗಾರರೂ ಜಿಲ್ಲಾ ವರದಿಗಾರರಾಗಿರುತ್ತಿರಲಿಲ್ಲ. ಶಿರಸಿ ನಮಗೆ ಹೊಸದೇ. ಹೊಸ ಮಾಧ್ಯಮ, ಹೊಸ ಕೆಲಸ. ಕೆಲವು ಪಟ್ಟಭದ್ರರು ನನ್ನನ್ನು ನೋಡುವಾಗಲೇ ಅಸ್ಫಶ್ಯನಂತೆ ಮಾಡುತಿದ್ದವರಿಗೆ ನನ್ನ ಕೆಲಸದ ಪರಿಚಯವಾಗುವ ವರೆಗೆ ನಾನೂ ಆರೋಗ್ಯಕರ ಅಂತರದಲ್ಲಿದ್ದೆ.

ಅಲ್ಲಿಯ ವರೆಗೆ ನಾನೂ ಶಿರಸಿಯಲ್ಲಿದ್ದರೂ ನಮ್ಮ ಸಹ ಉದ್ಯೋಗಿಗಳೋ? ಸಾಂಪ್ರದಾಯಿಕ ಪತ್ರಕರ್ತರೋ ನಾನು ಸಿದ್ಧಾಪುರದಲ್ಲಿರುತ್ತೇನೆ ಎಂದು ನನ್ನನ್ನು ಪ್ರತ್ಯೇಕವಾಗಿ ಇಡುವ ಸಂಚು ಅನಾವಶ್ಯಕವಾಗೇ ನಡೆಯಿತು. ಈ ಸಮಯದಲ್ಲಿ ಜನವಾಹಿನಿಯ ಟಿ.ಬಿ. ಹರಿಕಾಂತ್, ನಟರಾಜ್, ಜಯರಾಮಹೆಗಡೆಯವರಂಥ ಕೆಲವು ಮನುಷ್ಯರು ಬಿಟ್ಟರೆ ಉಳಿದವರಲ್ಲಿ ಬಹುತೇಕರು ನಾನು ಪ್ರಸಿದ್ಧನಾಗುವವರೆಗೆ ನನ್ನನ್ನು ಉಪೇಕ್ಷಿಸಿ,ತಳ್ಳಿ ಅರ್ಜಿಯ ಅವರ ಲಾಗಾಯ್ತಿನ ಹವ್ಯಾಸ ಮುಂದುವರಿಸಿದ್ದರು. ಹೀಗೆ ನಮ್ಮೆದುರೇ ಒಂದು ಗೋಡೆ ನಿರ್ಮಿಸಿ ನನ್ನೊಂದಿಗೆ ನಮ್ಮಂಥ ಕೆಲವರನ್ನೇ ಗುರಿಮಾಡಿದವರು ಬಹುತೇಕ ಎಲ್ಲರೂ ಮೇಲ್ಜಾತಿಯವರೇ ಎನ್ನುವುದು ಕಾಕತಾಳೀಯವೆ?

-2-

ಶಿರಸಿಯಲ್ಲಿ ನಾನು ಒಂದು ವಾಹಿನಿಯ ಜಿಲ್ಲಾ ವರದಿಗಾರನಾದರೂ ನಮಗೆ ಎಲ್ಲಾ ಜಿಲ್ಲಾ ವರದಿಗಾರರಂತೆ ತಾಂತ್ರಿಕವಾಗಿ ಜಿಲ್ಲಾ ಸುದ್ದಿ ಸಂಗ್ರಹಕಾರರೆಂದೇ ನಮ್ಮ ಹುದ್ದೆ. ಈ ಅವಕಾಶದಲ್ಲಿ ಅರೆಕಾಲಿಕವಾಗಿ ಉಪನ್ಯಾಸಕನಾಗಿ ನಿಯಮಾನುಸಾರ ನಾನೂ ಕಾಲೇಜಿನ ಅಧಿಕೃತ ಉಪನ್ಯಾಸಕನಾಗಿ ಪ್ರವೇಶ ಪಡೆದೆ. ಅಲ್ಲಿ ಆಗಾಗಲೇ ಆರೆಸೆಸ್,ವಿ.ಹಿ.ಪ. ಗಳಲ್ಲಿ ಕೆಲಸ ಮಾಡಿ ಸ್ಥಳಿಯ ಪತ್ರಿಕೆ ನಡೆಸುತಿದ್ದ ವ್ಯಕ್ತಿಯೊಬ್ಬ ವಿಭಾಗದ ಮುಖ್ಯಸ್ಥ ಎಂದು ಸೇರಿ ಕೊಂಡಿದ್ದ ಅವರಿಗೆ ನಿಗದಿತ ಶೈಕ್ಷಣಿಕ ಅರ್ಹತೆಯಾಗಲಿ, ತಾಂತ್ರಿಕ ಯೋಗ್ಯತೆಯಾಗಲಿ ಇರಲಿಲ್ಲ ಎನ್ನುವುದು ಬೇರೆ ವಿಚಾರ.

ಹೀಗೆ ಸಂಘದ ಸಂಪರ್ಕ, ಜಾತಿ ಲಾಭಿಯಿಂದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥನಾಗಿದ್ದ ಈ ಪತ್ರಕರ್ತ ನನ್ನ ತರಗತಿಗಳಿಗೆ ಮೇಲ್ವಿಚಾರಕ, observer ಆಗಿ ಅವತರಿಸುತಿದ್ದ ನಮ್ಮ ವಿದ್ಯಾರ್ಥಿಗಳಿಗೆ ನನ್ನ ಎದುರೇ ಇವರ ಪಾಠ ಅರ್ಥವಾಗುತ್ತಿದೆಯಾ ? ಎಂದೆಲ್ಲಾ ಕೇಳುತಿದ್ದ! ನಾನು ಉಪನ್ಯಾಸಕನಾಗಿ ಆ ಮೊದಲು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿ ಕೆಲವು ಕಾಲೇಜು, ವಿಶ್ವವಿದ್ಯಾಲಯಗಳನ್ನು ನೋಡಿದವನು ನನ್ನ ಅನುಭವದಲ್ಲಿ ಅರೆಕಾಲಿಕ ಉಪನ್ಯಾಸಕರಿಗೆ ಬೇರೆಲ್ಲೂ ವಿಭಾಗದ ಮುಖ್ಯಸ್ಥರಾಗಿ ಪಾಠ-ಪ್ರವಚನ ಪರೀಕ್ಷಿಸುವುದು, ನಿರೀಕ್ಷಿಸುವುದು ನಾನೆಂದೂ ಕಂಡಿರಲಿಲ್ಲ. ವಿಚಿತ್ರವೆಂದರೆ ನಾನು ಕೆಲಸ ಮಾಡುತಿದ್ದ ಎಂ.ಇ.ಎಸ್. ಸಂಸ್ಥೆಯ ಇತರ ವಿಭಾಗಗಳಲ್ಲಿ ಇಂಥ ವ್ಯವಸ್ಥೆಗಳಿರಲಿಲ್ಲ. ಈ ಬಗ್ಗೆ ಪ್ರಾಂಶುಪಾಲರು, ಅಂದಿನ ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರ ವರೆಗೆ ದೂರು ನೀಡಿದೆ. ಪ್ರತಿಕ್ರೀಯೆ, ಫಲಿತಾಂಶ ಶೂನ್ಯ.

ಇದಕ್ಕೆ ಪ್ರತಿಯಾಗಿ ನಕಲಿ ಉಪನ್ಯಾಸಕ ಸಚ್ಚಿದಾನಂದ ಹೆಗಡೆ ತನ್ನ ಹಿಂದುತ್ವವಾದಿ ಸೋಗಿನ ವೈದಿಕ ಕುಟಿಲತೆ ಪ್ರಾರಂಭಿಸಿದ. ಎ.ಬಿ.ವಿ.ಪಿ. ಹುಡುಗರು, ಸ್ವ ಜಾತಿಯವರ ಜೊತೆಗೆ ಅನ್ಯ ಜನಿವಾರಧಾರಿಗಳಿಗೂ ನೇರವಾಗೇ ನೀವು ಜನಿವಾರಧರಿಸುವವರು ಆ ಶೂದ್ರನ ವಿರುದ್ಧ ಕೆಲಸ ಮಾಡಲು ನಿಮಗೇನು ಅಡ್ಡಿ ಎಂದೆಲ್ಲಾ ಪುಸಲಾಯಿಸಿ ತನ್ನ ಸನಾತನವಾದಿ ವೈದಿಕ ಕುತಂತ್ರಗಳನ್ನು ನನ್ನೆದುರು ಪ್ರಯೋಗಿಸತೊಡಗಿದ.

ಅಂತಿಮವಾಗಿ ನಾನೂ ಆ ಸಂಸ್ಥೆ ಬಿಟ್ಟೆ ಈ ನಕಲಿ ಜಾತೀವಾದಿ, ಧರ್ಮಾಂಧ ಹೇಸಿಗೆ ವ್ಯಕ್ತಿಯನ್ನು ಆ ಸಂಸ್ಥೆಯಿಂದ ಹೊರಗೆಸೆಯುವಂತೆ ಮಾಡಿದೆ. ನಾವೆಲ್ಲ ತಿಳಿದಿರುವಂತೆ ಪದವಿ ತರಗತಿ, ಕಾಲೇಜಿನ ಉಪನ್ಯಾಸಕನಾಗಲು ಕನಿಷ್ಟ ಸ್ನಾತಕೋತ್ತರ ಪದವಿಧರ ಆಗಿರಬೇಕು ಆದರೆ ಆ ಸಂಸ್ಥೆಯಲ್ಲಿ ಮೇಲ್ಜಾತಿಯವರು ಮಾತ್ರ ನಿಗದಿತ ಸ್ನಾತಕೋತ್ತರ ಪದವಿ ಇಲ್ಲದೆ ಉಪನ್ಯಾಸಕರಾಗಿದ್ದರು! ಕೆಲವರು ಉಪನ್ಯಾಸಕರಾದ ನಂತರ ಸ್ನಾತಕೋತ್ತರ ಪದವಿ ಪಡೆದಿದ್ದರಂತೆ! ಇದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಧರರಾದ ದಲಿತ ಉಪನ್ಯಾಸಕರಿಗೆ ಪದೋನ್ನತಿ ನೀಡದೆ ಸತಾಯಿಸಲಾಗುತಿತ್ತು. ಈ ವರೆಗೆ ಈ ಸಂಸ್ಥೆಯ ಕಾಲೇಜಿನಲ್ಲಿ ಒಬ್ಬರೂ ದಲಿತರು ಪ್ರಾಂಶುಪಾಲರಾದ ದೃಷ್ಟಾಂತಗಳಿಲ್ಲ. ಸರ್ಕಾರಿ ಅನುದಾನ ಪಡೆದು ತಮ್ಮವರಿಗೊಂದು ಅನ್ಯರಿಗೊಂದು ರೀತಿ- ನೀತಿ ಮಾಡುವ ಈ ವೈದಿಕ ಕುಟಿಲತೆಯನ್ನು ಹಿಂದುತ್ವ ಎನ್ನಲಾದೀತೆ? ಈ ಅವ್ಯವಸ್ಥೆ, ಇಂಥ ಅನಾಚಾರ ಪೋಶಕ ವೈದಿಕ ಕುಟಿತಲೆ ಬ್ರಾಹ್ಮಣರ ನೀಚತನ? ಬ್ರಾಹ್ಮಣ್ಯದ ಪೋಷಣೆ ಅಲ್ಲದೆ ಮತ್ತೇನು? ಅಷ್ಟಕ್ಕೂ ಈ ವ್ಯವಸ್ಥಿತ ಅನಾಚಾರವನ್ನು ಬ್ರಾಹ್ಮಣ್ಯ ಅನ್ನದೆ ಮತ್ತೇನೆಂದು ಕರೆಯುವುದು…? ಈ ಅವ್ಯವಸ್ಥೆಯನ್ನು ಪೋಶಿಸುವ ಸಂಘಟಿತ ಜಾತ್ಯಾಂಧತೆಯನ್ನು ಮೌನವಾಗಿದ್ದು ಬೆಂಬಲಿಸುವ ಪತ್ರಕರ್ತರು,ಸೋಕಾಲ್ಡ್ ಬರಹಗಾರರನ್ನು ಪತ್ರಕರ್ತರು ಎನ್ನಲು ಸಾಧ್ಯವೆ? ಲೋಹಿಯಾ ಅಭಿಪ್ರಾಯದಂತೆ ದೇವರು,ಧರ್ಮ,ನಂಬಿಕೆ, ಮಾಧ್ಯಮಗಳೆಲ್ಲಾ ಪುರೋಹಿತಶಾಹಿ ವ್ಯವಸ್ಥೆ ಪೋಶಿಸುವ ಸಲಕರಣೆಗಳು ಎನ್ನುವುದರಲ್ಲಿ ಯಾವುದಾದರೂ ಅನುಮಾನಕ್ಕಾದರೂ ಅವಕಾಶವಿದೆಯೆ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

ಎಚ್ಚರ!: ಒಟಿಪಿ ಬೇಕೇ ಇಲ್ಲ, ಆದರೂ ನಿಮ್ಮ ಖಾತೆಗೆ ಬೀಳುತ್ತೆ ಕನ್ನ!

https://www.youtube.com/watch?v=0hmFtRvXqHc&t=88s ತಂತ್ರಜ್ಞಾನ ಮುಂದುವರೆದಷ್ಟೂ ವಂಚಕರು ವಂಚಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. (ಸಂಗ್ರಹ ಚಿತ್ರ) ತಂತ್ರಜ್ಞಾನ ಮುಂದುವರೆದಷ್ಟೂ ವಂಚಕರು ವಂಚಿಸುವುದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಒಟಿಪಿ...

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: JDS MLC ಸೂರಜ್ ರೇವಣ್ಣ ಬಂಧನ

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ JDS MLC ಸೂರಜ್ ರೇವಣ್ಣ ಅವರನ್ನು ಹಾಸನ ಪೊಲೀಸರ ಬಂಧಿಸಿದ್ದಾರೆ. ಸೂರಜ್ ರೇವಣ್ಣ ಹಾಸನ: ಅಸಹಜ ಲೈಂಗಿಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *