

ಕರೋನಾ ಮೂರನೇ ಅಲೆ ಎದುರಿಸಲು ಸಹಜ ರೋಗನಿರೋಧಕ ಶಕ್ತಿಯ ವೃದ್ಧಿಯೇ ಸರಳ ಪರಿಹಾರ ಎಂದು ಪ್ರತಿಪಾದಿಸಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಸಾಧ್ಯತೆಯನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಸಿದ್ಧಾಪುರದಲ್ಲಿ ನಡೆದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೋಗನಿರೋಧಕ ಶಕ್ತಿ ವೃದ್ಧಿಸಲು ಸುಲಭ, ಸರಳ ಪರಿಹಾರೋಪಾಯಗಳಿವೆ. ಅಲೋಪತಿಯಲ್ಲಿ ರೋಗ ಬಂದಮೇಲೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಆದರೆ ರೋಗ ಬರದಂತೆ ತಡೆಯಲು ಆಯುರ್ವೇದ, ಯೋಗಗಳಿಂದ ಸಾಧ್ಯ. ಈ ಸಾಧ್ಯತೆಯನ್ನು ಸರ್ಕಾರ ಜನರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಇಂಥ ಸರಳ-ಸುಲಭ ಮುಂಜಾಗೃತಾ ಕ್ರಮಗಳ ಮೂಲಕ ಕರೋನಾ ಮೂರನೇ ಅಲೆ ಎದುರಿಸಲು ಸಜ್ಜಾಗಬೇಕು. ಅದಕ್ಕೆ ಸರ್ಕಾರಗಳು ಎಲ್ಲಾ ಮುಂದಾಲೋಚನೆ, ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಿವೆ ಎಂದರು.
ಶಂಕರಮಠ ಸಭಾಂಗಣದಲ್ಲಿ ನಡೆದ ಈ ಜನಜಾಗೃತಿ ಸಭೆಯಲ್ಲಿ ಉಪನ್ಯಾಸ ನೀಡಿದ ಹಿರಿಯ ವೈದ್ಯ ಡಾ.ಶ್ರೀಧರ ವೈದ್ಯ ಕರೋನಾ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಕೆಟ್ಟ ಪರಿಣಾಮ ಉಂಟುಮಾಡಿದೆ. ಚೀನಾ-ಇಟಲಿಗಳಲ್ಲಿ ಕರೋನಾ ವಿಸ್ತರಿಸಿ ಅಪಾಯ ಉಂಟುಮಾಡುತಿದ್ದಾಗ ಭಾರತದಲ್ಲಿ ಇಂಥ ಸಾಧ್ಯತೆಗಳ ಮುಂಜಾಗೃತಾ ಕಾರ್ಯಕ್ರಮವಾಗಿದ್ದರೆ ಕರೋನಾ ಅಪಾಯ ತಪ್ಪಿಸಬಹುದಿತ್ತು. ಈಗ ಕೂಡಾ ರೋಗನಿರೋಧಕ ಶಕ್ತಿ ವೃದ್ಧಿಸುವ ಸರಳ-ಸುಲಭ ಉಪಾಯಗಳ ಮೂಲಕವೇ ಕರೋನಾ ಮೂರನೇ ಅಲೆ, ಇತರ ರೋಗಗಳಿಂದ ಬಚಾವಾಗಲು ಸಾಧ್ಯ ಎಂದರು.
ಇನ್ನೊಬ್ಬ ಉಪನ್ಯಾಸಕಿ, ಆಯುರ್ವೇದ ತಜ್ಞೆ ಡಾ. ರೂಪಾ ಭಟ್ ಮಾತನಾಡಿ ಕರೋನಾ ಆತಂಕದಿಂದ ಅಪಾಯಗಳಾಗುತ್ತಿವೆ. ಆತಂಕದ ಬದಲು ಎಚ್ಚರಿಕೆ, ಮುಂಜಾಗೃತಾ ಕ್ರಮಗಳ ಮೂಲಕ ಕರೋನಾ ವಿರುದ್ಧ ಜಯಿಸಬಹುದು ಈ ಬಗ್ಗೆ ಜನಜಾಗೃತಿ ಆದರೆ ಪರಿಣಾಮ ಸಾಧ್ಯ ಎಂದರು.


ಕಾಮಗಾರಿಗೆ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಚಾಲನೆ ನೀಡಿದರು.
