ವಾರಾಂತ್ಯದ ಕರ್ಫ್ಯೂ ನಡುವೆ ಸಿದ್ಧಾಪುರ ಹುಸೂರು ಜಲಪಾತಕ್ಕೆ ಪ್ರವಾಸಕ್ಕೆ ಬಂದ ಜನರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಗೂಸಾ ತಿಂದ ಘಟನೆ ಇಂದು ಅಪರಾಹ್ನ ಹಲಗೇರಿ ಪಂಚಾಯತ್ ಹುಸೂರು ಫಾಲ್ಸ್ ಬಳಿ ನಡೆದಿದೆ.
ಶನಿವಾರ-ರವಿವಾರಗಳ ವಾರಾಂತ್ಯದ ನಿಶೇಧಾಜ್ಞೆ ಇದ್ದರೂ ಹುಸೂರು ಜಲಪಾತ ವೀಕ್ಷಣೆಗೆ ಹೆಚ್ಚಿನ ಜನಸಂದಣಿ ಸೇರಿತ್ತು ಈ ಮಾಹಿತಿ ತಿಳಿದ ಸಿದ್ಧಾಪುರ ಪೊಲೀಸರು ಅಪರಾಹ್ನ 4 ಗಂಟೆಯ ಸಮಯಕ್ಕೆ ಹುಸೂರು ಜಲಪಾತದ ಬಳಿ ಬಂದಾಗ ನೂರಾರು ಜನ ಸೇರಿ ಜಲಪಾತ ವೀಕ್ಷಿಸುತ್ತಾ ಮೋಜು-ಮಜಾ ನಡೆಸಿದ್ದರು. ಈ ಬಗ್ಗೆ ಪೊಲೀಸರು ಎಚ್ಚರಿಸಲು ಹೋದಾಗ ಪೊಲೀಸರೊಂದಿಗೆ ಖ್ಯಾತೆ ತೆಗೆದ ಪ್ರವಾಸಿಗರು ಜಗಳಕ್ಕಿಳಿದರು. ಅಷ್ಟರಲ್ಲಿ ಖಚಿತ ಮಾಹಿತಿ ಮೇರೆಗೆ ಜಲಪಾತದ ಬಳಿ ಬಂದ 112 ವಾಹನದಿಂದಿಳಿದ ಪೊಲೀಸರು ಪ್ರವಾಸಿಗರಿಗೆ ಬೆತ್ತದ ರುಚಿ ತೋರಿಸಿದರು. ಈ ಸಮಯದಲ್ಲಿ ಪೊಲೀಸರು, ಪ್ರವಾಸಿಗರೊಂದಿಗೆ ಜಗಳವಾಗಿ ಪೊಲೀಸರು ಕೆಲವರನ್ನು ಬಂಧಿಸಿದರು.
ಒಬ್ಬರೇ ಪೊಲೀಸ್ ಪೇದೆ ಇದ್ದಾಗ ಸಂಘ ಟಿತರಾಗಿ ಜಗಳಕ್ಕೆ ನಿಂತ ಪ್ರವಾಸಿಗರು ಪೊಲೀಸ್ ತುರ್ತು ವಾಹನ ಬರುತ್ತಲೇ ಕಾಲು ಕಿತ್ತರು.ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕೆಲವರನ್ನು ಬಂಧಿಸಿದ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು. ಸ್ಥಳಿಯ ಪೊಲೀಸರೊಂದಿಗೆ ತಗಾದೆ ತೆಗೆದು ಜಗಳಕ್ಕಿಳಿದ ಪ್ರವಾಸಿಗರ ವಿರುದ್ಧ ಪೊಲೀಸರಿಗೆ ಸಹಕರಿಸಿದ ಸ್ಥಳಿಯರು ಸಂಭವನೀಯ ಅವಗಢ ತಪ್ಪಿಸಿದರು.