

ಸಾಗರ ತಾಲೂಕಿನ ತಾಳಗುಪ್ಪಾ ಸಮೀಪದ ಮಳಲವಳ್ಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಕೈಗಾರಿಕಾ ವಸೂಹತು ನಿರ್ಮಾಣಕ್ಕೆ ರಾಜ್ಯ ಸಣ್ಣ ಕೈಗಾರಿಕಾ ನಿಗಮ ಮುಂದಾಗಿದೆ. ಈ ಬಹುನಿರೀಕ್ಷೆಯ ಕೈಗಾರಿಕಾ ವಸಾಹತು ನಿರ್ಮಾಣದ ಬೇಡಿಕೆ ಬಹು ಹಳೆಯದು. ಈಗ ನಿರ್ಮಾಣವಾಗಲಿರುವ ಈ ಮಳಲವಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಥಳ ಕಾಯ್ದಿರಿಸುವಿಕೆ ನಿಗದಿ ಮಾಡಲು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಸಾರ್ವಜನಿಕರಿಂದ ಅರ್ಜಿ ಕರೆದಿದೆ.
ಕೆ.ಎಸ್.ಎಸ್. ಐ.ಡಿ.ಸಿ. ಹುಬ್ಬಳ್ಳಿ ಆಹ್ವಾನಿಸಿರುವ ಈ ಅರ್ಜಿ ಪ್ರಕ್ರೀಯೆ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಮನ್ಮನೆ ಗ್ರಾಮ ಪಂಚಾಯತಿಯ ಮಳಲವಳ್ಳಿಯ ಜನರು ತಮ್ಮೂರಲ್ಲಿ ಕೈಗಾರಿಕಾ ವಸಾಹತು ಮಾಡುವ ಬಗ್ಗೆ ಸಾರ್ವಜನಿಕರ ಅಹವಾಲು ಕೇಳಿಲ್ಲ ಎಂದು ಆಕ್ಷೇಪಿಸಿದ್ದಾರೆ. ಸರ್ಕಾರದ ತೀರ್ಮಾ ನದಂತೆ ಕೆ.ಎಸ್ ಎಸ್.ಐ.ಡಿಎಲ್. ಹುಬ್ಬಳ್ಳಿ ನಿರ್ಮಾಣ ಮಾಡುತ್ತಿರುವ ಕೈಗಾರಿಕಾ ವಸಾಹತು ತಾಲೂಕಿನ ಗಡಿಯಲ್ಲಿ ಮಾಡುವ ಉದ್ಧೇಶದ ಹಿಂದೆ ರಾಷ್ಟ್ರೀಯ ಹೆದ್ದಾರಿ, ರೈಲು ಸಂಪರ್ಕಗಳ ಅನುಕೂಲವನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಪರಿಗಣಿಸಿದೆ. ಹೀಗೆ ನಿಗಮ, ಸರ್ಕಾರಗಳ ಆಸಕ್ತಿಯಿಂದ ಮಂಜೂರಿಯಾಗಿರುವ ಕೈಗಾರಿಕಾ ವಸಾಹತು ಸ್ಥಾಪನೆಯಿಂದ ಸ್ಥಳಿಯರಿಗೆ ಅನುಕೂಲವೋ ಅನಾನುಕೂಲವೋ ಎನ್ನುವ ಜಿದ್ಞಾಸೆ ಪ್ರಾರಂಭವಾಗಿದೆ. ಈ ಹಂತದಲ್ಲಿ ಮಳಲವಳ್ಳಿಯಲ್ಲಿ ಸಭೆ ನಡೆಸಿರುವ ಸ್ಥಳಿಯರು ಇಲ್ಲಿಯ ಕೈಗಾರಿಕಾ ವಸಾಹತು ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲದ ಬಗ್ಗೆ ಆಕ್ಷೇಪಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳುವಳಿಕೆಗಾಗಿ ಸ್ಥಳಿಯವಾಗಿ ಸಮಾಲೋಚನೆ ನಡೆಸಿ ಮುಂದುವರಿಯುವುದಾಗಿ ಸ್ಥಳಿಯರು ತಿಳಿಸಿದ್ದಾರೆ. ಬಹುವರ್ಷಗಳ ಬೇಡಿಕೆಯ ಕೈಗಾರಿಕಾ ವಸಾಹತು ನಿರ್ಮಾಣ ಸಂಪರ್ಕ ಕೊರತೆಯಿಂದ ನೆನೆಗುದಿಗೆ ಬೀಳದಂತೆ ತಡೆಯುವ ಕೆಲಸ ಕೆ.ಎಸ್ ಎಸ್. ಐ.ಡಿ.ಸಿ. ಯಿಂದ ಆಗಬೇಕಾಗಿದೆ.
- ಸಿದ್ಧಾಪುರ ತಾಲೂಕಿನ ಕೈಗಾರಿಕಾ ವಸಾಹತು ನಿರ್ಮಾಣದ ಬೇಡಿಕೆ ಹಳೆಯದು
- ಹಿಂದಿನ ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಮಳಲವಳ್ಳಿ 47 ಎಕರೆ ಸರ್ಕಾರಿ ಪಡಾ ಪ್ರದೇಶವನ್ನು ಬಂಗಾರಮಕ್ಕಿ ದೇವಸ್ಥಾನಕ್ಕೆ ನೀಡಲು ಮುಂದಾಗಿತ್ತು.
- ಮಳಲವಳ್ಳಿಯ ಜನ ಸಂರಕ್ಷಿಸಿಕೊಂಡು ಬಂದ ಈ ಸರ್ಕಾರಿ ಭೂಮಿಯನ್ನು ದೇವಸ್ಥಾನ,ಮಠಕ್ಕೆ ಪರಬಾರೆ ಮಾಡುವುದನ್ನು ಗ್ರಾ.ಪಂ. ಮನ್ಮನೆ ಆಕ್ಷೇಪಿಸಿ ತಡೆದಿತ್ತು.
- ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಅವಶ್ಯ ಭೂಮಿಯನ್ನು ನೀಡಲು ಈ ಹಿಂದೆ ಗ್ರಾ.ಪಂ. ಆಡಳಿತ ಸಮ್ಮತಿಸಿತ್ತು
ಕೆ.ಎಸ್.ಎಸ್. ಐ.ಡಿ.ಎಲ್ ನೀಡುವ ಕೈಗಾರಿಕಾ ಸೈಟ್ ನೀಡಿಕೆಯಲ್ಲಿ ಸ್ಥಳಿಯರಿಗೆ 50% ಮೀಸಲಾತಿ ಕೊಡಬೇಕೆಂಬುದು ಸ್ಥಳಿಯರ ಬೇಡಿಕೆ.
ಸೈಟ್ ಕಾಯ್ದಿರಿಸಿಕೊಳ್ಳುವಿಕೆಯಲ್ಲಿ ಆಡಳಿತ ಪಕ್ಷದ ಪುಡಾರಿಗಳ ಮೇಲುಗೈ ಬಗ್ಗೆ ಸ್ಥಳಿಯರ ವಿರೋಧ
ಈ ಬಗ್ಗೆ ಹೆಚ್ಚಿನ ಮಾಹಿತಿಗೆ 0836-2332006 ಅಥವಾ 8884415796 ಸಂಪರ್ಕಿಸಲು ಕೋರಿಕೆ.



