

ಮೀಸಲಾತಿ ಗೊಂದಲ, ತಕರಾರುಗಳ ನಡುವೆ 2021 ರಲ್ಲೇ ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆಗಳು ನಡೆಯುವುದು ಪಕ್ಕಾ ಆಗಿದೆ. ಈಗಿನ ಮೀಸಲಾತಿ ಬದಲಾಗದಿದ್ದರೆ ಉತ್ತರ ಕನ್ನಡ, ಸಿದ್ದಾಪುರ ಸೇ ರಿದಂತೆ ರಾಜ್ಯದಾದ್ಯಂತ ಈಗಿನ ಮೀಸಲಾತಿ ಪ್ರಕಾರವೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಒಟ್ಟೂ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿರುವ ಹಿಂದೆ ಸ್ವಜಾತಿ ಮತ್ತು ಸಿದ್ದಾಪುರದ ನಂ.1 ಜನಸಂಖ್ಯೆಯ ದೀವರನ್ನು ಹೊಡೆಯುವ ತಂತ್ರವನ್ನು ಆಡಳಿತ ಪಕ್ಷ (ಪ್ರಮುಖರು) ಪ್ರಯೋಗಿಸಿದೆ ಎನ್ನುವ ಆರೋಪಗಳಿವೆ.
ದೀವರು ಗೆಲ್ಲಬಾರದೆಂದು ಹಠಕ್ಕೆ ಬಿದ್ದಿರುವ ಜಿಲ್ಲೆಯ ಸಂಸದರು, ವಿಧಾನಸಭಾಧ್ಯಕ್ಷರ ಯೋಚನೆ, ಯೋಜನೆಯಂತೆ ಮೀಸಲಾತಿ ನಿಗದಿಯಾಗಿದ್ದು ಹಲಗೇರಿ ಕ್ಷೇತ್ರದಲ್ಲಿ ಮಾತ್ರ ದೀವರು ಗೆಲ್ಲುವುದು ಖಾತ್ರಿ ಎನ್ನುವ ಸುದ್ದಿ ಈಗಾಗಲೇ ಹರಿದಾಡು ತ್ತಿದೆ. ಹಲಗೇರಿಯ ದೀವರ ಶಕ್ತಿ ಅರಿತಿರುವ ಬಿ.ಜೆ.ಪಿ. ಹಲಗೇರಿ ಜಿ.ಪಂ. ಕ್ಷೇತ್ರಕ್ಕೆ ಹಾಲಿ ಜಿ.ಪಂ. ಸದಸ್ಯ ನಾಗರಾಜ್ ನಾಯ್ಕ ಅಥವಾ ಜಿ.ಪಂ. ಮಾಜಿ ಸದಸ್ಯ ಈಶ್ವರ ನಾಯ್ಕ ಮನ್ಮನೆಯವರನ್ನು ಪರಿಗಣಿಸುವ ಸಾಧ್ಯತೆ ಬಗ್ಗೆ ಗಾಳಿಸುದ್ದಿಗಳು ತೇಲಾಡುತ್ತಿವೆ. ಈ ವರ್ತಮಾನದ ಮಧ್ಯೆ ತಿಮ್ಮಪ್ಪ ಮಡಿವಾಳ (ತಿಮ್ಮಪ್ಪ ಎಂ.ಕೆ.) ಮತ್ತು ವಿಜೇತ್ ಗೌಡರ್ ಕೂಡಾ ಬಿ.ಜೆ.ಪಿ. ಸಂಭವನೀಯ ಅಭ್ಯರ್ಥಿಗಳೆಂದು ಹೇಳಲಾಗುತ್ತಿದೆ.
ಈ ಕ್ಷೇತ್ರ ಪ್ರಸ್ತುತ ರಾಜಕೀಯ ವ್ಯವಹಾರಗಳಲ್ಲಿ ಜೆ.ಡಿ.ಎಸ್. ಆಟಕ್ಕುಂಟು ಲೆಕ್ಕಕ್ಕಿಲ್ಲ ಹಾಗಾಗಿ ಬಿ.ಜೆ.ಪಿ. ಗೆ ಸಮರ್ಥ ಸ್ಪರ್ಧಿ ಕಾಂಗ್ರೆಸ್ ಮಾತ್ರ ಹಾಗಾಗಿ ಕಾಂಗ್ರೆಸ್ ನಲ್ಲಿ ಉಮೇದುವಾರರ ಸಂಖ್ಯೆ ಹೆಚ್ಚಿದ್ದು ನಾಶಿರ್ ಖಾನ್, ಸಿ.ಆರ್. ನಾಯ್ಕ ಸೇರಿದಂತೆ ಕೆಲವರು ಸ್ಫರ್ಧಿಸುವ ಉತ್ಸಾಹದಲ್ಲಿದ್ದರೂ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಗೆಲ್ಲುವ ಅಭ್ಯರ್ಥಿ ಎನ್ನುವ ಕಾರಣದಿಂದ ವಸಂತ ನಾಯ್ಕರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಯೋಚಿಸಿದೆ ಎನ್ನುವ ಸುದ್ದಿಇದೆ. ಇವರ ಮಧ್ಯೆ ರಾಜ್ಯ ರೈತ ಸಂಘದ ತಾಲೂಕಾ ಅಧ್ಯಕ್ಷ ವೀರಭದ್ರ ನಾಯ್ಕ ಕೂಡಾ ಈ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಎನ್ನಲಾಗುತ್ತಿದೆ.
ಇದು ಪಕ್ಕಾ ಜಿ.ಪಂ. ಚುನಾವಣೆಯ ವಿಚಾರವಾದರೆ… ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಪಕ್ಷದ ಬ್ಲಾಕ್ ಅಧ್ಯಕ್ಷತೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನುವ ಸುದ್ದಿ ಈಗ ಸದ್ದು ಮಾಡುತ್ತಿದೆ. ಕಳೆದ ಒಂ ದು ವರ್ಷದಿಂದ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳನ್ನು ಚುರುಕು ಮಾಡಿ ಪಕ್ಷದ ಸಂಘಟನೆ, ಗ್ರಾ.ಪಂ. ಚುನಾವಣೆಗಳ ಯಶಸ್ಸುಗಳ ನಂತರ ಕೂಡಾ ಪಕ್ಷದಿಂದ ಪ್ರೋತ್ಸಾಹ, ಉತ್ತೇಜನ ದೊರೆಯದ ಹಿನ್ನೆಲೆಯಲ್ಲಿ ವಸಂತ ನಾಯ್ಕ ಜಿಲ್ಲಾ ಪಂಚಾಯತ್ ಚುನಾವಣೆ ಅಥವಾ ಪಕ್ಷದ ಅಧ್ಯಕ್ಷತೆ ಬಗ್ಗೆ ಆಸೆ, ನಿರೀಕ್ಷೆ ಕಳೆದುಕೊಂಡಿದ್ದು ಪಕ್ಷದ ಕೆಲವರ ವರ್ತನೆ ವಸಂತ ನಾಯ್ಕರ ಆಸಕ್ತಿ-ಉತ್ಸಾಹಳಿಗೆ ತಣ್ಣೀರೆರಚುತ್ತಿದೆ ಎನ್ನುವ ವಾಸ್ತವ ಪಕ್ಷದ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಆದರೆ ವಸಂತ ನಾಯ್ಕ ಈ ವಿದ್ಯಮಾನಗಳ ನಡುವೆ ಪಕ್ಷದ ತಾಲೂಕಾಧ್ಯಕ್ಷತೆಗೆ ರಾಜೀನಾಮೆ ನೀಡಲು ಮುಂದಾಗಿರುವ ಕಾರಣ ಬೇರೆಯೇ ಇದೆ ಎನ್ನಲಾಗುತ್ತಿದೆ.
ಕೋವಿಡ್ ಎರಡನೇ ಅಲೆಯಲ್ಲಿ ಕೋವಿಡ್ ನಿಂದ ಬಳಲಿದ ವಸಂತ ನಾಯ್ಕ ಕುಟುಂಬ ಮನೆಯ ಹಿರಿಯ ಲಕ್ಷ್ಮಣ ನಾಯ್ಕರನ್ನು ಕಳೆದುಕೊಂಡಿದೆ. ಕಳೆದ ಬೇಸಿಗೆಯಲ್ಲಿ ಕೋವಿಡ್ ನಿಂದ ನಿಧನರಾದ ವಸಂತ ನಾಯ್ಕರ ತಂದೆ ಲಕ್ಷ್ಮಣ ನಾಯ್ಕ ಕೂಡಾ ಕಾಂಗ್ರೆಸ್ ಮುಖಂಡರಾಗಿದ್ದವರೇ. ವಸಂತನಾಯ್ಕರ ಕುಟುಂಬದ ಆಧಾರಸ್ಥಂಬದಂತಿದ್ದ ಲಕ್ಷ್ಮಣ ನಾಯ್ಕ ನಿಧನದ ನಂತರ ತೀವೃವಾಗಿ ನೊಂದಿದ್ದ ವಸಂತ ನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ರಾಜೀನಾಮೆ ನೀಡಿದ ಪತ್ರವನ್ನು ಕುದ್ದು ಹೋಗಿ ನೀಡಿದ್ದರಂತೆ. ಈ ರಾಜೀನಾಮೆ ಪತ್ರ ತಿರಸ್ಕರಿಸಿ ಮರಳಿಸಿದ ಭೀಮಣ್ಣ ನಾಯ್ಕ ಮನುಷ್ಯನ ಹುಟ್ಟು ಸಾವು ಸಾಮಾನ್ಯ. ತಂದೆಯ ಸಾವಿನ ಕಾರಣಕ್ಕೆ ರಾಜೀನಾಮೆ ನೀಡುವುದು ಬೇಡ ಎಂದು ತಿಳಿಹೇಳಿದರಂತೆ. ಈ ವಿಚಾರವನ್ನು ಇತ್ತೀಚೆಗೆ ಸಿದ್ಧಾಪುರದಲ್ಲಿ ನಡೆದ ಕೋವಿಡ್ ನಿಂದ ನಿಧನರಾದ ಕಾಂಗ್ರೆಸ್ ಮುಖಂಡರ ಶೃದ್ಧಾಂಜಲಿ ಸಭೆಯಲ್ಲಿ ಭೀಮಣ್ಣ ನಾಯ್ಕರೇ ಹೇಳಿದ್ದರು. ಪಕ್ಷ, ಸಂಘಟನೆಯಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ವಸಂತ ನಾಯ್ಕ ಜಿ.ಪಂ. ಚುನಾವಣೆ, ಪಕ್ಷದ ತಾಲೂಕುಅಧ್ಯಕ್ಷತೆ ವಿಚಾರದಲ್ಲಿ ಹಿಂದಿನ ಉತ್ಸಾಹ, ಉಮೇದಿಯಲ್ಲಿರದಿರುವುದಕ್ಕೆ ಪಕ್ಷದ ಕೆಲವು ಆಂತರಿಕ ವ್ಯವಹಾರಗಳೂ ಕೂಡಾ ಕಾರಣ ಎನ್ನಲಾಗುತ್ತಿದೆ!.
