ಪತ್ರಕರ್ತರು ಮತ್ತು ಪತ್ರಿಕೋದ್ಯಮ…..

ಪ್ರತಿಯೊಬ್ಬ ವರದಿಗಾರ (every one is reporter) ಕಲ್ಪನೆ ಈಗ ವಾಸ್ತವವಾಗಿದೆ. ಸಾಮಾಜಿಕ ಜಾಲತಾಣ ಬಂದ ಮೇಲೆ ಪ್ರತಿಯೊಬ್ಬ ವರದಿಗಾರ ಕನಸು ನನಸಾಗಿದೆ. ಹಾಗಾಗಿ ಸಾಹಿತ್ಯ ಬರವಣಿಗೆ ಸಾಮಾನ್ಯನಿಗಲ್ಲ ಎನ್ನುವ ವೈದಿಕ ಮಿಥ್ಯ ಅರ್ಥ ಕಳೆದುಕೊಂಡಿದೆ. ವರದಿಗಾರನಲ್ಲದ ಬರಹಗಾರ ಉತ್ತಮ ವರದಿಗಾರ, ಉತ್ತಮ ವರದಿಗಾರ ಸಾಮಾನ್ಯ ಬರಹಗಾರನಾಗಿ ಬದಲಾಗಿದ್ದಾನೆ.

ಹೀಗಾಗಲು ಪ್ರಮುಖ ಕಾರಣ ತಂತ್ರಜ್ಞಾನವಾದರೂ ಪತ್ರಿಕೋದ್ಯಮದಲ್ಲಿ ನುಸುಳಿಕೊಂಡ ಪಕ್ಷಪಾತ, ಜಾತೀವಾದ, ಧರ್ಮಾಂಧತೆಗಳೂ ಇದಕ್ಕೆ ಕೊಡುಗೆ ನೀಡಿವೆ. ಪತ್ರಕರ್ತರಾಗಲು ವಿದ್ಯಾರ್ಹತೆ ಅಗತ್ಯವಿಲ್ಲ,ವರದಿಗಾರನಾಗಲು ಕನಿಷ್ಟ ಶಿಕ್ಷಣ ಕಡ್ಡಾಯವಲ್ಲ. ಈ ಕಾರಣಕ್ಕೆ ಪತ್ರಿಕೋದ್ಯಮದೊಳಗೆ ನುಸುಳಿಕೊಂಡ ಅಡ್ಡ ಕಸುಬಿಗಳು ಸಂಘ- ಸಂಘಟನೆ ಕಟ್ಟಿಕೊಂಡು ರಾಜಕೀಯ ಮಾಡುವ ಪ್ರವೃತ್ತಿ ಈಗಿನ ಪತ್ರಿಕೋದ್ಯಮದ ಕೊಳಕಾಗಿ ಗೋಚರಿಸುತ್ತಿದೆ.

ಭಾಷೆ, ಸಂವಹನ, ಬರವಣಿಗೆ, ಸಂಹಿತೆ ಮರೆಯಾಗಿ ವೇಗ-ಓಲೈಕೆ ಹೆಚ್ಚುತ್ತಿರುವ ಮಾಧ್ಯಮದಲ್ಲಿ ಜಾತಿ ವಿಜೃಂಬಿಸುತ್ತಿರುವುದು ಮಾಧ್ಯಮದ ಹಾದಿತಪ್ಪುವಿಕೆಗೆ ಕಾರಣವಾಗುತ್ತಿದೆ. ಸಂಬಂಧ, ಜಾತಿ- ಪಕ್ಷಪಾತಗಳ ನೆರವಿನಿಂದ ಪತ್ರಕರ್ತರಾದವರ ಸಂಖ್ಯೆ ಶಿಕ್ಷಣ, ಅರ್ಹತೆ, ಯೋಗ್ಯತೆ ಇಂದ ಪತ್ರಕರ್ತರಾದವರ ಸಂಖ್ಯೆಗಿಂತ ಹೆಚ್ಚಿರುವುದು ಇಂದಿನ ದೋಷ- ಮತ್ತು ವಾಸ್ತವ.

ಉತ್ತರ ಕನ್ನಡ ಜಿಲ್ಲೆಯ ಜೊಯಡಾ ತಾಲೂಕಿಗೆ ಎರಡ್ಮೂರು ಪತ್ರಿಕೆಗಳನ್ನು ಬಿಟ್ಟು ಮತ್ಯಾವ ಕನ್ನಡ ಪತ್ರಿಕೆಗಳೂ ಬರುತ್ತಿಲ್ಲ. ಅದರೆ ಅಂಥ ಹಳ್ಳಿಯಂಥ ತಾಲೂಕು ಕೇಂದ್ರದಲ್ಲೂ ಮೇಲ್ವರ್ಗದ7 ಜನ ವ್ಯಕ್ತಿಗಳು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಅವರಲ್ಲಿ ಬಹುತೇಕರು ಒಂದೇ ಜಾತಿಯವರು! ಎಂದರೆ….. ತೀರ್ಮಾನ ನಿಮಗೆ ಬಿಟ್ಟದ್ದು.

(ಇದು ರಾಜ್ಯದ ಮೂಲೆಯ ಅತಿ ಹಿಂದುಳಿದ ತಾಲೂಕು)

ಇದೇ ರೀತಿ ಒಂದೆರಡು ದಶಕಗಳ ಹಿಂದೆ ಶಿರಸಿಯಿಂದ ಪ್ರಕಟವಾಗುತಿದ್ದ ಮೂರು ಸ್ಥಳಿಯ ಪತ್ರಿಕೆಗಳಿಂದ 2 ಪತ್ರಿಕೆಗಳ ಎರಡು ಡಜನ್ ಪತ್ರಕರ್ತರು! ಜಿಲ್ಲಾ ಕಾರ್ಯನಿರತ ಪತ್ರಕರ್ತರೂ ಅವರಲ್ಲೂ ಬಹುತೇಕರು ಒಂದೇ ಜಾತಿಯವರೂ ಆಗಿದ್ದರು. ಈ ಷಡ್ಯಂತ್ರ, ಕುತಂತ್ರದ ಹಿಂದಿನ ರೂವಾರಿ ಹಿಂದುತ್ವವಾದಿ ಬಿ.ಜೆ.ಪಿ. ಏಜೆಂಟ್ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ಆಗಿದ್ದುದು ಈಗ ಇತಿಹಾಸ.

ಹೀಗೆ ಜಿಲ್ಲಾ ಕೇಂದ್ರವಲ್ಲದ ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಷ್ಠಾಪಿಸಿಕೊಂಡು ಆ ಸಂಘಕ್ಕೆ ಸದಸ್ಯರಾಗಲು ಜನಿವಾರವೇ ಪ್ರಧಾನ ಅರ್ಹತೆ ಅದಿರದಿದ್ದರೆ ಜನಿವಾರ ತೊಳೆಯುವ, ಅದರ ರಕ್ಷಣೆ ಮಾಡುವ ಗುಲಾಮರನ್ನು ನಾಮಕಾವಸ್ಥೆ ಸದಸ್ಯರನ್ನಾಗಿಸಿಕೊಂಡು ಶಿರಸಿಯನ್ನು ಅಕ್ಷರ ಹಾದರದ ಅಡ್ಡೆಯನ್ನಾಗಿಸಿಕೊಳ್ಳುವಲ್ಲಿ ಕೆಲಸ ಮಾಡಿದ್ದು ರಾಜ್ಯದ ಪ್ರಮುಖ ಪತ್ರಕರ್ತರ ಜಾತಿಪ್ರೇಮ ಎನ್ನುವುದಕ್ಕೆ ವಿಫುಲ ದಾಖಲೆಗಳಿವೆ.

ಈ ಅವ್ಯವಸ್ಥೆ, ಅನಾಚಾರಗಳನ್ನೇ ತಮ್ಮ ಧ್ಯೇಯ- ನಿಷ್ಠೆಯನ್ನಾಗಿಸಿಕೊಂಡಿರುವ ಹೆಚ್ಚಿನ ಉತ್ತರ ಕನ್ನಡ ಜಿಲ್ಲೆಯ ಪರ್ತಕರ್ತರು ಕನಿಷ್ಟ ಪದವಿಧರ ರಲ್ಲದಿರುವುದು ಈ ಅವ್ಯವಸ್ಥೆಗೆ ಕಾರಣ. ಇಂಥ ಪತ್ರಕರ್ತರ ಸಂಘ, ಕೆಲವರಿಗೆ ಮಾಧ್ಯಮದ ಗುರುತಿನ ಚೀಟಿ ಇವುಗಳ ಸದಸ್ಯತ್ವ ಬಿಟ್ಟರೆ ಅವರಿಗೆ ಯೋಗ್ಯತೆ, ಅರ್ಹತೆಗಳೇನು ಎನ್ನುವುದು ತಿಳಿದಿರುವುದಿಲ್ಲ. ಇಂಥ ಜಾತ್ಯಾಂಧ- ಧರ್ಮಾಂಧ ಅವಿವೇಕಿಗಳ ಸಂಘವೇ ಬೇಡ ಎಂದು ಹೊರಗೆ ನಿಂತು ಕೆಲಸ ಮಾಡುತ್ತಿರುವ ಕೆಲವು ಅರ್ಹ ಪತ್ರಕರ್ತರು ಉತ್ತರ ಕನ್ನಡ ಜಿಲ್ಲೆಯ ಮಾನ ಉಳಿಸಿರುವ ದೃಷ್ಟಾಂತಗಳೇ ಹೆಚ್ಚು.

ಜಾತಿ, ಧರ್ಮ. ದೇವರು, ನಂಬಿಕೆ ಹೆಸರಲ್ಲಿ ಮೂರನೇ ದರ್ಜೆ ರಾಜಕಾರಣ ಮಾಡುವ ಮತಾಂಧರಿಗೂ, ಮಾಧ್ಯಮದ ಹೆಸರಿನಲ್ಲಿ ಬದುಕು,ಗುರುತು ಉಳಿಸಿಕೊಂಡಿರುವ ಪತ್ರಕರ್ತರ ವೇಷದ ಕೋಮುವಾದಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಇಂಥ ಕೊಳಕು ವ್ಯವಸ್ಥೆ ಪೋಶಿಸುವ ರಾಷ್ಟ್ರೀಯವಾದ, ಹಿಂದುತ್ವಗಳು ಬ್ರಾಹ್ಮಣ್ಯದ ಉದಾಹರಣೆಗಳಲ್ಲದೆ ಮತ್ತೇನು? ಇದನ್ನು ಬ್ರಾಹ್ಮಣ್ಯದ ಅತಿರೇಕ, ಅವಿವೇಕ, ಅನಾಚಾರ ಎಂದರೆ ಜಾತಿಯಿಂದ ಬ್ರಾಹ್ಮಣರಾದ ನಮ್ಮ ಸ್ನೇಹಿತರ್ಯಾರು ಅನ್ಯತಾ ಭಾವಿಸಬೇಕಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *