

ಸಿದ್ಧಾಪುರ ತಾಲೂಕಿನ ಮನ್ಮನೆ ಮಳಲವಳ್ಳಿಯಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ, ಉದ್ಯಮ ಸ್ಥಾಪನೆ ಸೇರಿದಂತೆ ಎಲ್ಲಾ ಅನುಕೂಲಗಳಿಗೆ ಪ್ರತಿಶತ 50 ಕ್ಕಿಂತ ಹೆಚ್ಚು ಸ್ಥಳಿಯರಿಗೆ ಆದ್ಯತೆ ನೀಡಲು ಮಳಲವಳ್ಳಿ ಗ್ರಾಮ ಸಮೀತಿ ಆಗ್ರಹಿಸಿದೆ.
ಸೋಮುವಾರ ಇಲ್ಲಿಯ ಈಶ್ವರ ದೇವಸ್ಥಾನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಗ್ರಾಮ ಸಮೀತಿ ಅಧ್ಯಕ್ಷ ಗೋಪಾಲ ನಾಯ್ಕ, ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ, ಧರ್ಮಪ್ಪ ನಾಯ್ಕ, ಸ್ವಾಮಿ ನಾಯ್ಕ ಮತ್ತು ಗೋಪಾಲ ನಾಯ್ಕ ಸೇರಿದ ಪ್ರಮುಖರು ಮಳಲವಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಗ್ರಾಮಸ್ಥರ ವಿರೋಧವಿತ್ತು ಆದರೆ ಸರ್ಕಾರದ ಸದುದ್ದೇಶದ ಯೋಜನೆಗೆ ವಿರೋಧ ಮಾಡುವುದಕ್ಕಿಂತ ನಮ್ಮ ಬೇಡಿಕೆ ಈಡೇರಿಸಲು ಬೇಡಿಕೆ ಇಡುವುದೇ ಸರಿಯಾದ ಕ್ರಮ. ಮಳಲವಳ್ಲಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣವಾದರೆ ಇಲ್ಲಿಯ ಕೈಗಾರಿಕಾ ಘಟಕ ಸ್ಥಾಪನೆ, ಉದ್ಯೋಗ, ಕೈಗಾರಿಕಾ ಘಟಕಗಳ ಪ್ರದೇಶ ನಿಗದಿ ಯಾವುದೇ ಅವ ಕಾಶ, ಅನುಕೂಲಕ್ಕೆ ಪ್ರತಿಶತ 50 ಕ್ಕಿಂತ ಹೆಚ್ಚು ಸ್ಥಳಿಯರಿಗೆ ಅವಕಾಶವಿರಬೇಕು. ಸ್ಥಳಿಯ ಪರಿಸರ, ಈ ಪ್ರದೇಶದ ಹಿತಾಸಕ್ತಿ, ಜನರ ಅನುಕೂಲಕ್ಕೆ ವಿರುದ್ಧ ವಾಗಿ ಏನೂ ನಡೆಯಬಾರದು. ಗ್ರಾಮಸ್ಥರು ಸಂರಕ್ಷಿಸಿರುವ ಯೋಜಿತ ಕೈಗಾರಿಕ ಪ್ರದೇಶದ 25% ಭೂಮಿಯನ್ನು ಸ್ಥಳಿಯರಿಗೆ ಸಾರ್ವಜನಿಕ ಅಗತ್ಯಗಳಿಗೆ ಬಿಟ್ಟುಕೊಡಬೇಕು, ಉದ್ಯಾನವನ, ಕ್ರೀಂಡಾಂಗಣ ಸೇರಿದ ಗ್ರಾಮದ ಅವಶ್ಯಕತೆಗಳನ್ನು ಪೂರೈಸಿ ನಂತರ ಕೈಗಾರಿಕಾ ವಸಾಹತು ಸ್ಥಾಪನೆ ಉದ್ದೇಶದ ನಿಗದಿತ ಕೆಲಸ ಮಾಡಬೇಕು ಎಂದು ಗ್ರಾಮದ ನಿರ್ಧಾರವನ್ನು ವಿವರಿಸಿದರು.
ಈ ಸಂರ್ಭದಲ್ಲಿ ಸ್ಥಳಿಯರಿಗೆ ಕೈಗಾರಿಕಾ ಪ್ರದೇಶದ ಉದ್ದೇಶ, ಅನುಕೂಲಗಳ ಬಗ್ಗೆ ಸಮಾಜಮುಖಿ ಸಮೂಹದ ಮುಖ್ಯಸ್ಥ ಕೋಲಶಿರ್ಸಿ ಕನ್ನೇಶ್ ಮತ್ತು ಪತ್ರಕರ್ತ ಸುರೇಶ ಕಡಕೇರಿ ಮಾಹಿತಿ ನೀಡಿದರು. ತಾಲೂಕಿನ ಕೈಗಾರಿಕಾ ಪ್ರದೇಶದ ನಿರ್ಮಾಣ. ಸ್ಥಾಪನೆ ಬಗ್ಗೆ ವಿರೋಧ ಬೇಡ ಆದರೆ ಗ್ರಾಮ ಮತ್ತು ಗ್ರಾಮದ ಹಿತಾಸಕ್ತಿಗೆ ಪೂರಕವಾಗಿ ಆಗಬೇಕಾದ ಕೆಲಸ, ಅಭಿವೃದ್ಧಿಯ ವಿಚಾರದಲ್ಲಿ ನಿರ್ಬಂ ಧ ಹೇರುವುದು ನಿಮ್ಮ ಹಕ್ಕು ಜೊತೆಗೆ ಸ್ಥಳಿಯರೂ ಕೂಡಾ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಕನ್ನೇಶ್ ವಿನಂತಿಸಿದರು.
ಕೈಗಾರಿಕಾ ಪ್ರದೇಶ ನಿರ್ಮಾಣದಿಂದ ಮಳಲವಳ್ಳಿ, ಮನ್ಮನೆ ಗ್ರಾಮ ಪಂಚಾಯತ್ ಗಳಿಗೆ ಅನುಕೂಲವಿದೆ ಆದರೆ ಸ್ಥಳಿಯರು ಸಂಘಟಿತರಾಗಿ ತಮ್ಮ ಬೇಡಿಕೆ ಕೇಳಿ ಪಡೆಯಬೇಕು ಎಂದು ಸುರೇಶ್ ಕಡಕೇರಿ ಮಾಹಿತಿ ನೀಡಿದರು. ಗ್ರಾಮ ಸಮೀತಿ ಅಧ್ಯಕ್ಷ ಗೋಪಾಲ ನಾಯ್ಕರ ಅಧ್ಯಕ್ಷತೆಯಲ್ಲಿ ಸೇರಿದ ಗ್ರಾಮದ ಹಿರಿಯರು, ಪ್ರಮುಖರು ಕೈಗಾರಿಕಾ ಪ್ರದೇಶ ಸ್ಥಾಪನೆಗೆ ವಿರೋಧ ಮಾಡುತಿದ್ದ ನಾವು ಗಣ್ಯರ ಸಮಾಜಾಯಿಸಿಯಿಂದ ಹಿಂದೆ ಸರಿದಿದ್ದೇವೆ. ಸರ್ಕಾರ, ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮ ನಮ್ಮ ಹಿತಾಸಕ್ತಿ ಕಾಯದಿದ್ದರೆ ನಮ್ಮ ಸಹಕಾರ ಸಿಗುವುದಿಲ್ಲ ಎಂದು ಎಚ್ಚರಿಸಿದರು.




