ಸಾರ್ವಜನಿಕರ ಸಹಕಾರ, ಸಹಭಾಗಿತ್ವ ಇಲ್ಲದೆ ಸರ್ಕಾರದ ಯೋಜನೆಗಳ ಯಶಸ್ಸು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜನರ ತೆರಿಗೆ ಹಣದ ಮುಕ್ಕಾಲು ಭಾಗ ನೌಕರರ ವೇತನ, ಪಿಂಚಣಿ, ಸಾಲದಮೊತ್ತಕ್ಕೆ ಕಟ್ಟಬೇಕಾಗಿರುವ ಬಡ್ಡಿಗೆ ಹೋಗುತ್ತದೆ ಎಂದಿದ್ದಾರೆ.
ಸಿದ್ಧಾಪುರದಲ್ಲಿ ಜಲಜೀವನ್ ಮಿಷನ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಜಲಜೀವನ್ ಮಿಶನ್ ಸೇರಿದಂತೆ ಕೆಲವು ಸರ್ಕಾರಿ ಯೋಜನೆಗಳಿಗೆ ಸಾರ್ವಜನಿಕರ ವಂತಿಕೆ ಅನಿವಾರ್ಯ ಜನತು ಕೂಡಾ ತಮ್ಮ ವಂತಿಗೆ, ಸಹಕಾರ ಸಹಭಾಗಿತ್ವ ವಿಲ್ಲದೆ ಎಲ್ಲದನ್ನೂ ಸರ್ಕಾರವೇ ಮಾಡಬೇಕು ಎಂದು ಕಾಯಬಾರದು. ಸರ್ಕಾರ ನಡೆಸುವವರಿಗೆ ಸರ್ಕಾರ, ವ್ಯವಸ್ಥೆಯ ವಾಸ್ತವ ಅರಿವಿರುತ್ತದೆ. ಕರ್ನಾಟಕದಲ್ಲಿ ಪ್ರತಿಶತ 70 ಕ್ಕಿಂತ ಹೆಚ್ಚು ಆದಾಯ ನಿರಂತರ ಕರ್ಚಿಗೇ ವೆಚ್ಚವಾದರೆ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಹೊಂದಿಸುವುದು ಹ್ಯಾಗೆ? ಎಂದು ಪ್ರಶ್ನಿಸಿದ ವಿಧಾನಸಭಾ ಅಧ್ಯಕ್ಷರು ಸಾರ್ವಜನಿಕರು ತಮ್ಮ ಕರ್ತವ್ಯ ಪಾಲಿಸಿದಾಗ ಸರ್ಕಾರ ತನ್ನ ಜವಾಬ್ಧಾರಿ ನಿರ್ವಹಿಸಲು ಸಾಧ್ಯ ಸರ್ಕಾರ, ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಸಹಕಾರ ಬೇಕು. ಎಂದರು.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಬೇಕು- ಬೇಡಿಕೆಗಳನ್ನು ಕೇಳಿ ಸಹಕಾರದಿಂದ ಕೆಲಸ ಮಾಡದಿದ್ದರೆ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಗೆ ಪೂರಕವಾಗುವುದಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಹೊಂದಾಣಿಕೆಯಿಂದ ಅಭಿವೃದ್ಧಿ ಸಾಧ್ಯವಾಗದಿದ್ದರೆ ಆ ವ್ಯವಸ್ಥೆ ಮುಂದುವರಿಯುವುದೇ ಕಷ್ಟ ಎಂದು ತಿಳಿಹೇಳಿದ ವಿಶ್ವೇಶ್ವರ ಹೆಗಡೆ ಉದ್ಯೋಗಖಾತ್ರಿ ಯೋಜನೆಯಲ್ಲಿ ಸಾಧನೆ ಮಾಡಿದರೆ ಗ್ರಾಮೀಣ ಜನರ ಬದುಕು ಸುಧಾರಿಸಬಲ್ಲದು ಎಂದರು.