

ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ- ಸಾಗರದ ಗಜಾನನ ಶರ್ಮಾರ ಕಾದಂಬರಿ ಚೆನ್ನಭೈರಾದೇವಿ 2 ನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮ ಸಿದ್ಧಾಪುರ ರಾಘವೇಂದ್ರಮಠದ ಸಭಾಂಗಣದಲ್ಲಿ ಜುಲೈ 17 ರ ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ನಡೆಯಲಿದೆ ಎಂದು ಪತ್ರಕರ್ತ ಗಂಗಾಧರ ಕೊಳಗಿ ತಿಳಿಸಿದ್ದಾರೆ. ಪ್ರಯೋಗ ಸ್ವಯಂ ಸೇವಾ ಸಂಸ್ಥೆ ಮತ್ತು ಸಂಸ್ಕೃತಿ ಸಂಪದ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಿದ್ಧಾಪುರದ ಹೇರೂರು ಮತ್ತು ಸೋವಿನಕೊಪ್ಪಗಳಲ್ಲಿ ಪೊಲೀಸ್ ಬೀಟ್ ಸಭೆಗಳು ನಡೆದವು.
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ದಿಂದ ಕರೊನಾ ಸಂಕಷ್ಟದಲ್ಲಿರುವ ಸಂಘದ ವ್ಯಾಪ್ತಿಯ ಆಯ್ದ ೨೨ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಅವರವರ ಮನೆಗೆ ತೆರಳಿ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಅಗ್ಗೇರೆ, ಉಪಾಧ್ಯಕ್ಷೆ ಇಂದಿರಾ ಜಿ.ಹೆಗಡೆ, ಸದಸ್ಯರಾದ ಅನಂತ ಹೆಗಡೆ ಹೊಸಗದ್ದೆ, ಅನಂತ ಹೆಗಡೆ ಗೊಂಟನಾಳ, ಮಂಜುನಾಥ ನಾಯ್ಕ ತೆಂಗಿನಮನೆ, ವಿ.ಎಚ್.ಗೌಡ ಮಾದ್ಲಮನೆ, ಎ.ಆರ್.ಹೆಗಡೆ, ಸುಮಾ ಹೆಗಡೆ,ಬೀಟ್ ಪೊಲೀಸ್ ಜಾವೇದ್ ಅಹಮದ್ ಶೇಖ್, ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ ಹಾಗೂ ಸಿಬ್ಬಂದಿಗಳಿದ್ದರು.



