

ಕಳೆದ ಹಲವು ವರ್ಷಗಳಿಂದ ಸಿದ್ಧಾಪುರ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಉಪತಹಸಿಲ್ಧಾರರಾಗಿದ್ದ ಕ್ಯಾದಗಿಯ ನಾಗರಾಜ್ ನಾಯ್ಕಡ್ ಪದೋನ್ನತಿ ಹೊಂದಿ ಹೊನ್ನಾವರದ ಗ್ರೇಡ್ 2 ತಹಸಿಲ್ಧಾರರಾಗಿ ಪದೋನ್ನತಿ ಹೊಂದಿ ವರ್ಗಾವಣೆಯಾಗಿದ್ದಾರೆ. ಅವರಿಗೆ ಸಿದ್ಧಾಪುರ ತಹಸಿಲ್ಧಾರ ಕಛೇರಿಯಲ್ಲಿ ಗೌರವಿಸಿ, ಬೀಳ್ಕೊಡಲಾಯಿತು.
ಸ್ಥಳಿಯರಾಗಿದ್ದ ನಾಗರಾಜ್ ನಾಯ್ಕಡ್ ಸ್ಫಂದನಶೀಲತೆ, ವಿನಯ, ಕ್ರೀಯಾಶೀಲತೆಗಳಿಂದ ಹೆಸರು ಮಾಡಿದ್ದರು.
ಚೆನ್ನಬೈರಾದೇವಿ ಕಾದಂಬರಿ ಬಿಡುಗಡೆ- ಡಾ. ಗಜಾನನ ಶರ್ಮರ ಚೆನ್ನಬೈರಾದೇವಿ ಕಾದಂಬರಿಯ ಎರಡನೇ ಮುದ್ರಣ ಇಂದು ಸಿದ್ದಾಪುರ ರಾಘವೇಂದ್ರಮಠ ಸಭಾಂಗಣದಲ್ಲಿ ಬಿಡುಗಡೆಯಾಯಿತು. ಈ ಕಾದಂಬರಿ ಬಿಡುಗಡೆ ಮಾಡಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾಜದ ಸಮತೋಲನಕ್ಕೆ ಸಾಹಿತ್ಯ,ಸಾಂಸ್ಕೃತಿಕತೆಗಳು ಬೇಕು. ಅಂಥ ಕೆಲಸ ಮಾಡುವ ಜನರ ಸಮೂಹ ಬೆಳೆಯಬೇಕು ಎಂದು ಹಾರೈಸಿದರು.







