

ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್: ತಮ್ಮ ಬಗಲಿನಲ್ಲಿಯೇ ಬೆಂಕಿ ಇದ್ದಿದ್ದನ್ನು ಅರಿತಿರಲಿಲ್ಲ ‘
ರಾಜ್ಯ ರಾಜಕಾರಣದಲ್ಲಿ ಸದ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಸಂಚಲನ ಮೂಡಿಸಿದೆ. ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ

ಜು.22 ರ ಸಂಪುಟ ಸಭೆ ನಂತರದ ಶಾಸಕಾಂಗ ಸಭೆಗಳ ನಂತರ ರಾಜ್ಯದ ಮುಖ್ಯಮಂತ್ರಿ ಬದಲಾಗಲಿದ್ದು ಸಂಘ ಪರಿವಾರ ತನ್ನ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಂಸದ ಜೋಷಿ ಹೆಸರನ್ನು ಮುಂದುಮಾಡಿದೆ. ಇವರ ಜೊತೆ ಜಾತಿ ಸಮೀಕರಣದ ಆಧಾರದಲ್ಲಿ ಅರವಿಂದ ಬೆಲ್ಲದ ಮತ್ತು ಉಪಮುಖ್ಯಮಂತ್ರಿ ಅಶ್ವಥನಾರಾಯಣ ಹೆಸರುಗಳೂ ಕೇಳಿ ಬಂದಿವೆ.
ಶಿರಸಿಯ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ, ಸುರೇಶ್ ಕುಮಾರ ಮತ್ತು ಪ್ರಲ್ಹಾದ ಜೋಶಿಗಳ ಹೆಸರು ಸಂಘ ಪರಿವಾರದ ಆಯ್ಕೆ ಆದರೆ ಮಂತ್ರಿಗಳಾಗಿ ವಿಫಲರಾದ ಅನಂತಕುಮಾರ ಹೆಗಡೆ ಮತ್ತು ಸುರೇಶ್ ಕುಮಾರ ಹೆಸರನ್ನು ಪಕ್ಕಕ್ಕಿಟ್ಟು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜೋಶಿ ಹೆಸರನ್ನು ಮುಂದೆ ಮಾಡಿದೆ ಬ್ರಾಹ್ಮಣ ಪಕ್ಷಪಾತದ ಸಂಘದ ನೆಚ್ಚಿನ ಹೆಸರಿಗೆ ಶಾಸಕರು ವಿರೋಧ ಮಾಡಿದರೆ ಆಗ ರಾಜ್ಯದ ಪ್ರಮುಖ ಸಮೂದಾಯಗಳ ಪ್ರತಿನಿಧಿಗಳಾದ ಅರವಿಂದ ಬೆಲ್ಲದ ಮತ್ತು ಅಶ್ವಥನಾರಾಯಣ ಹೆಸರು ಮುಂಚೂಣಿಗೆ ತರಬಹುದೆಂದು ಸೂಚನೆ ನೀಡಿದೆ. ಈ ಕಾರ್ಯತಂತ್ರದ ಭಾಗವಾಗೇ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಯಂಥವರಿಗೆ ಪ್ರಮುಖ ಹುದ್ದೆಗಳನ್ನು ನೀಡಿ ಒಕ್ಕಲಿಗರಿಗೆ ನ್ಯಾಯ ಒದಗಿಸಿದ್ದು ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರರಿಗೆ ಸೂಕ್ತ ವ್ಯವಸ್ಥೆ ಮಾಡಿ ಬ್ರಾಹ್ಮಣರನ್ನು ಉನ್ನತಹುದ್ದೆ ಮುಖ್ಯಮಂತ್ರಿಗಳನ್ನಾಗಿಸುವ ಈ ಕಾರ್ಯಾಚರಣೆ ಹಿಂದೆ ಕಟೀಲು ಮತ್ತು ಬಿ.ಎಲ್.ಸಂತೋಷ್ ಎಂಬ ಸಂಘಿಗಳ ಪ್ರಯತ್ನವಿದೆ ಎನ್ನಲಾಗುತ್ತಿದೆ.



ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಸಂಚಲನ ಮೂಡಿಸಿದೆ. ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಬಿಎಸ್ ಯಡಿಯೂರಪ್ಪ ಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು. ಆದರೆ ಜಗದೀಶ್ ಶೆಟ್ಟರ್ ಮತ್ತು ಕೆಎಸ್ ಈಶ್ವರಪ್ಪ ಅವರು ತಮ್ಮ ಬಗಲಿನಲ್ಲಿಯೇ ಬೆಂಕಿ ಇದ್ದಿದ್ದನ್ನು ಅರಿತಿರಲಿಲ್ಲ! ಕಾಮಿಡಿ ಪಾತ್ರ ಮಾಡುತ್ತಿದ್ದ ಕಟೀಲ್, ಈಗ ಬಿಜೆಪಿಯ ಹಲವರಿಗೆ ವಿಲ್ಲನ್ ಪಾತ್ರಧಾರಿಯಾಗಿದ್ದಾರೆ! ಎಂದು ಟೀಕಿಸಿದೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್ ಸಾದಿಕ್ ಯಾರೆನ್ನುವುದು ಈಗ ತಿಳಿದಿದೆ! ಪಕ್ಷದ ರಾಜ್ಯಾಧ್ಯಕ್ಷರಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಚಿವ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಏಕೆಂದರೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲ್ ಆಗಿದ್ದರೂ ಎಂದು ಕಾಂಗ್ರೆಸ್ ಆರೋಪಿಸಿದೆ. (kpc)
