

ಕರೋನಾ ಕಾರಣದಿಂದ ಶಿಕ್ಷಣ ಕ್ಷೇತ್ರ ಸೊರಗಿದೆ. ಕಳೆದ ಎರಡು ವರ್ಷಗಳಲ್ಲಿ ಶಾಲೆ ತೆರೆದಿದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಿದ್ದೇ ಕಡಿಮೆ. ಈ ಸ್ಥಿತಿಯಲ್ಲಿ ಪರೀಕ್ಷೆ ಯೋಚನೆಗೆ ಅತೀತವಾದ ವಿಷಯವಾಗಿತ್ತು. ಆದರೆ ಇಂದು ರಾಜ್ಯಾದ್ಯಂತ ನಡೆದ ಎಸ್.ಎಸ್. ಎಲ್.ಸಿ. ಪರೀಕ್ಷೆ ಸುಗಮವಾಗಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆದಿದ್ದಾರೆ.
ಮಳೆ,ವಾಹನ ಅನಾನುಕೂಲತೆ ಈ ಯಾವ ಕಾರಣಗಳನ್ನೂ ಹೇಳದೆ ಜಿಲ್ಲೆಯಲ್ಲಿ ಎಸ್.ಎಸ್. ಎಲ್.ಸಿ. ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರೋನಾ ನಂತರದ ಈ ವರ್ಷದ ಎಸ್.ಎಸ್. ಎಲ್.ಸಿ. ಪರೀಕ್ಷೆ ಹಲವು ಕೋನಗಳಿಂದ ಭಿನ್ನವಾಗಿತ್ತು. ಪರಿಕ್ಷಾರ್ಥಿಗಳು ಕೋಣೆ ಪ್ರವೇಶಿಸುವ ಮೊದಲು ಕೈ ತೊಳೆದು ಸೆನಿಟೈಸ್ ಮಾಡಿಕೊಂಡು ಒಳಹೋದರೆ ಅಲ್ಲಿ ಕೂಡಾ ಒಂದೇ ದಿನ ಮೂರು ವಿಷಯಗಳ ಮೂರು ಪತ್ರಿಕೆಗಳಿಗೆ ಉತ್ತರಿಸಬೇಕಿತ್ತು. ಪ್ರಶ್ನೆ, ಉತ್ತರಿಸುವ ವಿಧಾನ ಕೂಡಾ ಭಿನ್ನವಾಗಿದ್ದ ಈ ವರ್ಷದ ಎಸ್.ಎಸ್,ಎಲ್.ಸಿ. ಪರೀಕ್ಷೆ ಹೊಸ ಅನುಭವವನ್ನೇ ನೀಡಿತು.
ಪರೀಕ್ಷೆ ಉತ್ತಮವಾಗಿ ನಡೆಯಿತು. ನಮಗೆ ಪರಿಚಿತವಲ್ಲದ ಸ್ಫರ್ಧಾತ್ಮಕ ಪರೀಕ್ಷೆ ಮಾದರಿಯ ಮಲ್ಟಿಪಲ್ ಚಾಯ್ಸ್ ಪದ್ಧತಿ ನಮಗೆ ಸ್ಫರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧವಾಗಬೇಕಾದ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಮೂರು ವಿಷಯಗಳ ಪತ್ರಿಕೆ, ಒಂದೇ ದಿನ ಮೂರೂ ವಿಷಯಗಳನ್ನು ಬರೆಯುವ ಅವಕಾಶ ನಮಗೆ ಸಂತೋಷ,ಖುಷಿಯ ವಿಚಾರವಾಗಿತ್ತು.- ಅಥಿತಿ ಪೈ.
ಮಲ್ಟಿಪಲ್ ಚಾಯ್ಸ್ ವಿಧಾನದ ಪ್ರಶ್ನೆ ಪತ್ರಿಕೆಗೆ ಉತ್ತರಿಸಿದ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಳ್ಳಲು ಹಿಂದೇಟು ಹಾಕಿದರೆ ಎಂದಿನಂತೆ ವಿದ್ಯಾರ್ಥಿನಿಯರು ತಮ್ಮ ಅನುಭವ ಹಂಚಿಕೊಂಡರು. ಈ ವರ್ಷದ ಹೊಸ ಪರೀಕ್ಷಾ ವಿಧಾನ, ಬದಲಾವಣೆ ತಮಗೆ ಸ್ಫರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ವೇದಿಕೆ ಒದಗಿಸಿತು ಎಂದು ತಮ್ಮ ಸಂಬ್ರಮ ಹಂಚಿಕೊಂಡರು.ಹೊಸ ವಿಧಾನ, ಹೊಸ ಪದ್ಧತಿ,ವಿನೂತನ ಪ್ರಯೋಗ ವಿದ್ಯಾರ್ಥಿಗಳನ್ನು ಚಿಂತೆಗೀಡುಮಾಡದೆ ಪರೀಕ್ಷೆ ಬರೆದು ಹಗುರಾಗಿ ಸಂಬ್ರಮಿಸುವ ಖುಷಿಗೆ ಕಾರಣವಾಗಿದ್ದು ವಿಶೇಶವೆನಿಸಿತು.
ಸಿದ್ಧಾಪುರ ಅವರಗುಪ್ಪಾದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಐಡಿಎಸ್.ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆರನೇ ಸೆಮಿಸ್ಟರ್ ಅವಧಿಯಲ್ಲಿ ಐದನೇ ಸೆಮ್ ಪರೀಕ್ಷೆ ಬರೆಯುವ ಅವೈಜ್ಞಾನಿಕ ನಿಯಮ ಕೈ ಬಿಡಲು ಮನವಿ ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾನಾ ಪಾಲಿಟೆಕ್ನಿಕ್ ಗಳಲ್ಲಿ ಪ್ರತಿಭಟನಾರ್ಥ ಮನವಿ ಅರ್ಪಣೆ ನಡೆದಿರುವುದಾಗಿ ಎ.ಆಯ್.ಡಿ.ಎಸ್.ಓ. ಪ್ರತಿನಿಧಿಗಳು ತಿಳಿಸಿದ್ದಾರೆ.
ಸಿದ್ದಾಪುರ: ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದು ಪಡಿಸಿದಂತೆ ಡಿಪ್ಲೊಮಾ ವಿದ್ಯಾರ್ಥಿಗಳಿಗೂ ಬೆಸ್ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ, ಯಾವುದೇ ತಾರತಮ್ಯ ಮಾಡದೆ ಡಿಪ್ಲೋಮಾ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷ ನ್ ಸೋಮವಾರ ತಾಲೂಕಿನ ಡಿಪ್ಲೊಮೊ ಕಾಲೇಜು ಎದುರಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ನಂತರ ಮನವಿಯನ್ನು ಪ್ರಾಂಶುಪಾಲರಿಗೆ ಸಲ್ಲಿಸಿದರು. ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದನ್ನು ಕೈಬಿಟ್ಟು ಪ್ರಸಕ್ತ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬೇಕು. ಪಿ ಯು ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿ ದಂತೆ ಡಿಪ್ಲೋಮಾ ವಿದ್ಯಾರ್ಥಿಗಳ ಆಡ್ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಆಂತರಿಕ ಮೌಲ್ಯಮಾಪನ ಅಥವಾ ಇನ್ಯಾವುದೋ ವೈಜ್ಞಾನಿಕ ಮಾನದಂಡದ ಮೂಲಕ ಮೌಲ್ಯಮಾಪನ ಮಾಡಬೇಕು. ಶಿಕ್ಷಣ ತಜ್ಞರು ಉಪನ್ಯಾಸಕರು ಪೋಷಕರು ಹಾಗೂ ವಿದ್ಯಾರ್ಥಿಗಳೊಡನೆ ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸಿ ಶೈಕ್ಷಣಿಕ ವೇಳಾಪಟ್ಟಿ ಪರೀಕ್ಷೆ ಮೌಲ್ಯಮಾಪನ ಇವುಗಳ ಬಗ್ಗೆ ಒಂದು ವೈಜ್ಞಾನಿಕ ಪ್ರಜಾತಾಂತ್ರಿಕ ನೀತಿಯನ್ನು ರೂಪಿಸಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲಸಿಕೆಯನ್ನು ನೀಡುವ ಮೊದಲೇ ಆಫ್ಲೈನ್ ತರಗತಿಗಳನ್ನು ಪ್ರಾರಂಭಿಸಬಾರದು. ಯುಜಿಸಿ ಹಾಗೂ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮನವಿಯನ್ನು ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಟೂಡೆಂಟ್ ಯೂನಿಯನ್ ನ ಅಧ್ಯಕ್ಷ ವಿನಾಯಕ ನಾಯ್ಕ , ಕಾರ್ಯದರ್ಶಿ ಸಂದೇಶ್ ಮಹಾಲೆ, ನಾರಾಯಣ ಹೆಗಡೆ, ಪ್ರದೀಪ್ ನಾಯ್ಕ, ಮಹೇಶ್ ಎಂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಿದ್ದಾಪುರ ತಾಲೂಕಾ ಕ್ರೀಡಾಂಗಣದ ರೂ.28.00 ಲಕ್ಷಗಳ ಕಾಮಗಾರಿಗೆ ವಿಧಾನಸಭಾ ಅಧ್ಯಕ್ಷ ಭೂಮಿಪೂಜೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ನಾಯ್ಕ,ಉಪಾಧ್ಯಕ್ಷ ರಾದ ಶ್ರೀ ರವಿಕುಮಾರ ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಉಪಾಧ್ಯಕ್ಷರಾದ ಕೆ.ಆರ್.ವಿನಾಯಕ. ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಗಾಯತ್ರಿ, ಇಒ ಪ್ರಶಾಂತ ರಾವ್, ಸಿಪಿಐ ಕುಮಾರ ಪಟ್ಟಣ ಪಂಚಾಯತ ಸದಸ್ಯರು ಗ್ರಾಮ ಪಂಚಾಯತ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.



