

ಅಮೆರಿಕದ ವಾಸವಿ ಫೌಂಡೇಷನ್ ಹಾಗೂ ಹುಬ್ಬಳ್ಳಿಯ ಜಿಎಂ ವೆಲ್‌ಫೇರ್ ಗ್ರೂಪ್ ಆರ್ಗನೈಸೇಷನ್ ವತಿಯಿಂದ ಆಮ್ಲಜನಕ ಸಾಂದ್ರಕವನ್ನು ಸಿದ್ದಾಪುರ ತಾಲ್ಲೂಕಿನ ಕೋಲಶಿರ್ಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಜಿಎಂ ವೆಲ್‌ಫೇರ್ ಗ್ರೂಪ್ ಆರ್ಗನೈಸೇಷನ್ ರಾಜ್ಯ ಘಟಕದ ಅಧ್ಯಕ್ಷೆ ರಶ್ಮಿ ಎಸ್.ಎನ್, ಸದಸ್ಯರಾದ ಐಶ್ವರ್ಯಾ ಎಸ್.ಎನ್, ವಿಕ್ರಂ, ಮಹಾಂಕ, ಬಲರಾಮ ನಾಮಧಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಜಿ.ಪಂ. ಸದಸ್ಯ ನಾಗರಾಜ ನಾಯ್ಕ, ಸ್ಥಳೀಯರಾದ ಸುರೇಶ ನಾಯ್ಕ, ಕೃಷ್ಣಮೂರ್ತಿ ಕಡಕೇರಿ, ಮಾದೇವ ನಾಯ್ಕ ಇದ್ದಾರೆ.





