ಲಕ್ಷಾಂತರ ಹಾನಿ-
ಸಿದ್ಧಾಪುರ ತಾಲೂಕಿನಲ್ಲಿ ಇಂದು ಮರಬಿದ್ದು ನಾಲ್ಕೈದು ಮನೆಗಳು ಹಾನಿಗೊಳಗಾಗಿವೆ. ಸೊರಬ-ಕುಮಟಾ ರಸ್ತೆ, ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ಯಲ್ಲಾಪುರಶಿರಸಿ-ಸಾಗರ ರಸ್ತೆಗಳಲ್ಲಿ ಕೂಡಾ ಬಿದಿರಿನ ಹಿಂಡು,ಮರಗಳು ಬಿದ್ದು ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಹೆಸ್ಕಾಂ ಮತ್ತು ಸ್ಥಳಿಯ ಗ್ರಾಮ ಪಂಚಾಯತ್ ಆಡಳಿತಗಳು ರಸ್ತೆ ತೆರವು ಮಾಡಿ ವಿದ್ಯುತ್ ವ್ಯತ್ಯಯ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರಯತ್ನಿ ಸುತಿದ್ದಾರೆ.
- ಹಕ್ಕಲಮನೆ (ಕವಲಕೊಪ್ಪ ಗ್ರಾಮ) ದಿವಾಕರ ವೆಂಕಟ್ರಮಣ ಹೆಗಡೆಯವರ ಅಡಿಕೆ ತೋಟದ ಮೇಲೆ ಬಿದ್ದ ತಾರಿ ಮರದಿಂದಾಗಿ 12 ಅಡಿಕೆ ಮರಗಳಿಗೆ ಹಾನಿ (15 ಸಾವಿರ)
- ಸಿದ್ಧಾಪುರ, ಹೆಗ್ಗರಣಿ ವಾಜಗಾರ್ ನ ಹನುಮ ತಿಮ್ಮ ಮುಕ್ರಿಯವರ ವಾಸದ ಮನೆಮೇಲೆ ಉಪ್ಪಾಗೆ ಮರಬಿದ್ದು ಮನೆ ನೆಲಸಮ ಅಂದಾಜು ಹಾನಿ 1ಲಕ್ಷ ಮೂವತ್ತು ಸಾವಿರ.
- ಸಿದ್ಧಾಪುರ ಹಸರಗೋಡು ಗ್ರಾಮದ ಅಡ್ಡಸರ ನಾಗಮ್ಮ ಮುಕ್ರಿ ಮನೆ ಮೇಲೆ ಮರಬಿದ್ದು 25 ಸಾವಿರ ಹಾನಿ.
- ಸಿದ್ಧಾಪುರ ಅಪ್ಪಿನಬೈಲ್ ಬಳಿ ಮರ, ಬಿಳಗಿ ಮಾರಿಕಾಂಬಾ ದೇವಸ್ಥಾನದ ಎದುರು ಬಿದಿರು ಹಿಂಡು ಬಿದ್ದು ಹಾನಿ
ಉತ್ತರ ಕನ್ನಡ ಜಿಲ್ಲೆ ಈಗ ಮಳೆಯ ರುದ್ರನರ್ತನಕ್ಕೆ ಸಿಕ್ಕಿದೆ. ಈ ವರ್ಷದ ಈವರೆಗಿನ ಮಳೆಪ್ರಮಾಣ 2 ಸಾವಿರ ಮಿ.ಮೀ ಸಮೀಪಿಸಿದೆ. ಇದು ಜುಲೈ ತಿಂಗಳ ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಈ ವಾರದ ವರ್ಷಧಾರೆಗೆ ಸಿಲುಕಿದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕಾಳಿ, ಶರಾವತಿ,ಗಂಗಾವಳಿ, ಅಘನಾಶಿನಿ ನದಿಗಳು ಹಾಗೂ ಉಪನದಿಗಳೆಲ್ಲಾ ಅಪಾಯದ ಹಂತ ಮೀರಿ ಹರಿಯುತ್ತಿವೆ.
ಜಿಲ್ಲೆಯ ಕರಾವಳಿಯಲ್ಲಿ ಪ್ರವಾಹದ ಅನಾಹುತ ಹೆಚ್ಚಿದೆ.ಹಾಗೆಂದು ಮಲೆನಾಡಿನಲ್ಲಿ ಅಪಾಯ ಇಲ್ಲ ಎನ್ನುವಂತಿಲ್ಲ. ಘಟ್ಟದ ಮೇಲಿನ ಯಲ್ಲಾಪುರ,ಸಿದ್ಧಾಪುರ, ಶಿರಸಿಗಳಲ್ಲಿ ಮಳೆಯ ನೀರು ವಾಸದ ಮನೆಗಳಿಗೂ ನುಗ್ಗಿದೆ. , ದಿನವೀಡಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿಯಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲು ಸಿದ್ಧತೆ ನಡೆಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ಶಿರಸಿ-ಸಿದ್ಧಾಪುರದ ಪ್ರವಾಹ ಪೀಡಿತ ಪ್ರದೇಶಗಳಾದ ಸಿದ್ಧಾಪುರದ ಹೆಮ್ಮನಬೈಲು, ಕಲ್ಯಾಣಪುರಗಳಲ್ಲಿ ಹಾಗೂ ಶಿರಸಿ ಮೊಗವಳ್ಳಿಯಲ್ಲಿ ನೆಗಸಿನ ಮುನ್ನೆಚ್ಚರಿಕೆ ನೀಡಿದೆ.
ಇದೇ ವಾರ ಉತ್ತರ ಕನ್ನಡ ಜಿಲ್ಲೆಯ ರಭಸದ ಮಳೆಗೆ ನೆಲಕ್ಕುರುಳಿದ ಮರಗಳು ಬೆಳೆ, ರಸ್ತೆ, ಮನೆಗಳಿಗೆ ಹಾನಿಮಾಡಿವೆ. ಸಿದ್ಧಾಪುರ ತಾಲೂಕಿನಲ್ಲಿ ಇಂದು ಮರಬಿದ್ದು ನಾಲ್ಕೈದು ಮನೆಗಳು ಹಾನಿಗೊಳಗಾಗಿವೆ. ಸೊರಬ-ಕುಮಟಾ ರಸ್ತೆ, ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ಯಲ್ಲಾಪುರಶಿರಸಿ-ಸಾಗರ ರಸ್ತೆಗಳಲ್ಲಿ ಕೂಡಾ ಬಿದಿರಿನ ಹಿಂಡು,ಮರಗಳು ಬಿದ್ದು ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಹೆಸ್ಕಾಂ ಮತ್ತು ಸ್ಥಳಿಯ ಗ್ರಾಮ ಪಂಚಾಯತ್ ಆಡಳಿತಗಳು ರಸ್ತೆ ತೆರವು ಮಾಡಿ ವಿದ್ಯುತ್ ವ್ಯತ್ಯಯ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರಯತ್ನಿ ಸುತಿದ್ದಾರೆ. ಪ್ರವಾಹದಿಂದ ತೊಂದರೆಗೆ ಒಳಗಾಗಬಹುದಾದ ನದಿಪಾತ್ರದ ಜನರಿಗೆ ಸುರಕ್ಷಿತವಾಗಿರಲು,ಪೂರ್ವಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.
ಈ ವಾರದ ಬುಧವಾರ-ಗುರುವಾರದ ಮಳೆ ಪ್ರಮಾಣ ಇನ್ನೆರಡು ದಿನ ಮುಂದುವರಿದರೂ ನೂರಾರು ಕುಟುಂಬಗಳು ನಿರಾಶ್ರಿತರಾಗುವ ಅಪಾಯ ಎದುರಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರು ಕೂಡಾ ಈ ತಿಂಗಳಲ್ಲಿ ಜಿಲ್ಲೆಗೆ ಬಂದರೆ ಮಳೆ-ಪ್ರವಾಹದ ತೊಂದರೆಗೆ ಒಳಗಾಗುವುದು ನಿಶ್ಚಿತ ಎನ್ನಲಾಗಿದೆ.