

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯ ದಾದ್ಯಂತ ಕೋವಿಡ್ ಸಂದರ್ಭ ಹಾಗೂ ಮಳೆ, ಪ್ರವಾಹದ ಸಂಸರ್ಭದಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ಪರ್ಯಾಯವಾಗಿ ಕಾಂಗ್ರೆಸ್ ನಾಯಕರು ಬಹುತೇಕ ಕಡೆ ನೆರವಿಗೆ ಧಾವಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ-ಸಿದ್ಧಾಪುರ ಶಾಸಕರು ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಬಿಟ್ಟು ಬಹುತೇಕ ಎಲ್ಲಾ ಶಾಸಕರೂ ಕೋವಿಡ್ ಮತ್ತು ನೆರೆ,ಮಳೆ ಸಂದರ್ಭಗಳಲ್ಲಿ ಜನರಿಗೆ ಸ್ಪಂದಿಸಿದ್ದಾರೆ. ಆದರೆ ಜನಪ್ರತಿನಿಧಿಗಳಲ್ಲದ ಕಾಂಗ್ರೆಸ್ ನಾಯಕರು ಜನಸ್ಪಂದನದ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾಜ್ಯದ ಪ್ರಮುಖ ನಾಯಕರ ಜೊತೆಗೆ ಕಾರವಾರ ಕ್ಷೇತ್ರದಲ್ಲಿ ಸತೀಶ್ ಶೈಲ್, ಭಟ್ಕಳದಲ್ಲಿ ಜೆ.ಡಿ.ನಾಯ್ಕ, ಮಂಕಾಳು ವೈದ್ಯ, ಹಳಿಯಾಳ, ಯಲ್ಲಾಪುರಗಳಲ್ಲಿ ಪ್ರಶಾಂತ್ ಮತ್ತು ಆರ್, ವಿ.ದೇಶಪಾಂಡೆ ಹಾಗೂ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಸೊರಬದಲ್ಲಿ ಮಧು ಬಂಗಾರಪ್ಪ, ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮತ್ತು ಬೇಳೂ ರು ಗೋಪಾಲಕೃಷ್ಣ ಸೇರಿದಂತೆ ಜಿಲ್ಲೆ, ರಾಜ್ಯದ ಬಹುತೇಕ ಕಡೆ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗಿಂತ ತುಸು ಹೆಚ್ಚೇ ಆಸಕ್ತಿಯಿಂದ ಕಾಂಗ್ರೆಸ್ ನಾಯಕರು ಸಂತೃಸ್ತರಿಗೆ ನೆರವಾದ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ದೊರೆತಿದೆ.
ಬಹುತೇಕ ಕಡೆ ಕಾಂಗ್ರೆಸ್ ನಾಯಕರು ಎಸ್.ಎಸ್. ಎಲ್.ಸಿ., ಪಿ,ಯು.ಸಿ. ಮತ್ತು ಇತರ ಪರೀಕ್ಷೆ, ಗಳಲ್ಲಿ ಗರಿಷ್ಠ ಅಂಕಗಳಿಂದ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿ ಗೌರವಿಸಿದ್ದಾರೆ.
ಶಿರಸಿ-ಸಿದ್ದಾಪುರಗಳಲ್ಲಿ ಸಾಧಕರು, ಸಂತೃಸ್ತರು, ತೊಂದರೆಗೊಳಗಾದವರನ್ನು ಸಂಪರ್ಕಿಸಿ ನೆರವು-ಉತ್ತೇಜನ ನೀಡಿದ ಪ್ರಮುಖರಲ್ಲಿ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕರ ಹೆಸರು ಮುಂಚೂಣಿಯಲ್ಲಿದೆ. ಸುಷ್ಮಾ ರೆಡ್ಡಿ, ಉಪೇಂದ್ರ ಪೈ ಕೂಡಾ ಅಲ್ಲಲ್ಲಿ ನೆರವಿಗೆ ಧಾವಿಸಿದ ವರ್ತಮಾನವಿದೆ.



ಸಿದ್ದಾಪುರ. : ರಾಜ್ಯದ ವಿವಿಧೆಡೆ ಪ್ರವಾಹದಿಂದ ನೆರೆ ಬಂದು ವಿವಿಧ ಭಾಗದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ನೆರೆಯಿಂದ ಸಂತ್ರಸ್ತರಾದವರ ನೆರವಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್, ಅಧ್ಯಕ್ಷ ಉಪೇಂದ್ರ ಪೈ ಅವರು ರವಿವಾರ ಸಿದ್ದಾಪುರ ತಾಲೂಕಿನ ಕಲ್ಯಾಣಪುರ ಗ್ರಾಮದ ಸುಮಾರು 10 ಕುಟುಂಬಕ್ಕೆ ದಿನಸಿ ಕಿಟ್ ಹಾಗೂ ಬಟ್ಟೆಗಳನ್ನು ನೀಡಿ ಧೈರ್ಯ ತುಂಬಿದರು.
ಯಾರು ಕೂಡಾ ಭಯಪಡುವ ಅವಶ್ಯಕತೆ ಇಲ್ಲ ನಿಮ್ಮೆಲ್ಲರ ಜೊತೆಯಲ್ಲಿ ನಮ್ಮ ಟ್ರಸ್ಟ್ ನಮ್ಮ ಸೇವೆ ಹಾಗೂ ನಾನು ಕೂಡಾ ನಿಮ್ಮ ಜೊತೆಯಲ್ಲಿ ಇದ್ದೇನೆ
ಮತ್ತೆ ಮೂರು, ನಾಲ್ಕು ದಿನದಲ್ಲಿ ಬೇಟಿ ನೀಡಿ ಎಲ್ಲಾ ಸಂತ್ರಸ್ತರ ಮನೆಯ ಪರಿಸ್ಥಿತಿಯನ್ನು ಪರಿಶೀಲಿಸಿ ಅದಕ್ಕೆ ಅನುಕೂಲ ಆಗುವಂತೆ ಪರಿಹಾರವನ್ನು ನೀಡುತ್ತೇನೆ ಎಂದು ಶ್ರೀ ಉಪೇಂದ್ರ ಪೈ ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರು, ನಜೀರ್ ಮೂಡಿ, ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.






