

ಕರ್ನಾಟಕದಲ್ಲಿ ದೇವೇಗೌಡರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹೆಸರು ಮಾಡಿದ್ದಾರೆ. ರಾಮಕೃಷ್ಣ ಹೆಗಡೆಯವರ ಪುತ್ರ ಭರತ್ ಹೆಗಡೆ ಏನಾದರು ಬಹಳ ಜನರಿಗೆ ಗೊತ್ತಿಲ್ಲ. ಬಂಗಾರಪ್ಪ ಮಕ್ಕಳು ದಾಯಾದಿ ಕಲಹದಿಂದ ಸುದ್ದಿ ಮಾಡಿದರು. ಗುಂಡೂರಾವ್ ಮಗ ದಿನೇಶ್ ಗುಂಡೂರಾವ್ ಒಂದಲ್ಲಾ ಒಂದು ದಿನ ಮುಖ್ಯ ಮಂತ್ರಿ ಆದರೂ ಆಶ್ಚರ್ಯವಿಲ್ಲ. ಇವರ ನಡುವೆ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವರು ಬಸವರಾಜ್ ಬೊಮ್ಮಾಯಿ.

ಹೀಗೆ ಮಾಜಿಮುಖ್ಯಮಂತ್ರಿಗಳ ಮಕ್ಕಳು ಬೇರೆ ಬೇರೆ ಕಾರಣಕ್ಕೆ ಹೆಸರು ಮಾಡುತಿದ್ದಾರೆ. ಛಲದಂಕಮಲ್ಲ ಎಸ್. ಬಂಗಾರಪ್ಪಪುತ್ರರಲ್ಲಿ ಹಿರಿಯ ಪುತ್ರ ಕುಮಾರ ಬಂಗಾರಪ್ಪ ಬಸವರಾಜ್ ಬೊಮ್ಮಾಯಿ ಕ್ಯಾಬಿನೇಟ್ ನ ಸಂಭಾವ್ಯ ಸಚಿವರಲ್ಲಿ ಒಬ್ಬರು ಎನ್ನಲಾಗುತ್ತಿದೆ.
ಇನ್ನೊಬ್ಬ ಪುತ್ರ ಮಧು ಬಂಗಾರಪ್ಪ ಜುಲೈ 30 ರಂದು ಕಾಂಗ್ರೆಸ್ ಸೇರಿ. ಕಾಂಗ್ರೆಸ್ ರಾಜ್ಯ ಘಟಕದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಲಿದ್ದಾರೆ. ಇವರೊಂದಿಗೆ ಅನೇಕರು ಬಿ.ಜೆ.ಪಿ., ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಕುಮಾರಸ್ವಾಮಿ ಹಲವು ಸರ್ಕಸ್ ಮಾಡಿ ಮುಖ್ಯಮಂತ್ರಿ ಆಗದಿದ್ದರೆ ದೇವೇಗೌಡರ ಪುತ್ರರಲ್ಲಿ ಕುಮಾರಸ್ವಾಮಿ ಉತ್ತಮ ನಾಯಕ, ಜನಪರ ಮುಖ್ಯಮಂತ್ರಿ ಎಂದು ಪ್ರಸಿದ್ಧರಾಗುತ್ತಿರಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಪರೂಪದ ಡೈನಾಮಿಕ್ ಮನುಷ್ಯ. ನಿಧಾನವಾಗಿ ವಿನಯ, ಸಂಯಮದಿಂದ ತನ್ನ ಕಾರ್ಯಸಾಧನೆ ಮಾಡಿಕೊಳ್ಳುವ ಬೊಮ್ಮಾಯಿ ಯಡಿಯೂರಪ್ಪನವರ ವಿಶ್ವಾಸ ಗಳಿಸಿ ಮುಖ್ಯಮಂತ್ರಿ ಆಗಿರುವಂತೆ ಸಂಘ, ಬಿ.ಜೆ.ಪಿ. ಕೊನೆಗೆ ಜನರ ಬೆಂಬಲ ಗಳಿಸಬಲ್ಲ ಚತುರ. ಇನ್ನುಳಿದಂತೆ ಜನತಾಪರಿವಾರದ ಮಾಜಿ ನಾಯಕರಾದ ಬೊಮ್ಮಾಯಿ, ಸಿದ್ಧರಾಮಯ್ಯ ಪುತ್ರ ಯತೀಂದ್ರ, ದಿನೇಶ್ ಗುಂಡೂರಾವ್ ಸೇರಿ ಮುಂದೆ ಹೊಸ ರಾಜಕೀಯ ಸಮೀಕರಣ ಬರೆದರೆ ಅಚ್ಚರಿಯಿಲ್ಲ ಎನ್ನುವ ನಿರೀಕ್ಷೆಗಳೂ ಇವೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ; ಕರ್ನಾಟಕ ಸೇರಿ 5 ರಾಜ್ಯದಲ್ಲಿ ಸಿಎಂ ಮಕ್ಕಳೇ ಸಿಎಂ!!
ಬಿಎಸ್ ಯಡಿಯೂರಪ್ಪ ರಾಜಿನಾಮೆಯಿಂದಾಗಿ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾಗಿದ್ದು, ಆ ಮೂಲಕ ದೇಶದಲ್ಲಿ ಕರ್ನಾಟಕ ಸೇರಿ 5 ರಾಜ್ಯದಲ್ಲಿ ಮಾಜಿ ಸಿಎಂಗಳ ಮಕ್ಕಳೇ ಮುಖ್ಯಮಂತ್ರಿಯಾದಂತಾಗಿದೆ.

ಬೆಂಗಳೂರು: ಬಿಎಸ್ ಯಡಿಯೂರಪ್ಪ ರಾಜೀನಾಮೆಯಿಂದಾಗಿ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾಗಿದ್ದು, ಆ ಮೂಲಕ ದೇಶದಲ್ಲಿ ಕರ್ನಾಟಕ ಸೇರಿ 5 ರಾಜ್ಯದಲ್ಲಿ ಮಾಜಿ ಸಿಎಂಗಳ ಮಕ್ಕಳೇ ಮುಖ್ಯಮಂತ್ರಿಯಾದಂತಾಗಿದೆ.
ಹೌದು.. ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ, ಬಸವರಾಜ ಬೊಮ್ಮಾಯಿ ಕರ್ನಾಟಕದ 11ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಬೊಮ್ಮಾಯಿ ಅವರು ಮಾಜಿ ಸಿಎಂ ಎಸ್ ಆರ್ ಬೊಮ್ಮಾಯಿ ಪುತ್ರ. ಈ ಮೂಲಕ ಕರ್ನಾಟಕದಲ್ಲಿ ತಂದೆ ಬಳಿಕ ಸಿಎಂ ಸ್ಥಾನ ಅಲಂಕರಿಸಿದ 2ನೇ ಜೋಡಿಯಾಗಿದ್ದು, ಅಲ್ಲದೆ ಭಾರತದ 5 ರಾಜ್ಯಗಳಲ್ಲಿ ಸಿಎಂ ಪುತ್ರರದ್ದೇ ಆಡಳಿತವಾದಂತಾಗಿದೆ.
ಎಚ್ ಡಿ ಕುಮಾರಸ್ವಾಮಿ-ಎಚ್ ಡಿ ದೇವೇಗೌಡ

ತಂದೆ ಬಳಿಕ ಮಗ ಮುಖ್ಯಮಂತ್ರಿಯಾದ ಕರ್ನಾಟಕದ 2ನೇ ಜೋಡಿ!
ಆಗಸ್ಟ್ 1988 ರಿಂದ ಏಪ್ರಿಲ್ 1989ರ ವರೆಗೆ ಎಸ್ ಆರ್ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇದೀಗ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕದ ಅಧಿಕಾರದ ಚುಕ್ಕಾಣಿ ನೀಡಲಾಗಿದೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುವ ಮೂಲಕ ಭಾರತದ 5 ರಾಜ್ಯಗಳಲ್ಲಿ ಸಿಎಂ ಪುತ್ರರೇ ಸಿಎಂ ಆಗಿರುವುದು ವಿಶೇಷವಾಗಿದೆ.
ಎಂಕೆ ಸ್ಟಾಲಿನ್-ಕರುಣಾನಿಧಿ

ತಮಿಳುನಾಡು
ತಮಿಳುನಾಡಿನಲ್ಲಿ ಸದ್ಯ ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದಾರೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಎಂಕೆ ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸ್ಟಾಲಿನ್ ತಮಿಳುನಾಡಿನ ಅತ್ಯಂತ ಜನಪ್ರಿಯ, ಪ್ರಭಾವಿ ಮುಖ್ಯಮಂತ್ರಿ, ದಿವಗಂತ ಎಂ ಕರುಣಾನಿಧಿ ಪುತ್ರ. ಕರುಣಾನಿಧಿ 5 ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ವೈಎಸ್ ರಾಜಶೇಖರ್ ರೆಡ್ಡಿ-ವೈಎಸ್ ಜಗನ್ ಮೋಹನ್ ರೆಡ್ಡಿ

ಆಂಧ್ರ ಪ್ರದೇಶ
ಆಂಧ್ರ ಪ್ರದೇಶದಲ್ಲಿ ಸದ್ಯ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದು, ಮೇ 30, 2019ರಲ್ಲಿ ಜಗನ್ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶ ಕಂಡ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಬಿಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರ. ರಾಜಶೇಖರ್ ರೆಡ್ಡಿ 2004ರಿಂದ 2009ರ ವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ಬಿಜು ಪಟ್ನಾಯಕ್-ನವೀನ್ ಪಟ್ನಾಯಕ್
ಒಡಿಶಾ
ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದು, ನವೀನ್ ಪಟ್ನಾಯಕ್ 5ನೇ ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಇನ್ನು ನವೀನ್ ಪಟ್ನಾಯಕ್ ತಂದೆ ಬಿಜು ಪಟ್ನಾಯಕ್ 1961-1963 ಹಾಗೂ 1990-95ರಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
ಶಿಬು ಸೊರೇನ್-ಹೇಮಂತ್ ಸೊರೇನ್
ಜಾರ್ಖಂಡ್
ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ 2ನೇ ಬಾರಿಗೆ ಸಿಎಂ ಆಗಿ ಆಡಳಿತ ನಡೆಸುತ್ತಿದ್ದು, 2ನೇ ಅವಧಿ 2019ರಲ್ಲಿ ಆರಂಭಗೊಂಡಿದೆ. ಹೇಮಂತ್ ಸೊರೇನ್ ತಂದೆ ಶಿಬು ಸೊರೆನ್ 2 ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
ಅಷ್ಟೇ ಅಲ್ಲ ಅಪ್ಪ-ಮಕ್ಕಳು ಸಿಎಂ ಆಗಿರುವುದು ಉದಾಹರಣೆಗಳು ಇನ್ನೂ ಸಾಕಷ್ಟಿವೆ. ಕರ್ನಾಟಕದಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್, ಜಮ್ಮು ಕಾಶ್ಮೀರದಲ್ಲಿ ಫಾರುಖ್ ಅಬ್ದುುಲ್ಲಾ ಹಾಗೂ ಓಮರ್ ಅಬ್ದುಲ್ಲಾ, ಮುಫ್ತಿ ಮೊಹಮ್ಮದ್ ಸಯ್ಯಿದ್ ಹಾಗೂ ಪುತ್ರಿ ಮೆಹಬೂಬಾ ಮುಫ್ತಿ ಸಿಎಂ ಆಗಿ ಆಡಳಿತ ನಡೆಸಿದ್ದರು. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
