

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಉತ್ತರ ಕನ್ನಡ ಭೇಟಿ ಮೇಲ್ನೋಟಕ್ಕೆ ಯಶಸ್ವಿಯಾಗಿದೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಯಡಿಯೂರಪ್ಪ ನವರಯೋಜನೆಯನ್ನು ಮುಂದುವರಿಸಿದ ಮುಖ್ಯಮಂತ್ರಿಗಳು ಯಡಿಯೂರಪ್ಪ ಪ್ರವಾಸ ಮೊಟಕುಗೊಳಿಸಿ ಉತ್ತರ ಕನ್ನಡ ಕ್ಕೆ ಭೇಟಿ ನೀಡದ ಪ್ರದೇಶವನ್ನೇ ಆಯ್ಕೆ ಮಾಡಿ ಬೊಮ್ಮಾಯಿ ಇಂದು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳನ್ನು ಸಂದರ್ಶಿಸಿದರು.
ಮಧ್ಯಾಹ್ನ 12 ಗಂಟೆಯ ನಂತರ ಯಲ್ಲಾಪುರ, ಅಂಕೋಲಾ ತಾಲೂಕುಗಳ ಪ್ರವಾಹ ಪೀಡಿತ ಪ್ರದೇಶಗಳಾದ ಕಳಚೆ, ಕಲ್ಲೇಶ್ವರಗಳನ್ನು ಭೇಟಿ ಮಾಡಿದರು. ಮುರಿದ ಸೇತುವೆ,ಕುಸಿದ ರಸ್ತೆ,ಜಲಪ್ರಳಯದಿಂದ ಆದ ಅನಾಹುತಗಳನ್ನು ವೀಕ್ಷಿಸಿದರು. ಈ ಸಮಯದಲ್ಲಿ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿ ಪ್ರವಾಹ ನಿರ್ವಹಣೆಯ ಬಗ್ಗೆ ಜನಾಭಿಪ್ರಾಯ ಕೇಳಿದರು. ತಮ್ಮ ಗೋಳು ತೋಡಿಕೊಂಡ ಜನರಿಗೆ ಧೈರ್ಯತುಂಬಿ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು ಜಿಲ್ಲೆಯ ಪ್ರವಾಹ ಪೀಡಿದ ಪ್ರದೇಶಗಳು ಮತ್ತು ಸಂತೃಸ್ತ ಜನರಿಗೆ ಅತ್ಯುತ್ತಮ ಪ್ಯಾಕೇಜ್ ನೀಡುವ ಭರವಸೆ ನೀಡಿದರು.
ಮಳೆ ಹಾನಿ, ಪ್ರವಾಹದ ಅನಾಹುತ ಹಾಗೂ ಕೋವಿಡ್ ನಿರ್ವಹಣೆಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ನಿರ್ಧೇಶನ ನೀಡಿದ ಅವರು ಕರೋನಾ ಮತ್ತು ಪ್ರವಾಹದ ನಿರ್ವಹಣೆ ಸಮರ್ಪಕವಾಗಿ ನಡೆಯಬೇಕು.ಸರ್ಕಾರ ಅಗತ್ಯ ಮತ್ತು ಅನಿವಾರ್ಯ ಕೆಲಸಗಳಿಗೆ ಯಾವ ಕೊರತೆಯನ್ನೂ ಮಾಡುವುದಿಲ್ಲ. ಅನಾಹುತ ಅವಗಢದ ಸಂದರ್ಭಗಳಲ್ಲಿ ಜನರ ಸೇವೆಗಾಗಿ ಅಧಿಕಾರಿಗಳೂ ಶ್ರಮಿಸದಿದ್ದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ ಎಂದು ಎಚ್ಚರಿಸಿದರು.
ನೂತನ ಮುಖ್ಯಮಂತ್ರಿಗಳ ಚೊಚ್ಚಲ ಪ್ರವಾಸ, ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ಬಗ್ಗೆ ಸ್ಥಳೀಯರೂ ಸಂತಸ ಹಂಚಿಕೊಂಡರು. ತಮ್ಮ ಪ್ರವಾಸವನ್ನು ಉತ್ತರ ಕನ್ನಡದಿಂದ ಪ್ರಾರಂಭಿಸಿದ ಮುಖ್ಯಮಂತ್ರಿಗಳೂ ಕೂಡಾ ಈ ಭೇಟಿ ಹಲವು ಉತ್ತಮ ಕೆಲಸಗಳಿಗೆ ಶುಭಾರಂಭ ಎಂದು ಖುಷಿ ಪಟ್ಟರು.
ಮುಖ್ಯಮಂತ್ರಿಗಳಿಗೆ ಜೊತೆಯಾಗಿದ್ದ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ಪ್ರಮೋದ್ ಹೆಗಡೆ ಬಸವರಾಜ್ ಬೊಮ್ಮಾಯಿಯವರಿಗೆ ಪ್ರವಾಹ ಪೀಡಿತರ ತೊಂದರೆ ಮತ್ತು ಕಳಚೆ, ಕಲ್ಲೇಶ್ವರಗಳ ಪುನರ್ವಸತಿ ಕೇಂದ್ರಗಳ ಜನರ ಬವಣೆಗಳನ್ನು ವಿವರಿಸಿದರು. ಮೊದಲ ಪ್ರವಾಸದಲ್ಲೇ ಸ್ಥಳಿಯರಿಗೆ ಭರವಸೆ ತುಂಬುವಲ್ಲಿ ಯಶಸ್ವಿಯಾದ ಮುಖ್ಯಮಂತ್ರಿಗಳು ತಮ್ಮ ಭೇಟಿಯಿಂದ ಶುಭಗಳಿಗೆ ಪ್ರಾರಂಭವಾಗಬಹುದು ಎಂದರು.



