

ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾದಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ (ಪ.ಜಾ.) 2021-2022ನೇ ಸಾಲಿಗೆ ಆಂಗ್ಲ ಮಾಧ್ಯ ಮದ 6ನೇ ತರಗತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಸಲ್ಲಿಸಲು ಅಗಷ್ಟ-10 ಕೊನೆಯದಿನವಾಗಿದ್ದು ಸೆ.16ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಹಾಲಿ 6ನೇತರಗತಿಯಲ್ಲಿ ಓದುತ್ತಿರುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಜಾತಿ, ಆದಾಯ ಪ್ರಮಾಣ ಪತ್ರ, ಫೋಟೋ, ಸ್ಯಾಟ್ಸ್ ನಂಬರ್ ಮತ್ತು ಮೊಬೈಲ್ ನಂಬರ್‍ಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲ ಸುಧಾಕರ ಎಂ.ನಾಯ್ಕ
(8762634861)ಅವರನ್ನು ಸಂಪರ್ಕಿಸುವಂತೆ ವಸತಿ ಶಾಲೆಯ ಪ್ರಕಟಣೆ ತಿಳಿಸಿದೆ.



ಇವರು ಮಾಮು ಮಕ್ಕಳು! ಮಧು ಬಂಗಾರಪ್ಪ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ
ಸಿದ್ದಾಪುರ
ತಾಲೂಕಿನ ಕೆಲವು ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಹುಚ್ಚುನಾಯಿ ಕಚ್ಚುತ್ತಿರುವ ಪ್ರಕರಣ ಹೆಚ್ಚಾಗಿದೆ. ತಾಲೂಕಿನ ಎಲ್ಲ ಪಶು ಆಸ್ಪತ್ರೆಯಲ್ಲಿ ರೇಬೀಸ್ ಲಸಿಕೆ ಉಚಿತವಾಗಿ ಲಭ್ಯಇದ್ದು ಹೈನುಗಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕು ಪಶುಸಂಗೋಪನಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಶ್ರೇಯಸ್ ಬಿ.ರಾಜ್ ತಿಳಿಸಿದ್ದಾರೆ.
