

ಬೇರೆ ಪಕ್ಷಳಲ್ಲಿರುವ ಬಂಗಾರಪ್ಪ ಅಭಿಮಾನಿಗಳನ್ನು ಕಾಂಗ್ರೆಸ್ ಗೆ ಕರೆತರುವುದಾಗಿ ಮಧು ಬಂಗಾರಪ್ಪ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಕೆ.ಪಿ.ಸಿ.ಸಿ. ಕಾರ್ಯಕಾರಿಣಿ ಸಭೆಯಲ್ಲಿ ಅಧೀಕೃತವಾಗಿ ಕಾಂಗ್ರೆಸ್ ಸೇರಿ ಮಾತನಾಡಿದ ಅವರು ರಾಜ್ಯದ ಯಾವ ಮೂಲೆಗೆ ಹೋದರೂ ಬಂಗಾರಪ್ಪ ಅಭಿಮಾನಿಗಳಿದ್ದಾರೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಬಂಗಾರಪ್ಪ ಕೊಟ್ಟ ಕಾರ್ಯಕ್ರಮಗಳನ್ನು ಜನರು ಈಗಲೂ ನೆನಪಿಸುತ್ತಾರೆ. ಬಂಗಾರಪ್ಪ ಅಭಿಮಾನಿಗಳು ಯಾವ ಪಕ್ಷದ ಪರವಾಗಿ ನಿಲ್ಲುತ್ತಾರೋ ಅವರಿಗೆ ಅಧಿಕಾರ. ಬಿ.ಜೆ.ಪಿ. ಜೆಡಿಎಸ್ ಎಲ್ಲಾ ಪಕ್ಷಗಳಲ್ಲಿ ಬಂಗಾರಪ್ಪ ಹೆಸರು ಕೆಲಸ ಮಾಡಿತ್ತು ಕಾಂಗ್ರೆಸ್ ಕೂಡಾ ಬಂಗಾರಪ್ಪನವರ ಹೋರಾಟದ ಫಲ ಅನುಭವಿಸಿದೆ. ಈಗಲೂ ಕಾಂಗ್ರೆಸ್ ಜೊತೆ ಸೇರಿ ಬಂಗಾರಪ್ಪನವರ ಹೆಸರಿನೊಂದಿಗೆ ಕೆಲಸ ಮಾಡುತ್ತೇವೆ. ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿ ಅದಕ್ಕೆ ಪ್ರತಿಫಲಾಪೇಕ್ಷೆ ಕೂಡಾ ನಮಗಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಕೆ.ಪಿ.ಸಿ.ಸಿ. ಅಧ್ಯಕ್ಷ ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮಧುಬಂಗಾರಪ್ಪನವರೊಂದಿಗೆ ಬಂಗಾರಪ್ಪ ಇದ್ದಾರೆ, ಬಂಗಾರಪ್ಪ ಹೆಸರು, ಪೋಟೊ ಇದ್ದರೆ ಅಲ್ಲಿ ಜನರಿರುತ್ತಾರೆ. ಮಧು ಬಂಗಾರಪ್ಪನವರಿಗೂ ವಯಸ್ಸು, ಶಕ್ತಿ, ಆಸಕ್ತಿ ಇದೆ. ಅವರು ಕಾಂಗ್ರೆಸ್ ಜೊತೆಗೆ ಬೆಳೆಯುವ ನಂಬಿಕೆ, ಭರವಸೆ ತಮಗಿದೆ ಎಂದರು.
ಭಾರತೀಯ ಜನತಾ ಪಾರ್ಟಿ ಸಿದ್ದಾಪುರ ಮಂಡಲದ ಕಾರ್ಯಕಾರಿಣಿ ಸಭೆ ಸಂಪನ್ನ….…… ಸಿದ್ದಾಪುರ ಬಾಲಭವನದಲ್ಲಿ ಬಿ.ಜೆ.ಪಿ. ತಾಲೂಕಾ ಮಂಡಲದ ಕಾರ್ಯಕಾರಣಿ ಸಭೆ ನೆಡೆಸಲಾಯಿತು. ಮಂಡಲ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಅಥಿತಿಗಳಿಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಪಕ್ಕದ ಸಂಘಟನೆ, ಬರುವ ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಬಗ್ಗೆ, ಮೀಸಲಾತಿ ವಿಷಯದ ಬಗ್ಗೆ ಮಾತನಾಡಿದರು.
ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ ನಾಯಕ ದೀಪ ಬೇಳಗಿಸಿ ಭಾರತ ಮಾತೆಗೆ ಪುಷ್ಪ ಅರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಕೋವಿಡ್ 2ನೇ ಅಲೆಗೆ ಮೃ ತಪಟ್ಟ ಪಾರ್ಟಿಯ ಕಾರ್ಯಕರ್ತರು. ಹಿತೈಷಿಗಳು, ಊರಿನ ಗಣ್ಯರು ಹಾಗೂ ನಾಗರಿಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಷಷ ಮೌನ ಆಚರಣೆ ಮಾಡಿ ಶ್ರದ್ಧಾಂ ಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದ ಉದ್ಘಾಟಕ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ ನಾಯಕ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ಎರಡನೆ ಅಲೆಗೆ ಪಾರ್ಟಿ ಕೈಗೊಂಡ ಕಾರ್ಯಕ್ರಮ ಕಿಟ್ , ಮಾಸ್ಕ್ ಹಾಗೂ ಮಾತ್ರೆ ವಿತರಣೆ ಪಕ್ಷದ ಸಂಘಟನೆ ಬರುವ ಚುನಾವಣೆ ಕುರಿತು ಮಾತಾಡಿದರು. ಹಾಗೂ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿ ಚರ್ಚಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದವರ ಪಟ್ಟಿ ಪಡೆದು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಯಾವ ರೀತಿಯಲ್ಲಿ ಬೆಳೆದು ಬಂದ ವಿಷಯದ ಬಗ್ಗೆ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಹೆಗಡೆ. ಸೇವಾಹಿ ಸಂಘಟನೆ ಹಾಗೂ ಪಕ್ಷ ಸಂಘಟನೆ ಚಟುವಟಿಕೆ ಕುರಿತು ಮಾತನಾಡಿದರು. ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕೆ.ಜಿ. ನಾಯ್ಕ ಹಣಜಿಬೈಲ್ ಸಮಾರೋಪ ಭಾಷಣ ಮಾಡಿದರು.
ಪಕ್ಷದ ಕಾರ್ಯಕರ್ತರ ಪಾತ್ರ ,ಪಕ್ಷ ಸಂಘಟನೆಯವರ ಜವಾಬ್ದಾರಿ ಬಗ್ಗೆ ಹಾಗೂ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆ ಹಾಗೂ ವಂದನಾರ್ಪಣೆಯನ್ನು ಮಂಡಲ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮೇಸ್ತ ನಿರ್ವಹಿಸಿದರು. ವೇದಿಕೆಯ ಮೇಲೆ ನಿಕಟ ಪೂರ್ವ ಮಂಡಲ ಅಧ್ಯಕ್ಷ ಎಂ.ವಿ.ಭಟ್ಟ ತಟ್ಟಿಕೈ. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಗಳಾದ ಕ್ರಷ್ಣಮೂರ್ತಿ ಮಡಿವಾಳ, ಗುರುಪ್ರಸಾದ ಹೆಗಡೆ ಉಪಸ್ಥಿತರಿದ್ದರು.

