

ವಿಧಾನಸಭಾಧ್ಯಕ್ಷನಾಗಿ 2 ವರ್ಷ ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ, ಇ-ವಿಧಾನ್ ಜಾರಿಯಾಗದ ಬಗ್ಗೆ ಬೇಸರವಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸದನದಲ್ಲಿ ನಡೆಯುತ್ತಿರುವ ಕಲಾಪದ ಪಾರದರ್ಶಕತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದೆ. ವಿಧಾನಸಭೆ ಅಧಿವೇಶನದ ಕಲಾಪ ಚಿತ್ರೀಕರಣ ಮಾಡಲು ಮಾಧ್ಯಮಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿರುವ ನಿರ್ಧಾರ ಸಭಾಧ್ಯಕ್ಷನಾಗಿ ನನ್ನೊಬ್ಬನ ನಿರ್ಧಾರ ಮಾತ್ರವಲ್ಲ. ಲೋಕಸಭಾಧ್ಯಕ್ಷರು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ತೆಗೆದುಕೊಂಡ ನಿರ್ಧಾರವಿದು, ಅನೇಕ ರಾಜ್ಯಗಳಲ್ಲಿ ಈ ವಿಧಾನವಿದೆ,
ಸಿದ್ದಾಪುರ: ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಕಾಳಜಿ ಕೇಂದ್ರಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಭಾನುವಾರ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಳೆಯಂದಾಗಿ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯಲ್ಲಿ ಮನೆಯನ್ನು ಕಳೆದುಕೊಂಡ, ಗದ್ದೆ-ತೋಟ ಹಾಗೂ ರಸ್ತೆಗಳ ಹಾನಿ ಕುರಿತು ಜಿಪಂ ಮಾಜಿ ಸದಸ್ಯ ಎಸ್.ಆರ್.ಹೆಗಡೆ ಕುಂಬಾರಕುಳಿ, ಗ್ರಾಪಂ ಸದಸ್ಯ ಆರ್.ಕೆ.ನಾಯ್ಕ ಹಾರ್ಸಿಕಟ್ಟಾ, ಸಿದ್ದಾರ್ಥ ಗೌಡರ್ ಮುಠ್ಠಳ್ಳಿ ಮಾಹಿತಿ ನೀಡಿದರು.
ಮನೆಯನ್ನು ಕಳೆದುಕೊಂಡವರು ನಮಗೆ ಮನೆ ಕಟ್ಟಲು ಸರಿಯಾದ ಜಾಗವನ್ನು ನೀಡುವಂತೆ ಶಾಸಕರಲ್ಲಿ ವಿನಂತಿಸಿಕೊಂಡರು . ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಆರ್ಥಿಕ ಸಹಾಯ ನೀಡಲಿದೆ. ಸೂಕ್ತ ಸ್ಥಳ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿ ಧರೆ ಕುಸಿತದಿಂದ ಮೃತಪಟ್ಟ ಹೊಸಗದ್ದೆಯ ದ್ಯಾವಾ ರಾಮ ನಾಯ್ಕ, ಕಂಚಿಮನೆಯಲ್ಲಿ ಮೃತಪಟ್ಟ ದೀಕ್ಷಾ ನಾಗರಾಜ ಮಡಿವಾಳ ಕುಟುಂಬಕ್ಕೆ ಆರ್ಥೀಕ ಸಹಕಾರ ನೀಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ನಿವೇದಿತ ಆಳ್ವಾ, ತಾಲೂಕು ಅಧ್ಯಕ್ಷ ವಸಂತ ನಾಯ್ಕ, ಜಿಪಂ ಮಾಜಿ ಸದಸ್ಯ ಎಸ್.ಆರ್.ಹೆಗಡೆ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಎಂ.ಹೆಗಡೆ, ಗ್ರಾಪಂ ಅಧ್ಯಕ್ಷೆ ವಿಧ್ಯಾ ಪಿ.ನಾಯ್ಕ, ಸಿದ್ದಾರ್ಥ ಗೌಡರ್, ಆರ್.ಕೆ.ನಾಯ್ಕ, ಶಾಂತ ಗೌಡರ್, ಅಕ್ಷತಾ ಮಡಿವಾಳ, ಕೆ.ಜಿ.ನಾಗರಾಜ,ಆರ್.ಎಂ.ಹೆಗಡೆ, ಸಿ.ಆರ್.ನಾಯ್ಕ ಇತರರಿದ್ದರು.
ಬೆಂಗಳೂರು: ಸದನದಲ್ಲಿ ನಡೆಯುತ್ತಿರುವ ಕಲಾಪದ ಪಾರದರ್ಶಕತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದೆ. ವಿಧಾನಸಭೆ ಅಧಿವೇಶನದ ಕಲಾಪ ಚಿತ್ರೀಕರಣ ಮಾಡಲು ಮಾಧ್ಯಮಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿರುವ ನಿರ್ಧಾರ ಸಭಾಧ್ಯಕ್ಷನಾಗಿ ನನ್ನೊಬ್ಬನ ನಿರ್ಧಾರ ಮಾತ್ರವಲ್ಲ. ಲೋಕಸಭಾಧ್ಯಕ್ಷರು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ತೆಗೆದುಕೊಂಡ ನಿರ್ಧಾರವಿದು, ಅನೇಕ ರಾಜ್ಯಗಳಲ್ಲಿ ಈ ವಿಧಾನವಿದೆ, ಇದು ನನ್ನೊಬ್ಬನ ತೀರ್ಮಾನವಲ್ಲ, ಲೋಕಸಭೆಯ ಕಾರ್ಯವೈಖರಿಯನ್ನು ನಾವು ಇಲ್ಲಿ ವಿಧಾನಸಭೆಯಲ್ಲಿ ಪಾಲಿಸುವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೆರವೇರಿದ ವಿಧಾನಸಭೆಯ 2 ವರ್ಷದ ಸಾಧನೆಗಳ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಕಾಗೇರಿಯವರು, ವಿಧಾನಮಂಡಲ ಕಲಾಪಗಳನ್ನು ಪಾರದರ್ಶಕವಾಗಿ ಜನತೆ ಮುಂದಿಡಬೇಕೆಂಬ ವಿಷಯಕ್ಕೆ ನಾನು ಬದ್ಧನಾಗಿದ್ದು ಈ ಎರಡು ವರ್ಷಗಳಲ್ಲಿ ನಾನು ಆ ಕೆಲಸವನ್ನು ಮಾಡಿದ್ದೇನೆ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸಭಾಧ್ಯಕ್ಷನಾಗಿ ನನ್ನ ಕೆಲಸ ಸಮರ್ಪಕವಾಗಿ ನಿರ್ವಹಿಸುತ್ತಿದ್ದೇನೆ. 2 ವರ್ಷಗಳಲ್ಲಿ ಅಂದುಕೊಂಡಿದ್ದನ್ನ ಬಹುತೇಕ ಮಾಡಿದ್ದೇವೆ. ಸಭಾಧ್ಯಕ್ಷನಾಗಿ ಮುಂದಿನ ಎರಡು ವರ್ಷಗಳ ಕಾಲವೂ ಪಾರದರ್ಶಕವಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು.
ನಿನ್ನೆ ಸ್ಪೀಕರ್ ಮನೆಯಲ್ಲಿ ನಡೆದ ಸಭೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ ಅವರು ನಾನು ವಿಧಾನಸಭೆಯ ಸಭಾಧ್ಯಕ್ಷ. ನನ್ನನ್ನು ಯಾರು, ಎಲ್ಲಿ ಬೇಕಾದರೂ ಭೇಟಿ ಮಾಡಬಹುದು. ನಿನ್ನೆಯೂ ಕೆಲವರು ಬಂದು ಭೇಟಿ ಮಾಡಿದ್ದಾರೆ. ಅವರ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಇವತ್ತು, ಮೊನ್ನೆ ಕೂಡಾ ಭೇಟಿ ಮಾಡಿದ್ದಾರೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಈ-ವಿಧಾನ್ ಜಾರಿ ಸಾಧ್ಯವಾಗಿಲ್ಲ ಎನ್ನುವ ಬೇಸರವಿದೆ. ಇದಕ್ಕೆ ಸರ್ಕಾರದ ಧೋರಣೆ ಮತ್ತು ನಿಲುವೇ ಕಾರಣ. ಅನುದಾನದ ನೆರವಿಗೆ ಸರ್ಕಾರವನ್ನೇ ಅವಲಂಬಿಸಿದ್ದೇವೆ. ಸರ್ಕಾರ ಸ್ಪಂದಿಸಿಲ್ಲ, ಅಧಿಕಾರಶಾಹಿ ಧೋರಣೆಯೇ ಕಾರಣ. ಅಧಿಕಾರಶಾಹಿ ಧೋರಣೆ ಬದಲಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಣ್ಣ ಪುಟ್ಟ ರಾಜ್ಯಗಳಾದ ಕೇರಳ, ಹಿಮಾಚಲ ಪ್ರದೇಶದಲ್ಲಿ ಕೂಡ ಇ-ವಿಧಾನ್ ಜಾರಿಯಲ್ಲಿದೆ. ಆದರೆ ಐಟಿ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಇಲ್ಲ, ಹೊಸತನಕ್ಕೆ ಎಲ್ಲಿಯ ತನಕ ನಾವು ತೆರೆದುಕೊಳ್ಳುವುದಿಲ್ಲವೋ ಅಲ್ಲಿ ತನಕ ಏನೂ ಸಾಧ್ಯವಾಗೋದಿಲ್ಲ. ಮುಂದಿನ ದಿನಗಳಲ್ಲಿ ಇ-ವಿಧಾನ್ ಜಾರಿಗೆ ಬರುವ ವಿಶ್ವಾಸ ಇದೆ ಎಂದರು.
ಕರ್ನಾಟಕದ ವಿಧಾನಪರಿಷತ್ ಗೆ ಶತಮಾನಗಳ ಇತಿಹಾಸವಿದೆ. ಅದಕ್ಕಿರುವ ಪ್ರಾಮುಖ್ಯತೆಯನ್ನು ಎತ್ತಿಹಿಡಿದು ಅಗತ್ಯತೆಯನ್ನು ಮನಗಂಡಿರುವ ಸಂವಿಧಾನಕರ್ತರೂ ಸಹ ಅಗತ್ಯತೆಯನ್ನು ಮನಗಂಡು ವಿಧಾನ ಪರಿಷತ್ ರಚಿಸುವ ತೀರ್ಮಾನವನ್ನು ಕೊಟ್ಟಿದ್ದಾರೆ. ವಿಧಾನ ಪರಿಷತ್ ಬೇಕೆ, ಬೇಡವೇ ಎಂದು ಮೇಲ್ಮನೆಯವರೇ ತೀರ್ಮಾನಿಸಬೇಕಾಗುತ್ತದೆ ಎಂದರು. (kpc)
