

ಹೊರ ಊರುಗಳಲ್ಲಿ ಕೆಲಸ ಮಾಡುತಿದ್ದ ಮನುವಿಕಾಸ ಸಂಸ್ಥೆ ತಮ್ಮೂರಿನ ಜನರಿಗೆ ನೆರವಾಗಿದ್ದು ಖುಷಿಯ ವಿಚಾರ, ಪರ ಊರುಗಳಲ್ಲಿ ಈ ಸಂಸ್ಥೆಯ ನೆರವನ್ನು ವಿತರಿಸಿದ ನಮಗೆ ಅವರ ಗ್ರಾಮದಲ್ಲೇ ಕೊಡುವುದಕ್ಕೆ ಸಂತೋಷ-ಸಂಬ್ರಮ- ವಿಶ್ವೇಶ್ವರ ಹೆಗಡೆ ಕಾಗೇರಿ
ಸಿದ್ದಾಪುರ: ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ವಿಪರೀತ ಹಾನಿ ಸಂಭವಿಸಿದ್ದು ಸಮೀಕ್ಷೆ ಸರಿಯಾಗಿ ಆಗಬೇಕು ಮಾನವೀಯತೆಯ ದೃಷ್ಟಿಯಿಂದ ಕೆಲಸ ಮಾಡುವುದು ಬಹಳ ಮುಖ್ಯ. ಬಡವರ ಬಗ್ಗೆ ಮಾನವೀಯತೆ ತೋರಬೇಕು ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಸೋಮವಾರ ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಹಸರಗೋಡ ಪಂ. ಕರ್ಜಗಿ ಶಾಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಖಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ರಲ್ಲಿ ಅವರ ಕುಂದುಕೊರತೆ ಬಗ್ಗೆ ವಿಚಾರಿಸಿ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು ನಾನು ವಿಧಾನ ಸಭೆಯ ಸಭಾಧ್ಯಕ್ಷನಾಗಿರುವುದರಿಂದ ಪೂರ್ವಯೋಜಿತ ಕಾರ್ಯಕ್ರಮವಿದ್ದರಿಂದ ಈಗ ಈ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೆನೆ. ನೆರೆ ಬಂದ ಸಮಯದಲ್ಲಿ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳ ಮಾಹಿತಿ ಪಡೆದು ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ಧೆಶನ ನೀಡಿ ಪರಿಹಾರವಿತರಿಸಲು ತಿಳಿಸಿದ್ದೇನೆ. ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಗುಡ್ಡಗಾಡು ಇರುವುದರಿಂದ ಹಾನಿ ಹೆಚ್ಚಾಗುವುದು ಸ್ವಾಭಾವಿಕ .ಆದರೆ ಈವರ್ಷ ಅನಿರೀಕ್ಷಿತವಾಗಿ ಹೆಚ್ಚಿನ ಮಳೆಯಾಗಿದ್ದು ಬಹಳ ಹಾನಿಯಾಗಿದೆ. ಮನೆ,ರಸ್ತೆ ಹಾನಿಯಾಗಿದೆ. ಪೂರ್ಣಪ್ರಮಾಣದಲ್ಲಿ ಮನೆಹಾನಿಯಾದವರಿಗೆ ತಕ್ಷಣ ಪರಿಹಾರ ನೀಡಲು ಅಧಿಕಾರಿಗಳಿಗೆ ತಿಳಿಸಿರುತ್ತೆನೆ.
ಜಿಲ್ಲೆಗೆ 200 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ
ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ಜಾಗದಲ್ಲಿ ಮನೆ ಹೊಂದಿದವರಿಗೆ ಮನೆ ಸಂಪೂರ್ಣವಾಗಿ ಪ್ರಕೃತಿ ವಿಕೋಪದಿಂದ ಹಾನಿಯಾದಲ್ಲಿ ಅವರಿಗೆ ತಕ್ಷಣ 5 ಲಕ್ಷ ರೂಪಾಯಿ ನೀಡಲಾಗುವುದು, ಬೆಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಮನೆ ಹೊಂದಿದವರಿಗೆ ವಿಪರೀತ ಮಳೆಯಿಂದ ಹಾನಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿ ಗಳಲ್ಲಿ ಮಾತನಾಡಿ ಪೂರಕ ಆದೇಶ ಮಾಡಿಸಲಾಗುವುದು ಎಂದರು.
ಹಸರಗೋಡ ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸಗದ್ದೆ ಬಾಳೂರ, ಧರೆ ಕುಸಿತ ಪ್ರದೇಶಗಳಿಗೆ, ಕರ್ಜಗಿ, ಬಾಳೇಸರ ಕಾಳಜಿ ಕೇಂದ್ರ ಗಳಿಗೆ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಸಾದ್ ಎಸ್.ಎ, ತಾಲ್ಲೂಕು ಪಂಚಾಯಿತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.


