

ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.ಹಾಳಾದ ರಸ್ತೆಗಳು, ಮುರಿದ ಸೇತುವೆ. ಕುಸಿದ ಮನೆಗಳು ತೇಲಿಹೋದ ತೂಗುಸೇತುವೆಗಳಿಂದಾಗಿ ಸಾರ್ವಜನಿಕ ಸಂಪರ್ಕ ಸೇತು ಕಡಿತಗೊಂಡಿದೆ. ಇಂಥ ಸಮಸ್ಯೆಗಳ ಗ್ರಾಮಗಳಿಗೆ ಈಗ ಅಧಿಕಾರಿಗಳು,ಜನಪ್ರತಿನಿಧಿಗಳು, ರಾಜಕೀಯ ಮುಖಂಡರ ತಂಡ ಭೇಟಿ ನೀಡುತ್ತಿದೆ. ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಶಿರಸಿ, ಸಿದ್ದಾಪುರ,ಹೊನ್ನಾವರ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ನೂರಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಮುರಿದು, ಕುಸಿದುಹೋದ ಸೇತುವೆಗಳ ದುರಸ್ಥಿ-ಪುನರ್ ನಿರ್ಮಾಣಕ್ಕೆ ಸಮಯ ಹಿಡಿಯಬಹುದು. ಆದರೆ ತೇಲಿಹೋದ,ಕೊಚ್ಚಿಹೋದ ತೂಗುಸೇತುವೆಗಳ ನಿರ್ಮಾಣ, ದುರಸ್ಥಿ ಕೂಡಾ ಸರ್ಕಾರಕ್ಕೆ ಸವಾಲಾಗಿದೆ.ಈ ತೊಂದರೆಯ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ಸಾರ್ವಜನಿಕರ ಅಹವಾಲು ಕೇಳಿದರು.
ಬಾಳೂರು ತೂಗು ಸೇತುವೆ ಕೊಚ್ಚಿಹೋಗಿ ಕೆಲವು ಗ್ರಾಮಗಳಿಗೆ ಸಂಪರ್ಕಕೊಂಡಿ ಕಳಚಿದೆ.ಅಲ್ಲಿಯ ಜನರಿಗೆ ಅನುಕೂಲವಾಗುವಂತೆ ಶೀಘ್ರ ವ್ಯವಸ್ಥೆ ಮಾಡಿ ಅವರ ತೊಂದರೆ ತಪ್ಪಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು.- ರಘುಪತಿ ಹೆಗಡೆ, ತಾ.ಪಂ. ಮಾಜಿ ಸದಸ್ಯ
ತೂಗು ಸೇತುವೆ ಪುನರ್ ನಿರ್ಮಾಣಕ್ಕೆ ಅಂದಾಜುವೆಚ್ಚದ ವರದಿ ತರಿಸಿಕೊಂಡು ತಾತ್ಕಾಲಿಕ, ಹಾಗೂ ಶಾಶ್ವತ ಪರಿಹಾರ ಕ್ರಮದ ಬಗ್ಗೆ ಶೀಘ್ರ ಕ್ರಮ ಜರುಗಿಸುತ್ತೇವೆ-ಮುಲ್ಲೈ ಮುಗಿಲನ್ (ಜಿಲ್ಲಾಧಿಕಾರಿ)
ಜಿಲ್ಲಾಧಿಕಾರಿಗಳಿಗೆ ತಮ್ಮ ದು:ಖ ದುಮ್ಮಾನಗಳನ್ನು ಹೇಳಿಕೊಂಡು ಹಗುರಾಗಲು ಬಂದ ಜನರಿಗೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿ ಭರವಸೆ ತುಂಬಿದರು. ಈ ಸಮಯದಲ್ಲಿ samajamukhi.net ಜೊತೆಗೆ ಮಾತನಾಡಿದ ಅವರು ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಬೆಟ್ಟ-ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾದ ಮನೆಗಳೂ ಕುಸಿದಿವೆ. ಅವರಿಗೆ ನೆರವಾಗಲು ಸರ್ಕಾರದ ಹೊಸ ಆದೇಶಕ್ಕೆ ಕಾಯುತಿದ್ದೇವೆ. ಖಾಸಗಿ ಪ್ರದೇಶದ ಮನೆಗಳು, ಪ್ರವಾಹ ಪೀಡಿತ ಜನರಿಗೆ ಪರಿಹಾರ ವಿತರಿಸಿದ್ದೇವೆ. ರಸ್ತೆ,ಸೇತುವೆಗಳ ಸಂಪರ್ಕ ಕಡಿತವಾದ ಪ್ರದೇಶಗಳ ಮಾಹಿತಿ ಸಂಗ್ರಹಿಸಿ ಪರಿಹಾರ ಕಾರ್ಯ ಪ್ರಾರಂಭಿಸಿದ್ದೇವೆ. ತಕ್ಷಣಕ್ಕೆ ಅಗತ್ಯವಿರುವ ತುರ್ತು ವ್ಯವಸ್ಥೆ ಕಲ್ಪಿಸಿದ್ದೇವೆ. ತೂಗುಸೇತುವೆ, ಸೇತುವೆಗಳ ವಿಚಾರದಲ್ಲಿ ಮಳೆ, ಮತ್ತೆ ಪ್ರವಾಹದ ಸಾಧ್ಯತೆ, ಇಂಥ ಕಾರಣಗಳನ್ನು ಪರಿಶೀಲಿಸಿ ವ್ಯವಸ್ಥೆ ಮಾಡುತಿದ್ದೇವೆ. ಜನತೆಕೂಡಾ ಸರ್ಕಾರಿ ಸಂರಚನೆ, ವ್ಯವಸ್ಥೆ ಜೊತೆ ಸಹರಿಸಬೇಕು ಎಂದು ವಿನಂತಿಸಿದರು.
politics-
ಮುನಿಸು ದೂರಾಗಿಸಲು ಬಿಜೆಪಿ ಯತ್ನ: ಜಗದೀಶ್ ಶೆಟ್ಟರ್’ಗೆ ಸ್ಪೀಕರ್ ಸ್ಥಾನ ನೀಡಲು ಚಿಂತನೆ?
ಬಿಜೆಪಿಯಲ್ಲಿ ನಾಯಕತ್ವ ವಿಚಾರ ಸಂಬಂಧ ಅಸಮಾಧಾನಗಳು ಭುಗಿಲೆದ್ದಿವೆ. ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿಯವರ ಸಂಪುಟದಲ್ಲಿ ಸೇರ್ಪಡೆಗೊಳ್ಳುವುದಿಲ್ಲ ಎಂದು ತಮ್ಮ ಮುನಿಸನ್ನು ಹೊರಹಾಕಿದ್ದ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ತಣ್ಣಗಾಗಿಸಲು ಬಿಜೆಪಿ ಯತ್ನ ನಡೆಸುತ್ತಿದ್ದು, ಇದರಂತೆ ಶೆಟ್ಟರ್ ಅವರಿಗೆ ಸ್ಪೀಕರ್ ಸ್ಥಾನ ನೀಡಲು ಚಿಂತನೆ…

ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ವಿಚಾರ ಸಂಬಂಧ ಅಸಮಾಧಾನಗಳು ಭುಗಿಲೆದ್ದಿವೆ. ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿಯವರ ಸಂಪುಟದಲ್ಲಿ ಸೇರ್ಪಡೆಗೊಳ್ಳುವುದಿಲ್ಲ ಎಂದು ತಮ್ಮ ಮುನಿಸನ್ನು ಹೊರಹಾಕಿದ್ದ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ತಣ್ಣಗಾಗಿಸಲು ಬಿಜೆಪಿ ಯತ್ನ ನಡೆಸುತ್ತಿದ್ದು, ಇದರಂತೆ ಶೆಟ್ಟರ್ ಅವರಿಗೆ ಸ್ಪೀಕರ್ ಸ್ಥಾನ ನೀಡಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪಕ್ಷದ ವಿಚಾರವೇ ಇರಲಿ, ಸರ್ಕಾರದ ವಿಷಯವೇ ಇರಲಿ ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾದೆ ಸಿಟ್ಟು ಮಾಡಿಕೊಳ್ಳದೆ ಸಹನೆಯಿಂದಲೇ ಹೇಳಿಕೆ ಕೊಡುವ, ಸ್ವಭಾವದವರು ಜಗದೀಶ ಶೆಟ್ಟರ್ ಅವರದ್ದಾಗಿದೆ. ಆದರೆ, ನೂತನ ಸಿಎಂ ಅಧಿಕಾರ ವಹಿಸಿಕೊಂಡಿದ್ದೇ ತಡ ಶೆಟ್ಟರ್ ಅವರು ಸಚಿವ ಸ್ಥಾನ ಕುರಿತಾಗಿ ನೀಡಿರುವ ಆಕ್ರೋಶದ ಹೇಳಿಕೆ ಇದೀಗ ಬಿಜೆಪಿಯಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.


ಹೀಗಾಗಿ, ಶೆಟರ್ ಅವರ ಮುನಿಸು ದೂರಾಗುವಂತೆ ಮಾಡಲು ಯತ್ನ ನಡೆಸಲು ಮುಂದಾಗಿರುವ ಬಿಜೆಪಿ, ಪ್ರಸ್ತುತ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ, ಆ ಸ್ಥಾನಕ್ಕೆ ಶೆಟ್ಟರ್ ಅವರನ್ನು ತರಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತು ಆಪ್ತರೊಂದಿಗೆ ಪ್ರತಿಕ್ರಿಯೆ ನೀಡಿರುವ ಶೆಟರ್ ಅವರು, ಈ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ಒಂದು ವೇಳೆ ಅಂತಹ ಪ್ರಸ್ತಾಪ ಬಂದರೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಶೆಟ್ಟರ್ ಅವರು, ನಾನು ಯಾವುದೇ ಕಾರಣಕ್ಕೂ ಬಸವರಾಜ್ ಬೊಮ್ಮಾಯಿಯವರ ಸಚಿವ ಸಂಪುಟಕ್ಕೆ ಸೇರುವುದಿಲ್ಲ. ಸಕನಾಗಿಯೇ ನಾನು ಕೆಲಸ ಮುಂದುವರಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದವನು. ಸ್ವಾಭಿಮಾನ ಗೌರವದ ಹಿನ್ನೆಲೆ ಈ ನಿರ್ಧಾರ ಮಾಡಿದ್ದೇನೆ. ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನಾನು ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಆಗ ಸಚಿವನಾಗಲು ನನಗೆ ಯಾವುದೇ ಮುಜುಗರವಿರಲಿಲ್ಲ. 10 ವರ್ಷ ವಿಪಕ್ಷದ ನಾಯಕನಾಗಿ, ಸ್ಪೀಕರ್ ಆಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮತ್ತು ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ನನಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ನನಗೆ ಪಕ್ಷ ಎಲ್ಲ ರೀತಿಯ ಜವಾಬ್ದಾರಿ ಮತ್ತು ಗೌರವವನ್ನು ಕೊಟ್ಟಿದೆ. ಹೀಗಾಗಿ ನಾನು ಸಂಪುಟ ಸೇರುವುದಿಲ್ಲ ಎಂದು ಹೇಳಿದ್ದರು. (kpc)


