

ಕುಮಟಾ ಮೂಲದ ಸಾಹಿತಿ, ಶಿಕ್ಷಕ ಆರ್. ಕೆ. ನಾಯಕ ಮಾಸ್ಕೇರಿ ಗುರುವಾರ ಶಿರಸಿಯಲ್ಲಿ ನಿಧನರಾಗಿದ್ದಾರೆ. ಸಿದ್ದಾಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಸಲ್ಲಿಸಿದ್ದ ಅವರು ಸಾಹಿತಿ, ಸಾಹಿತ್ಯ ಪರಿಚಾರಕರಾಗಿ ಹೆಸರು ಮಾಡಿದ್ದರು.
ದೀರ್ಘ ಕಾಲಿಕ ಅನಾರೋಗ್ಯದಿಂದ ಬಳಲಿದ ಅವರು ಅನಾರೋಗ್ಯದ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆದಿದ್ದರು. ಪತ್ನಿ ಶಿಕ್ಷಕಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಅಪಾರ ಬಂಧು ಬಳಗ ವನ್ನು ಅಗಲಿದ ಅವರ ಸಾವಿಗೆ ಸಾಹಿತಿಗಳಾದ ಬಿ. ಎನ್. ವಾಸರೆ, ಕೋಲ್ಶಿರ್ಸಿ ಕನ್ನೇಶ್, ಗೋಪಾಲ ಭಾಷಿ, ತಮ್ಮಣ್ಣ ಬೀಗಾರ್, ರತ್ನಾಕರ್ ನರಮುಂಡಿಗೆ ಸೇರಿದ ಅನೇಕರು ಸಂತಾಪ ಸೂಚಿಸಿದ್ದಾರೆ.

