ಸಣ್-ಪುಟ್ ಸುದ್ದಿ- ಸಾಧನೆ,ಅಭಿನಂದನೆ

ನೀರಜ್ ಚೋಪ್ರಾರ ಸಾಧನೆ ಭಾರತದ ಟ್ರಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಹೊಸ ಮಿಂಚು ಮೂಡಿಸಲಿದೆ. ನಾವು ಇಂದು ಪಡುತ್ತಿರುವ ಹರ್ಷದ ಹಿಂದೆ ನಮ್ಮ ಶಿರಸಿ ಬೆಂಗಳೆಯ ಕಾಶಿನಾಥ ನಾಯ್ಕರ ಪಾಲೂ ಇದೆ. 2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಆ ಮೂಲಕ ಭರ್ಚಿ ಎಸೆತದಲ್ಲಿ ದೇಶಕ್ಕೆ ಪ್ರಥಮ ಪದಕ ಗಳಿಸಿಕೊಟ್ಟ ಕಾಶಿ ನೀರಜರನ್ನು ಆರಂಭದಲ್ಲೇ ಗುರುತಿಸಿ ತರಬೇತಿ ನೀಡಿದ್ದಾರೆ. ಇವರಿಬ್ಬರ ಕಠಿಣ ಪರಿಶ್ರಮದ ಫಲ ಇಂದು ನಮ್ಮ ಮುಂದಿದೆ. ಕಂಗ್ರಾಟ್ಸ ನೀರಜ , ಕಂಗ್ರಾಟ್ಸ ಕಾಶಿ ,ಕಂಗ್ರಾಟ್ಸ ಇಂಡಿಯಾ🥇 -ಸುನಿಲ್ ಬಾರ್ಕೂರ್

ಒಲಿಂಪಿಕ್ಸ್​ನಲ್ಲಿ ಭಾರತದ 120 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಶತಮಾನದ ಬಳಿಕ #ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ #ಚಿನ್ನದ ಪದಕ ದಕ್ಕಿದೆ. #ಜಾವಲಿನ್​ ಥ್ರೋ ನಲ್ಲಿ ಭಾರತದ ನೀರಜ್​​ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನೀರಜ್​​ ಚೋಪ್ರಾಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆಯ ಕಾಶೀನಾಥ್​ ನಾಯ್ಕ ತರಬೇತಿ ನೀಡಿದ್ದರು. ಇಬ್ಬರಿಗೂ ಅಭಿನಂದನೆಗಳು. -ಹರೀಶ್ ಕುಮಾರ್

ಚರಿತ್ರೆ ನಿರ್ಮಾಣವಾಗಿದೆ!ಪ್ರತಿಯೊಬ್ಬ ಭಾರತೀಯರಿಗೂ ಅಭಿನಂದನೆಗಳು!

😍ಅಥ್ಲೆಟಿಕ್ ಪಂದ್ಯವೊಂದರಲ್ಲಿ (ಜಾವೆಲಿನ್ ಎಸೆತ) ಭಾರತೀಯರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ!ಅಭಿನವ್ ಭಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ. -ರಾಜಾರಾಮ್ ತಲ್ಲೂರು

ಮೋದಿ ಯಾವಾಗ ಕ್ರಿಕೆಟ್ ಆಡಿದ್ದರು.? ಭಾರತದ ಮಾಜಿ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ನೀಡಲಾಗುತ್ತಿದ್ದ ಖೇಲ್ ರತ್ನ ಪ್ರಶಸ್ತಿ ಅನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನಾ ಪ್ರಶಸ್ತಿ ಎಂದು ಮರು ನಾಮಕರಣ ಮಾಡಲಾಗಿದ್ದು ಈ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ.ಆದರೆ ಗುಜರಾತ್ ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅಂತ ಬದಲಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರೇನು ಕ್ರಿಕೆಟ್ ಆಟಗಾರರೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.ಇನ್ನು ಹೆಸರು ಬದಲಾವಣೆ ಮಾಡುವುದೇ ಜೀವನದ ಏಕೈಕ ಸಾಧನೆ ಎಂದುಕೊಂಡಿರುವ ಪ್ರಧಾನಿ ಮೋದಿಯವರು ಇಂತಹ ಹುಸಿ ಪ್ರಚಾರ ತಂತ್ರಗಳನ್ನು ಬದಿಗೊತ್ತಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಆಹಾರ ಸಾಮಾಗ್ರಿಗಳ ಬೆಲೆಯನ್ನು ತಗ್ಗಿಸಿ ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ! -ಡಾ.ಎಚ್.ಸಿ.ಮಹಾದೇವಪ್ಪ

ಸಂತಾಪ- ಇಂದು ಅಂಕೋಲಾ ಸಮೀಪ ರಸ್ತೆ ಅಪಘಾತದಲ್ಲಿ ಮೃತರಾದ ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ(AEE) ಕಾರ್ಯನಿರ್ವಹಿಸುತ್ತಿರುವ ಶ್ರೀ ಎಮ್. ಹೆಚ್. ಮುದಕಣ್ಣನವರ ಸರ್ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ. ಒಂ ಶಾಂತಿ 🙏🙏

ಅತ್ಯಂತ ಕ್ರಿಯಾಶೀಲ, ದಕ್ಷ, ಬಡವರ ಬಂಧು ಹಾಗೂ ನನ್ನ ಬಹು ಕಾಲದ ಗೆಳೆಯ ಶ್ರೀ ಶಿವರಾಮ ಹೆಬ್ಬಾರ ಅವರು ಎರಡನೇ ಬಾರಿಗೆ ಕರ್ನಾಟಕ ರಾಜ್ಯದ ಸಚಿವರಾಗಿ ಆಯ್ಕೆ ಆಗಿರುವುದು ನನಗೆ ಅತೀವ ಸಂತಸ ತಂದಿದೆ. ಅವರ ರಾಜಕೀಯ ಜೀವನ ಇನ್ನು ಉನ್ನತ ಮಟ್ಟಕ್ಕೆ ಏರಲೆಂದು ಪ್ರಾರ್ಥಿಸುತ್ತೇನೆ. -ಬೀರಣ್ಣ ನಾಯಕ ಮೊಗಟಾ

ಶಿರಸಿಯ ಬೆಂಗಳೆ ಗ್ರಾಮದ ಮಂಟಕಾಲ್ ಎಂಬ ಊರಿನ ಮಹೀಳೆಯಾದ *ಶರಾವತಿ ನಾಗೇಶ ಪೂಜಾರಿ* ವಯಸ್ಸು (35) ಗಂಡ ನಾಗೇಶ ಪೂಜಾರಿ ಮತ್ತು 2 ಹೆಣ್ಣು ಮಕ್ಕಳು(ನೀಶಾ 14 ವರ್ಷ ತ್ರೀಶಾ 9 ವರ್ಷ) ಇವರ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದ ಇವರು ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ ಮತ್ತು ಪತಿ ಕೂಲಿ ಕಾರ್ಮಿಕನಾಗಿದ್ದು ಇದ್ದಿದ್ದರಲ್ಲೇ ಚೊಕ್ಕವಾಗಿ ಬದುಕುವ ಸಂತೃಪ್ತ ಜೀವನ.ಇಂತಹ ಸುಂದರವಾದ ಕುಟುಂಬದ ಮೇಲೆ ವಿಧಿಯ ಕ್ರೂರ ಕಣ್ಣು ಬಿದ್ದಿದ್ದು ಸ್ತನ ಕ್ಯಾನ್ಸರ್ ಎನ್ನುವ ಮಹಾಮಾರಿಯ ಮೂಲಕ. ನಾಲ್ಕು ತಿಂಗಳ ಹಿಂದೆ ಶರಾವತಿ ಅವರ ಆರೋಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ತೆರಳಿದ ಶರಾವತಿ ಅವರಿಗೆ ಬರ ಸಿಡಿಲಿನಂತೆ ಬಂದೆರಗಿದ ಆರೋಗ್ಯ ತಪಾಸಣಾ ರಿಪೋರ್ಟ್ ನಲ್ಲಿ ಶರಾವತಿ ಕನಸಿನ ಜೀವನ ಸೌಧವೇ ಕುಸಿದು ಬೀಳುತ್ತಿದೆ ಎನ್ನುವಂತ ಆಘಾತಕಾರಿ ಉತ್ತರ! ಶರಾವತಿ ಅವರಿಗೆ ಸ್ತನ ಕ್ಯಾನ್ಸರ್ ಎನ್ನುವ ಮಹಾಮಾರಿ ಆವರಿಸಿದೆ ಎನ್ನುವುದು.

ಬಡತನದಲ್ಲೆ ಜೀವನ ಸಾಗಿಸುತ್ತಿರುವ ಇವರಿಗೆ ಚಿಕಿತ್ಸೆಗೆ ಲಕ್ಸ್ಶಾಂತರ ರೂಪಾಯಿ ಅವಶ್ಯಕತೆ ಇದ್ದು ಇಗಾಗಲೆ ಬಂದು‌ ಮಿತ್ರರು ಮತ್ತು ಕುಟುಂಬದವರು ಸಹಾಯದಿಂದ ಮತ್ತು ಸಾಲ‌ ಮಾಡಿ 4.5 ಲಕ್ಷ ಖರ್ಚು ಮಾಡಿರುತ್ತಾರೆ ದಿನೆ ದಿನೇ ಇವರ ಆರೋಗ್ಯ ಕ್ಶೀಣಿಸುತ್ತಿದ್ದು ಚಿಕಿತ್ಸೆಗೆ ಅಧಿಕ‌ ಹಣದ ಅವಶ್ಯಕತೆ ಇದ್ದು ದಿಕ್ಕೇ ತೋಚದಂತಾಗಿದೆ. ಈ ಪರಿಸ್ಥಿತಿಯಲ್ಲಿ ಅವರಿಗೆ ಹಣ ಹೊಂದಿಸಲು ಸಾದ್ಯವಿಲ್ಲ ಆದ್ದರಿಂದ ತಾವುಗಳು ತಮ್ಮ ಕೈಲಾದಷ್ಟು ಸಹಾಯಮಾಡಿ ಅವರ ಕುಟುಂಬಕ್ಕೆ ನೇರವಾಗಬೇಕಾಗಿ ತಮ್ಮಲ್ಲಿ ವಿನಂತಿಸಿಕೋಳ್ಳುತ್ತಿದ್ದೆವೇ. ನಾಗೇಶ (ಅವರ ಪತಿ) ಅವರ ಖಾತೆ ಗೆ ಹಣ‌ ಸಂದಾಯ ಮಾಡುವ ಮೂಲಕ ಆ ಒಂದು ಕುಟುಂಬಕ್ಕೆ ದೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ … *ನಾಗೇಶ ಪಂಜು ಪೂಜಾರಿ ಅವರ ಬ್ಯಾಂಕ್ ಖಾತೆ ಸಂಖ್ಯೆ* *333440868880**IFSC code:SBIN0000917* *State Bank india*ಸಂಪರ್ಕ ಸಂಖ್ಯೆ *9480535348’&’72598 49403* ದಯವಿಟ್ಟು ಇವರಿಗೆ ನೆರವಾಗಿ ನೀವು ನೀಡುವ ಪ್ರತಿ ರೂಪಾಯಿಯೂ ಇವರ ಬಾಳಿನಲ್ಲಿ ಬೆಳಕು ಮೂಡಿಸಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *