

ಮಳೆಹಾನಿ, ಪ್ರವಾಹ ಪೀಡಿತ ಜನರಿಗೆ ಸರ್ಕಾರ ಕೊಡಬೇಕಾದ ಕನಿಷ್ಟ ಹತ್ತು ಸಾವಿರ ರೂಪಾಯಿಗಳನ್ನೂ ನೀಡಿಲ್ಲ. ಪರಿಹಾರದ ವಿಚಾರದಲ್ಲಿ 2019 ರ ವರ್ತಮಾನ ಮತ್ತೆ ಮರುಕಳಿಸುತ್ತಿ ದೆ. ಕೋವಿಡ್ ಎರಡನೇ ಅವಧಿಯಲ್ಲಿ ಮುಂಜಾಗೃತೆ ವಹಿಸದೆ ಸರ್ಕಾರ ನಿರ್ಲಕ್ಷ ಮಾಡಿದ್ದಕ್ಕೆ ಪರಿಣಾಮ ಎದುರಿಸಿದ್ದೇವೆ ಈಗ ಮೂರನೇ ಅಲೆಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಸರ್ಕಾರ ಸಾರ್ವಜನಿಕರ ವಿರೋಧಿ ಎಂದು ಹಣೆಪಟ್ಟಿಕಟ್ಟಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಎಚ್ಚರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಾಳಜಿ ಕೇಂದ್ರಗಳ ವಾಸ್ತವ ಅವಲೋಕನ ಮಾಡಿದ ನಂತರ samajamukhi.net ನೊಂದಿಗೆ ಮಾತನಾಡಿದ ಅವರು ಕಳೆದ ಎಪ್ಪತ್ತು ವರ್ಷಗಳಲ್ಲಿ ಬೀಳದ ಮಹಾಮಳೆಯಿಂದ ಅಪಾರ ಹಾನಿಯಾಗಿದೆ. ಸರ್ಕಾರ ಘೋಷಣೆ ಮಾಡಿದಂತೆ ನಡೆದುಕೊಂಡಿಲ್ಲ ಹತ್ತು ಸಾವಿರ ತುರ್ತು ಪರಿಹಾರ ನೀಡಬೇಕಾದ ಹಣ ನೀಡಿಲ್ಲ. ಮಳೆ-ಪ್ರವಾಹದ ಹಾನಿ ಸಮೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಸರ್ಕಾರದ ಕಾರ್ಯವೈಖರಿ ಟೀಕಿಸಲು ಇದು ಸಮಯವಲ್ಲ ಆದರೆ ಹನಿಮೂನ್ ಮೂಡ್ ನಲ್ಲಿರುವ ಸರ್ಕಾರದಿಂದ ಪ್ರವಾಹ ಪೀಡಿತರು, ಕೋವಿಡ್ ಬಾಧಿತರಿಗೆ ತೊಂದರೆ ಆಗಬಾರದು ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಸಾವಿರ ಎಕರೆ ಬೆಳೆ ನಾಶವಾಗಿದೆ. ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡವರ ಮನೆಗಳೂ ಕುಸಿದು ಬಿದ್ದಿವೆ. ಸಂತೃಸ್ತರಿಗೆ ಶೀಘ್ರ ನಿವೇಶನ ನೀಡಿ ಶಾಶ್ವತ ಮನೆ ನಿರ್ಮಿಸಿಕೊಡಬೇಕು. ಕೋವಿಡ್ ಎರಡನೆ ಅಲೆಯ ನಿರ್ಲಕ್ಷದಿಂದ ಪಾಠ ಕಲಿತಿದ್ದೇವೆ ಇದು ಮೂರನೇ ಅಲೆ ಮುಂಜಾಗ್ರತೆಗೆ ಸೂಚನೆ, ಪ್ರವಾಹದ ವಿಚಾರವಿರಲಿ ಕೋವಿಡ್ ವಿಷಯವಿರಲಿ ಸೂಕ್ತ ಕ್ರಮ ಜರುಗಿಸದಿದ್ದರೆ ನಾಗರಿಕ ಸರ್ಕಾರ ಕರ್ತವ್ಯ ಲೋಪ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದ ಪಾಟೀಲ್ ಅಧಿಕಾರಿಗಳಿಗೂ ಮಾನವೀಯತೆ ಆಧಾರದಲ್ಲಿ ಸ್ಪಂದಿಸಲು ಸೂಚಿಸಿದರು.
ಭೀಕರ ಅಪಘಾತ: ಸಿದ್ದಾಪುರದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುದುಕಣ್ಣನವರ ನಿಧನ, ಮೂವರಿಗೆ ಗಂಭೀರ ಗಾಯ
ಕಾರು ಅಫಘಾತವಾಗಿ ಸಿದ್ದಾಪುರದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುದುಕಣ್ಣನವರ ಮೃತಪಟ್ಟು ಇತರ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನಲ್ಲಿ ಸಂಭವಿಸಿದೆ.

ಅಂಕೋಲ(ಉತ್ತರ ಕನ್ನಡ ಜಿಲ್ಲೆ):ಕಾರು ಅಫಘಾತವಾಗಿ ಸಿದ್ದಾಪುರದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುದುಕಣ್ಣನವರ ಮೃತಪಟ್ಟು ಇತರ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನಲ್ಲಿ ಸಂಭವಿಸಿದೆ.
ನೆರೆ ಪರಿಸ್ಥಿತಿ ಹಾಗೂ ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸಭೆ ಕರೆಯಲಾಗಿತ್ತು, ಸಭೆಗೆ ಆಗಮಿಸುವ ಸಂದರ್ಭದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಅಂಕೋಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.(kpc)
