ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.
ಅರವಿಂದ್ ಕೆಪಿ ಮತ್ತು ಮಂಜು ಪಾವಗಡ ನಡುವೆ ಪೈಪೋಟಿ ಇತ್ತು. ಆದರೆ ಕೊನೆಗೆ ಮಂಜು ಪಾವಗಡ ವಿನ್ನರ್ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಹೀಗಾಗಿ ಅರವಿಂದ್ ಕೆಪಿ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 8ರ ಫಿನಾಲೆಯಲ್ಲಿ ಅರವಿಂದ್ ಕೆಪಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಇದ್ದರು. ಆದರೆ ಫಿನಾಲೆಗೂ ಮುನ್ನ ವೈಷ್ಣವಿ ಗೌಡ ಮತ್ತು ಪ್ರಶಾಂತ್ ಸಂಬರಗಿ ಹೊರಬಂದಿದ್ದರು.
ಕೊನೆಯದಾಗಿ ಉಳಿದುಕೊಂಡಿದ್ದು ಮಂಜು ಪಾವಗಡ, ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ. ಆದರೆ ಫಿನಾಲೆ ದಿನ ದಿವ್ಯಾ ಉರುಡುಗ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. (kpc)