

2020-21 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.99. 9 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಗೇರುಸೊಪ್ಪಾದ ಭೂಮಿಕಾ ನಾಯ್ಕ ರಾಜ್ಯಕ್ಕೇ ಪ್ರಥಮ-
ಹೊನ್ನಾವರ: ಗ್ರಾಮೀಣ ಪ್ರದೇಶವಾದ ಗೇರುಸೊಪ್ಪಾ ಸರ್ಕಾರಿ ಪ್ರೌಡಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಭೂಮಿಕ ಕೃಷ್ಣ ನಾಯ್ಕ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಈ ಬಾರಿ ಕೊರೋನಾ ಮಹಾಮಾರಿಯಿಂದ ಗೊಂದಲದ ಗೂಡಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆ ಕಳೆದ ತಿಂಗಳು ನಡೆದಿತ್ತು. ಇದೀಗ ಫಲಿತಾಂಶ ಬಂದಿದ್ದು ತಾಲೂಕಿನ ನಿವಾಸಿ ರಾಜ್ಯ ಮಟ್ಟದಲ್ಲಿ ಗುರುತಿಸುವಂತಹ ಸಾಧನೆ ಮಾಡಿದ್ದಾಳೆ. ಸರ್ಕಾರಿ ಪ್ರಾಥಮಿಕ ಶಾಲೆ ಮುಗಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಡಶಾಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಗೌರಿ ಹಾಗೂ ಕೃಷ್ಣ ನಾಯ್ಕ ದಂಪತಿಯ ಮಗಳಾಗಿರುವ ಭೂಮಿಕ ಮುಂದಿನ ದಿನದಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ಭೂಮಿಕಾ ನಾಯ್ಕ ಮೂರು ತಿಂಗಳಿನಲ್ಲಿ ಶಿಕ್ಷಕರು ಬಹು ಮುಖ್ಯವಾದ ಮಾಹಿತಿ ನೀಡಿದ್ದರು. ಕೊರೋನಾ ಕಾರಣದಿಂದ ಗೂಗಲ್ ಮೀಟ್ ಮೂಲಕ ಪರೀಕ್ಷೆಗೆ ಎದುರಿಸಲು ಅಗತ್ಯವಿರುವ ಮಾಹಿತಿ ನೀಡಿದ್ದರು. ಆರಂಭದಲ್ಲಿ ಕೊರೋನಾದಿಂದ ಪರೀಕ್ಷೆ ಎದುರಿಸಲು ಭಯವಿತ್ತು. ಸಮಯಕ್ಕನುಗುಣವಾಗಿ ಮಾಹಿತಿ ತಂದೆ ತಾಯಿಯ ಸಹಕಾರ ಶಾಲೆಯ ಗುರುಗಳ ಪೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಪರೀಕ್ಷೆ ಎದುರಿಸಿದ್ದೆ. ನನ್ನ ಫಲಿತಾಂಶ ಸಂತಸ ಮೂಡಿಸಿದೆ ಎಂದರು.

2021ರ ಜುಲೈ ತಿಂಗಳಲ್ಲಿ ನಡೆದ 2020-21ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಸಿದ್ದಾಪುರ ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾದ 1303 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು ತಾಲೂಕಿನ ಫಲಿತಾಂಶ 100% ಆಗಿರುತ್ತದೆ. 03 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. 1. ರೇಷ್ಮಾ ಗಣೇಶ ಹೆಗಡೆ ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರು. 2. ಎಸ್.ಎನ್.ಸುನಯ್ ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರು. 3. ಹೇಮಾ ಉಮೇಶ್ ಹೆಗಡೆ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ.
ಬೆಂಗಳೂರು: 2020-21 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.99. 9 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.


https://imasdk.googleapis.com/js/core/bridge3.473.0_en.html#goog_313186929
ಜುಲೈ 19 ಮತ್ತು 22 ರಂದು ನಡೆದ ಪರೀಕ್ಷೆಯಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿ ತನ್ನ ಬದಲಿಗೆ ಬೇರೆಯವರನ್ನು ಕಳುಹಿಸಿ ಪರೀಕ್ಷೆ ಬರೆಸಿದ್ದರಿಂದ ಆ ವಿದ್ಯಾರ್ಥಿಯನ್ನು ಮಾತ್ರ ಅನುತೀರ್ಣ ಮಾಡಲಾಗಿದೆ ಎಂದರು.
157 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. 562 ರಿಂದ 625 ಅಂಕಗಳನ್ನು ಪಡೆದವರಿಗೆ A+ ಗ್ರೇಡ್ ನೀಡಲಾಗಿದೆ. ಬಿ ಗ್ರೇಡ್‌ನಲ್ಲಿ 2,87,694 ವಿದ್ಯಾರ್ಥಿಗಳು, ಸಿ ಗ್ರೇಡ್‌ನಲ್ಲಿ 1,13,610 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು https:// sslc.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು ಎಂದು ಸಚಿವ ಬಿ. ಸಿ. ನಾಗೇಶ್ ಹೇಳಿದರು.
ಹೇಮಾ ಹೆಗಡೆ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ. ಎಸ್.ಎಸ್.ಎಲ್.ಸಿ. 100%. 625 ಕ್ಕೆ 625 ಅಂಕಗಳು
ಎಸ್.ಎನ್.ಸುನಯ್ ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರು. ಎಸ್.ಎಸ್.ಎಲ್.ಸಿ. 100%. 625 ಕುಕ್ಕೆ 625 ಅಂಕಗಳು
ರೇಷ್ಮಾ ಗಣೇಶ ಹೆಗಡೆ ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರು. ಎಸ್.ಎಸ್.ಎಲ್.ಸಿ. 100%. 625 ಕುಕ್ಕೆ 625 ಅಂಕಗಳು




