ಹವ್ಯಾಸಕ್ಕಾಗಿ ಕ್ಲಿಕ್ಕಿಸಿದ ಪೋಟೋಗಳಿಂದ ವಿಶ್ವಪ್ರಸಿದ್ಧಿಯಾದ ಕಾರವಾರ ರೈಲುನಿಲ್ದಾಣ

ಶಾಂತಿನಗರ ನಾಗರಿಕ ವೇದಿಕೆಯಿಂದ ಆರ್.ಕೆ. ನಾಯಕ ಮಾಸ್ಕೇರಿ ನುಡಿನಮನ
ಸಿದ್ದಾಪುರ- : ನಿವೃತ್ತ ಅಧ್ಯಾಪಕ ಹಾಗೂ ಸಾಹಿತಿಗಳಾದ ಆರ್.ಕೆ. ನಾಯಕ ಮಾಸ್ಕೇರಿ ಅವರ ನಿಧನ ಪ್ರಯುಕ್ತ ಸಿದ್ದಾಪುರದ ಶಾಂತಿನಗರ ನಾಗರಿಕ ವೇದಿಕೆ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮವನ್ನು ಶ್ರೇಯಸ್ ಆಸ್ಪತ್ರೆ ಪ್ರಾಂಗಣದಲ್ಲಿ ನಡೆಸಲಾಯಿತು. ಐ.ಎಂ.ಎ. ಪ್ರಮುಖ ಖ್ಯಾತ ವೈದ್ಯ ಡಾ. ಕೆ. ಶ್ರೀಧರ ವೈದ್ಯ ಅವರು ಮಾತನಾಡಿ ಆರ್.ಕೆ. ನಾಯಕ ಅವರು ಸಂಘಟನಾ ಚತುರರು ಹಾಗೂ ಅವರ ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅವರು ಮಾತನಾಡಿ ಅವರೊಬ್ಬ ಜನಾನುರಾಗಿ ವ್ಯಕ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ, ಅನೇಕ ಕೃತಿಗಳನ್ನು ನೀಡಿ ಕೃತಿಗಳ ಮೂಲಕ ಶಾಶ್ವತವಾಗಿ ಇದ್ದಾರೆ ಎಂದರು.
ಶಿಕ್ಷಕ ಹಾಗೂ ಸಾಹಿತಿ ಆರ್.ಕೆ. ಹೊನ್ನೆಗುಂಡಿ ಅವರು ಮಾತನಾಡಿ ಸ್ನೇಹ, ಸಜ್ಜನಿಕೆಗೆ ಹೆಸರಾದ ವ್ಯಕ್ತಿ, ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುತ್ತಾ ಪ್ರೇರಣಾದಾಯಿ ವ್ಯಕ್ತಿತ್ವ ಹೊಂದಿದ್ದರು ಎಂದು ಹೇಳಿದರು.

ಸಾಹಿತಿಗಳು, ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ತಮ್ಮಣ್ಣ ಬೀಗಾರ ಮಾತನಾಡಿ ಶಿಕ್ಷಣ, ಕಲೆ, ಸಾಹಿತ್ಯ ಅವುಗಳೊಂದಿಗೆ ಸಾಂಸ್ಕೃತಿಕ ಕಾಳಜಿಯನ್ನು ರೂಪಿಸಿಕೊಂಡು ಕ್ರಿಯಾಶೀಲ ಶಿಕ್ಷಕರಾಗಿದ್ದರು ಎಂದು ಹೇಳಿದರು.
ಅಡಿಕೆ ವರ್ತಕ ಜೈವಂತ ಶಾನಭಾಗ ಅವರು ಮಾತನಾಡಿ ಪಟ್ಟಣದ ವ್ಯಾಪ್ತಿಯಲ್ಲಿ ಶಾಂತಿನಗರ ನಾಗರಿಕ ವೇದಿಕೆ ಎಂಬುದನ್ನು ಜನರ ಸಹಕಾರದೊಂದಿಗೆ ಕ್ರಿಯಾತ್ಮಕವಾಗಿ ನಡೆಸಿಕೊಂಡು ಬಂದ ಜನಪರ ಸೇವೆಯ ಶಿಕ್ಷಕರಾಗಿದ್ದರು ಎಂದು ಬಣ್ಣಿಸಿದರು.


ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ ಅವರು ಮೂರು ಅವಧಿಗೆ ಕಾರ‍್ಯದರ್ಶಿಯಾಗಿ ಕನ್ನಡ ಸಾಹಿತ್ಯ ಪರಿಷತನ್ನು ಬೆಳೆಸುವಲ್ಲಿ ಸೇವೆ ಸಲ್ಲಿಸಿದ್ದರು, ಅನೇಕ ಸಾಹಿತಿಗಳೊಂದಿಗೆ ಅವರು ನಿಕಟ ಸಂಪರ್ಕವನ್ನು ಹೊಂದಿದ್ದರು ಎಂದು ಹೇಳಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ ಅವರು ಮಾತನಾಡುತ್ತಾ ಎಲ್ಲ ವರ್ಗದ ಜನರನ್ನು ಪ್ರೀತಿಸಿ ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿದ್ದಾರೆ. ಇದು ಇಂದಿನ ಅನೇಕ ಶಿಕ್ಷಕರಿಗೆ ಮತ್ತು ಸರಕಾರಿ ಸೇವೆಯಲ್ಲಿರುವವರಿಗೆ ಮಾದರಿಯಾದ ಸಂಗತಿಯಾಗಿದೆ ಎಂದರು.
ನಾಗರಿಕ ವೇದಿಕೆ ಪ್ರಮುಖರಾದ ಉಮೇಶ ಟಪಾಲ ನಿವೃತ್ತ ಮುಖ್ಯ ಶಿಕ್ಷಕ ಗಣೇಶ ಜಿ. ಭಟ್, ಮಂಜುನಾಥ ಹೆಗಡೆ (ಶಾಂತಿಕಾಂಬ ಎಲೆಕ್ಟಿçಕಲ್ಸ್), ಗಣೇಶ ಶಾನಭಾಗ, ಬಾಲಚಂದ್ರ ನಾಯ್ಕ, ಮಂಜುನಾಥ ಶೇಟ್ ಸಣ್ಮನೆ, ಸತೀಶ ಕೊಡಿಯಾ, ಗಣ್ಯ ವರ್ತಕ ನಾಗರಾಜ ದೋಶೆಟ್ಟಿ ಅವರು ಮಾತನಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಹವ್ಯಾಸಕ್ಕಾಗಿ ಕ್ಲಿಕ್ಕಿಸಿದ ಫೋಟೋಗಳು ವೈರಲ್ ಆಯ್ತು, ಕಾರವಾರ ರೈಲ್ವೇ ನಿಲ್ದಾಣ ಫೇಮಸ್ ಆಯ್ತು!

ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಯಾವುದು ಹೇಗೆ ಖ್ಯಾತಿ ಗಳಿಸುತ್ತದೆ ಎಂಬುದು ತಿಳಿಯುವುದಿಲ್ಲ. ಸಾಕಷ್ಟು ಸುದ್ದಿಗಳು ವಸ್ತುಗಳು ವೈರಲ್ ಆಗುತ್ತಿವೆ.

Railway to heaven

ಕಾರವಾರ: ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಯಾವುದು ಹೇಗೆ ಖ್ಯಾತಿ ಗಳಿಸುತ್ತದೆ ಎಂಬುದು ತಿಳಿಯುವುದಿಲ್ಲ. ಸಾಕಷ್ಟು ಸುದ್ದಿಗಳು ವಸ್ತುಗಳು ವೈರಲ್ ಆಗುತ್ತಿವೆ.

ಇಂತಹ ಪಟ್ಟಿಗೆ ಕಾರವಾರ ರೈಲು ನಿಲ್ದಾಣ ಕೂಡ ಸೇರ್ಪಡೆಯಾಗಿದ್ದು, ಹಸಿರು ಬೆಟ್ಟಗಳ ನಡುವೆ ಇರುವ ರೈಲು ನಿಲ್ದಾಣ ಇದೀಗ ಪ್ರವಾಸಿಗರ ಫೇವರಿಟ್ ಪ್ರದೇಶವಾಗಿ ಮಾರ್ಪಟ್ಟಿದೆ. 

https://imasdk.googleapis.com/js/core/bridge3.474.0_en.html#goog_1701058194

ಜೂನ್ 2018 ರಲ್ಲಿ, ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ರೋಷನ್ ಕಾನಡೆ ಮತ್ತು ಆತನ ಸ್ನೇಹಿತ ಶಿವರಾಜ್ ಬೋರ್ಕರ್ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಅವುಗಳನ್ನು ಇಂಟರ್ ನೆಟ್ ನಲ್ಲಿ ಪೋಸ್ಟ್ ಮಾಡಿದ್ದರು.  ಈ ಚಿತ್ರಗಳು ಅಪ್ಲೋಡ್ ಆದ ಕೆಲವೇ ದಿನಗಳಲ್ಲಿ, ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದವು. ಇಂದು ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಕಾರವಾರ ರೈಲ್ವೇ ನಿಲ್ದಾಣ ಎಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ ಎಂದರೆ ಉತ್ತರ ಕನ್ನಡದ ಅತ್ಯಂತ ಹೆಚ್ಚು ಛಾಯಾಚಿತ್ರ ತೆಗೆದ ಸ್ಥಳಗಳಲ್ಲಿ ಒಂದಾಗಿದೆ.

ಮಂಜಿನ ಮರೆಯಲ್ಲಿ ಹಸಿರು ಪರ್ವತಗಳ ನಡುವಿನಲ್ಲಿರುವ ಈ ರೈಲ್ವೇ ನಿಲ್ದಾಣ ಛಾಯಾಚಿತ್ರಕಾರರ ಮತ್ತು ಪ್ರವಾಸಿಗರ ಹಾಟ್ ಫೇವರಿಟ್ ಆಗಿದೆ. 

ಈ ಬಗ್ಗೆ ಮಾತನಾಡಿರುವ ಕಾನಡೆ, ‘ನಾನು ಆಗಾಗ್ಗೆ ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದೆ, ನಿಲ್ದಾಣದ ಸೌಂದರ್ಯ ನೋಡಿ ಕೆಲವು ಚಿತ್ರಗಳನ್ನು ಕ್ಲಿಕ್ ಮಾಡಲು ನಿರ್ಧರಿಸಿದೆ. ಅದು ಮಧ್ಯಾಹ್ನವಾಗಿತ್ತು. ಸುರಂಗದಿಂದ ರೈಲು ಹೊರ ಬರಲು ನಾನು ಕಾಯುತ್ತಿದ್ದೆ. ರೈಲು ಬರುತ್ತಿದ್ದಂತೆಯೇ ನಾನು ಫೋಟೋ ಕ್ಲಿಕ್ ಮಾಡಿದೆ. ನ ನಂತರ ಕೆಲವು ಚಿತ್ರಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಪೋಸ್ಟ್ ಮಾಡಿದ್ದೇನೆ. ನನಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿದೆ. ಈ ಚಿತ್ರ ವೈರಲ್ ಆಗಿದೆ ಮತ್ತು ಈಗಲೂ ವೈರಲ್ ಆಗುತ್ತಿದೆ ಎಂದು ಹೇಳಿದರು.

ಕಾನಡೆ 2019 ರಲ್ಲಿ ಮತ್ತೆ ಅದೇ ಸ್ಥಳವನ್ನು ಛಾಯಾಚಿತ್ರ ಮಾಡಿದ್ದು, ಅದೂ ಕೂಡ ಹಿಟ್ ಆಗಿತ್ತು. ಇಂದು, ನಿಲ್ದಾಣದ ಎರಡೂ ಬದಿಗಳಲ್ಲಿ ವಿದ್ಯುತ್ ಕಂಬಗಳನ್ನು ಸ್ಥಾಪಿಸಲಾಗಿದೆ. ಇದು ನಿಲ್ದಾಣದ ಸೌಂದರ್ಯವನ್ನು ಹಾಳುಮಾಡುತ್ತದೆ. ಅದರ ಹೊರತಾಗಿಯೂ, ಈ ಸ್ಥಳವು ಹಲವರ ಅಚ್ಚುಮೆಚ್ಚಿನ ಸ್ಥಳವಾಗಿದೆ ಎಂದು ಕಾನಡೆ ಹೇಳಿದ್ದಾರೆ.

ಈ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ನಾರ್ವೇಯನ್ ರಾಜತಾಂತ್ರಿಕ ಮತ್ತು ಮಾಜಿ ರಾಜಕಾರಣಿ ಎರಿಕ್ ಸೋಲ್ಹೀಮ್ ಕೂಡ ಈ ಕುರಿತು ಟ್ವೀಟ್ ಮಾಡಿ, ‘ಅದ್ಭುತ ಹಸಿರು! ಇದು ಪ್ರಪಂಚದ ಮತ್ತು ಭಾರತದ ಹಸಿರು ರೈಲು ನಿಲ್ದಾಣಗಳಲ್ಲಿ ಒಂದಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ. 

ಕರ್ನಾಟಕದಲ್ಲಿ ಕಾರವಾರ ಸೋಲ್ಹೀಮ್ ಗ್ರೀನ್ ಪಾರ್ಟಿಯ ಸದಸ್ಯರಾಗಿದ್ದು, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. 

ಕಾರವಾರದಿಂದ 6 ಕಿಮೀ ದೂರದಲ್ಲಿರುವ ಶಿರವಾಡದಲ್ಲಿ ಈ ರೈಲ್ವೇ ನಿಲ್ದಾಣವಿದೆ. ಶಿರವಾಡ ಬೋಟಿಂಗ್ ಮತ್ತು ಬೋಟ್‌ಗಳಿಗೆ ಖ್ಯಾತಿ ಗಳಿಸಿರುವ ಸುಂದರ ಕರಾವಳಿ ಪಟ್ಟಣವಾಗಿದೆ. ಎಡಪಲ್ಲಿ-ಪನ್ವೇಲ್ ಹೆದ್ದಾರಿ (NH-17) ಕಡಲತೀರದಿಂದ ಕೆಲವೇ ಮೀಟರ್ ದೂರದಲ್ಲಿ ಚಲಿಸುತ್ತದೆ. ಇದೂ ಕೂಡ ಪ್ರವಾಸಿಗರನ್ನು ಸೆಳೆಯಲು ಪ್ರಮುಖ ಅಂಶವಾಗಿದೆ. ಈ ನಿಲ್ದಾಣವು ಮಾನ್ಸೂನ್ ಕೊಡುಗೆಯಾಗಿದ್ದು,  ಹಿಂಬದಿ ಸಂಪೂರ್ಣ ಹಸಿರಿನಿಂದ ಕೂಡಿದೆ. ಸಮೃದ್ಧವಾದ ಕಾಡು ಮತ್ತು ವ್ಯತಿರಿಕ್ತ ರೈಲ್ವೆ ಮಾರ್ಗವು ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ ಹರಗಿ ಹೇಳಿದ್ದಾರೆ. 

ಸುಂದರವಾದ ನಿಲ್ದಾಣವು ಸುತ್ತಲೂ ಎತ್ತರದ ದಟ್ಟವಾದ ಪಶ್ಚಿಮ ಘಟ್ಟಗಳಿಂದ ಹೊರಹೊಮ್ಮಿರುವಂತೆ ಭಾಸವಾಗುತ್ತದೆ. ಹವ್ಯಾಸಿ ಛಾಯಾಚಿತ್ರಕಾರರಿಗೆ ಹೇಳಿಮಾಡಿಸಿದ ಜಾಗ. ಎರಡನೇ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುವ ಕಾಲು ಸೇತುವೆ ನಿಲ್ದಾಣದ ವಿಶಾಲ ಆಯಾಮವನ್ನು ಸೆರೆ ಹಿಡಿಯಲು ಛಾಯಾಗ್ರಾಹಕರು ಹೆಚ್ಚು ಇಷ್ಟಪಡುವ ಸ್ಥಳವಾಗಿದೆ. ಇದು ಪ್ರತಿ ಮಳೆಗಾಲದಲ್ಲಿ ನೂರಾರು ಛಾಯಾಗ್ರಾಹಕರನ್ನು ಸೆಳೆಯುತ್ತದೆ ಮತ್ತು ಇದು ವಿದ್ಯಾರ್ಥಿಗಳ ಸೆಲ್ಫಿ ಹಾಟ್‌ಸ್ಪಾಟ್ ಆಗಿದೆ. ಬೇಸಿಗೆಯಲ್ಲಿ ಸಸಿಗಳು ಒಣಗುವವರೆಗೂ ಅಂದರೆ ಸುಮಾರು 6-8 ತಿಂಗಳುಗಳವರೆಗೆ ಇಲ್ಲಿ ಹಸಿರಿರುತ್ತದೆ. ಸಣ್ಣ ಮಳೆ ಬಿದ್ದರೂ ಇಲ್ಲಿ ಹಸಿರು ಸಸಿಗಳು ಬೆಳೆದು ಗ್ರೀನ್ ಕಾರ್ಪೆಟ್ ಹರಡಲು ಪ್ರಾರಂಭಿಸುತ್ತದೆ.

ಈ ನಿಲ್ಗಾಣವು ಎರಡು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಇದು ಹಲವಾರು ಪ್ರದೇಶಗಳನ್ನು ಉತ್ತರ ಕನ್ನಡ ಕರಾವಳಿಗೆ ಸಂಪರ್ಕಿಸುತ್ತದೆ. ಈ ಸುಂದರ ನಿಲ್ದಾಣವನ್ನು ಹಲವಾರು ಅಡೆತಡೆಗಳ ನಡುವೆ ನಿರ್ಮಿಸಲಾಗಿದ್ದು, 1920 ರ ದಶಕದಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿಲ್ದಾಣದ ಸಮೀಕ್ಷೆಯನ್ನು ಮಾಡಲಾಗಿದ್ದರೂ, ನಿರ್ಮಾಣವಾಗಿದ್ದು ಮಾತ್ರ 1980 ರ ಕೊನೆಯ ಭಾಗದಲ್ಲಿ. ಜನತಾ ದಳದ ಹಿರಿಯ ನಾಯಕ ಜಾರ್ಜ್ ಫರ್ನಾಂಡಿಸ್ ರೈಲ್ವೇ ಮಂತ್ರಿಯಾದಾಗ ನಿಲ್ದಾಣದ ಕಾಮಗಾರಿ ಪ್ರಾರಂಭವಾಯಿತು.

ಮಂಗಳೂರಿನ ಫರ್ನಾಂಡಿಸ್, ಕೊಂಕಣ ರೈಲ್ವೆಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು, ಇದು ಅವರ ತವರು ನಗರವಾದ ಕಾರವಾರ ಮತ್ತು ಕರಾವಳಿ ಮಹಾರಾಷ್ಟ್ರದ ಭಾಗಗಳನ್ನು ಸಂಪರ್ಕಿಸುತ್ತದೆ. ಈ ಸುಂದರ ರೈಲ್ವೆ ಮಾರ್ಗದ ನಿರ್ಮಾಣವು ಒಂದು ದೊಡ್ಡ ಸವಾಲಾಗಿತ್ತು, ಏಕೆಂದರೆ ಇದು ಪಶ್ಚಿಮ ಘಟ್ಟಗಳನ್ನು ವಿಭಜಿಸುತ್ತದೆ, ಕಣಿವೆಗಳು ಮತ್ತು ಹಲವಾರು ನದಿಗಳ ಮೇಲೆ ನಿರ್ಮಿಸಲಾದ ಸೇತುವೆಗಳ ಮೇಲೆ ಹಾದುಹೋಗುವ ಹಳಿಗಳು ಮತ್ತು ಪರ್ವತಗಳ ಮೂಲಕ ಹಲವಾರು ಸುರಂಗಗಳ ಮೂಲಕ ಈ ಮಾರ್ಗ ನಿರ್ಮಿಸಲಾಗಿದೆ. ಕಾರವಾರದಲ್ಲಿ, ನಿಲ್ದಾಣವು ಕಾಳಿ ನದಿ ಕಣಿವೆಯ ಮೂಲಕ ಹಾದುಹೋಗುತ್ತದೆ. ಕಾರವಾರಕ್ಕೆ ರೈಲ್ವೆ ಸಂಪರ್ಕವನ್ನು ನೀಡಿದ ಶ್ರೇಯ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಹಣಕಾಸು ಸಚಿವ ಮಧು ದಂಡಾವಟೆ, ಫೆರ್ನಾಂಡಿಸ್ ಅವರಿಗೆ ಸಲ್ಲುತ್ತದೆ. 

ಇವರ ಶ್ರಮದ ಫಲವಾಗಿ ಈ ಮಾರ್ಗದಲ್ಲಿ ಇಂದು ರಾಜಧಾನಿ ಎಕ್ಸ್‌ಪ್ರೆಸ್, ಗರೀಬ್ ರಥ್, ಗಾಂಧಿಧಾಮ ಎಕ್ಸ್‌ಪ್ರೆಸ್, ಪೋರ್ ಬಂದರ್ ಎಕ್ಸ್‌ಪ್ರೆಸ್ ಸೇರಿದಂತೆ 22 ಪ್ರಮುಖ ರೈಲುಗಳು ಇಲ್ಲಿ ನಿಲ್ಲುಗಡೆ ಹೊಂದಿ ಸಾಗುತ್ತವೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *