

ಸಿದ್ದಾಪುರ: ಕೇಂದ್ರ ಸರ್ಕಾರ ರೈತರು, ಬಡವರು, ಕೂಲಿ ಕಾರ್ಮಿಕರು, ದೀನದಲಿತರ ಪರವಾಗಿಲ್ಲ. ಮುಂದೆ ಅವರನ್ನು ಜೀತದಾಳುಗಳಾಗಿ ದುಡಿಯುವಂತೆ ಮಾಡಲು ವಿದ್ಯುತ್ ನಿಗಮವನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ತಾಲೂಕ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ವೀರಭದ್ರ ನಾಯ್ಕ ಹೇಳಿದರು.
ಅವರು ಕೇಂದ್ರ ಸರಕಾರವು ಹೊರಡಿಸಿದ ರೈತ ವಿರೋಧಿ ಕಾಯ್ದೆ ಗಳು ಹಾಗೂ ಜನವಿರೋಧಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತಾಡಿದರು.
ವಿದ್ಯುತ್ ನಿಗಮವನ್ನು ಖಾಸಗೀಕರಣ ಮಾಡಿದರೆ ಖಾಸಗಿ ಕಂಪನಿಗಳು ನೌಕರರನ್ನು ಗುಲಾಮರನ್ನಾಗಿಸಿ ಕೆಲಸ ಮಾಡಿಸುತ್ತವೆ. ಅಲ್ಲದೆ ಯಾವುದೇ ಉದ್ಯೋಗದ ಸೃಷ್ಟಿಮಾಡುವುದಿಲ್ಲ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತದೆ. ಯುವಕರು ಉದ್ಯೋಗವಿಲ್ಲದೆ ಬೀದಿ-ಬೀದಿಯಲ್ಲಿ ಅಲೆಯುವಂತೆ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರೆ ಕೃಷಿಗೆ ಮಾಡಿದ ಅರ್ಧದಷ್ಟು ಖರ್ಚನ್ನು ಕೊಡುತ್ತೇವೆ ಎಂದು ಹೇಳಿದ್ದರು. ರೈತರ ಸಾಲವನ್ನು ಮನ್ನಾ ಮಾಡಲಿಲ್ಲ. ಹೇಳಿದ ಭರವಸೆಗಳನ್ನು ಈಡೇರಿಸಿದೆ ವಚನಭ್ರಷ್ಟ ಆಗಿದ್ದಾರೆ ಎಂದು ಹರಿಹಾಯ್ದರು. ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ರೈತ ವಿರೋಧಿ ಕಾಯ್ದೆ ಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿ ಎನ್ ನಾಯ್ಕ್ ಮಾತನಾಡಿ ರೈತರಿಗೆ ದೀನದಲಿತರಿಗೆ ನಿರುದ್ಯೋಗಿಗಳಿಗೆ ಆಶಾವಾದದ ಮಾತುಗಳನ್ನಾಡಿ ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರು “ಅಟ್ಟಕ್ಕೆ ಏರಿದ ಮೇಲೆ ಏಣಿಯನ್ನು ಒದ್ದರು” ಎನ್ನುವಂತೆ ವಚನಭ್ರಷ್ಟ ರಾಗಿದ್ದಾರೆ ಹೇಳಿದ ಯಾವುದೇ ಬರವಸೆಗಳನ್ನು ಈಡೇರಿಸಲಿಲ್ಲ. ಪ್ರಜಾಪ್ರಭುತ್ವದ ಆಡಳಿತವನ್ನು ನಡೆಸದೆ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ವಿದ್ಯುತ್ ಖಾಸಗಿಕರಣ ಮಾಡಿ ಹಣ ಮಾಡಲುಹೊರಟಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಗೌರವ ಅಧ್ಯಕ್ಷ ತಿಮ್ಮಣ್ಣ ಬಿ. ನಾಯ್ಕ, ಕಾರ್ಯಾಧ್ಯಕ್ಷ ಪಿ ವಿ ಹೆಗಡೆ ಹೊಸಗದ್ದೆ,
ತಾಲೂಕು ಪ್ರಧಾನ ಕಾರ್ಯದರ್ಶಿ ವಿನಾಯಕ ಕಾನಮನೆ,
ಸಂಘಟನಾ ಅಧ್ಯಕ್ಷ ಸುರೇಶ್ ತೆಂಗಿನಮನೆ,
ಉಪಾಧ್ಯಕ್ಷರು ಮಹಮದ್ ಇಸ್ಮಾಯಿಲ್ ಸಾಬ್ ಅರೆಂದೂರು
ಹಲಿಗೇರಿ ಕ್ಷೇತ್ರ ಅಧ್ಯಕ್ಷ ಶಿವಾನಂದ್ ಇಟಗಿ,
ತಾಲೂಕು ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕಮಲ ಪ್ರಭಾಕರ್ ನಾಯ್ಕ್ , ಕಾರ್ಯಾಧ್ಯಕ್ಷೆ ರಾಧಾ ಸೀತಾರಾಮ ನಾಯ್ಕ್ , ಯುವಮೋರ್ಚಾ ಕಾರ್ಯಾಧ್ಯಕ್ಷ ಹರೀಶ್,
ಸದಸ್ಯರಾದ ಚಂದ್ರ ಶೇಟ್, ವಾಸು ನಾಯ್ಕ ಮನಮನೆ
ಪ್ರಮುಖರಾದ ಗಾಂಧೀಜಿ ನಾಯ್ಕ್,
ಇಲಿಯಾಸ್ ಇಬ್ರಾಹಿಂ ಸಾಬ, ನಾಸೀರ್ ಖಾನ್
ಹೆಚ್. ಕೆ :ಶಿವಾನಂದ, ಸೋಮಶೇಖರ್ ಮನೆಮನೆ
ಮಂಜುನಾಥ್ ಮನೆಮನೆ, ಲೋಕೇಶ್ ಮನಮನೆ
ಹಾಗೂ ರೈತ ಭಾಂದವರು ಉಪಸ್ಥಿತರಿದ್ದರು.
ದೊಡ್ಮನೆ ಕ್ಷೇತ್ರ ಅಧ್ಯಕ್ಷ ಕೆರಿಯಪ್ಪ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.



