

ಚುನಾವಣೆಗೆ ಒಂದು ವರ್ಷಕ್ಕಿಂತ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಸಂಘಟಿತವಾಗಿ ಕೆಲಸಮಾಡುವುದರಿಂದ ಮುಂದಿನ ದಿನಗಳಲ್ಲಿ ಜನತಾದಳ ಎಸ್. ಅಧಿಕಾರ ಹಿಡಿಯಲಿದೆ ಎಂದು ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷ ಎಂ. ಗಂಗಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿದ್ಧಾಪುರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜೆ.ಡಿ.ಎಸ್. ನ ಹೊಂದಾಣಿಕೆ ಪರ್ವ ಮುಗಿದ ಅಧ್ಯಾಯ ಈಗ ಸ್ವತಂತ್ರವಾಗಿ ಸ್ಫರ್ಧಿಸಿ ಗೆಲ್ಲುವ ಗುರಿಯಲ್ಲಿರುವ ಪಕ್ಷ ಚುನಾವಣೆ ನಂತರ ಕೂಡಾ ಯಾರ ಜೊತೆಗೂ ಸೇರಿ ಸರ್ಕಾರ ಮಾಡುವ ಯೋಚನೆ ಕೂಡಾ ಮಾಡುವುದಿಲ್ಲ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣಪಯ್ಯ ಗೌಡರ ನೇತೃತ್ವದಲ್ಲಿ ಸಂಘಟನೆ ಬಲಪಡಿಸುವುದಾಗಿ ಹೇಳಿದ ಅವರು ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜೆ.ಡಿ.ಎಸ್. ಶಕ್ತಿ ಪ್ರದರ್ಶಿಸುವುದಾಗಿ ತಿಳಿಸಿದರು. ಜನತಾದಳ ಪಕ್ಷದ ವ್ಯವಸ್ಥೆಗೆ ಬೆಲೆ ಕೊಡುತ್ತದೆ. ನಮ್ಮಂಥ ವೀಕ್ಷಕರು ಪಕ್ಷದ ಪದಾಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ವಿವರಿಸಿದರು.
ಮಧು ಬಂಗಾರಪ್ಪನವರಿಂದ ಪಕ್ಷಕ್ಕೆ ಲಾಭ-ಹಾನಿಗಳೇನೂ ಇಲ್ಲ ಆದರೆ ಅವರ ಮೇಲೆ ಭರವಸೆ ಇಟ್ಟು ಪಕ್ಷ ನೀಡಿದ್ದ ಜವಾಬ್ಧಾರಿಯನ್ನು ಅವರು ನಿರ್ವಹಿಸದಿರುವುದು ಬೇಸರ ತಂದಿದೆ. ಬಂಗಾರಪ್ಪ ಕುಮಾರಸ್ವಾಮಿಯವರನ್ನು ತಮ್ಮ ಮಗನಂತೆ ಕಂಡಿದ್ದರು ಮಧು ಕೂಡಾ ಅಣ್ಣನಂತೆ ಭಾವಿಸುತ್ತೇನೆಂದು ಕುಮಾರಸ್ವಾಮಿಯವರ ಕೈ ಬಿಟ್ಟರು ಎಂದರು.
ಮುಂದಿನ ರಾಜ್ಯರಾಜಕಾರಣ ಉಳಿಯಲು ಜೆಡಿಎಸ್ ಅನಿವಾರ್ಯ, ನಮ್ಮ ಟಾರ್ಗೆಟ್ 123: ಎಚ್ ಡಿಕೆ
ರಾಜ್ಯದಲ್ಲಿ ಮುಂದಿನ ರಾಜ್ಯರಾಜಕಾರಣ ಉಳಿಯಲು ಜೆಡಿಎಸ್ ಪಕ್ಷದ ಅವಶ್ಯಕತೆಯಿದ್ದು, 2023 ರಲ್ಲಿ ಜನತಾದಳದ ಟಾರ್ಗೆಟ್ ಮಿಷನ್ 123. ಇದನ್ನು ಕಾದು ನೋಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ…

ಬೆಂಗಳೂರು: ರಾಜ್ಯದಲ್ಲಿ ಮುಂದಿನ ರಾಜ್ಯರಾಜಕಾರಣ ಉಳಿಯಲು ಜೆಡಿಎಸ್ ಪಕ್ಷದ ಅವಶ್ಯಕತೆಯಿದ್ದು, 2023 ರಲ್ಲಿ ಜನತಾದಳದ ಟಾರ್ಗೆಟ್ ಮಿಷನ್ 123. ಇದನ್ನು ಕಾದು ನೋಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.
ಗುಲ್ಬರ್ಗಾ ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಕಾರ್ಪೋರೇಷನ್ ಚುನಾವಣೆ ಹಿನ್ನಲೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಪಕ್ಷದ ಮುಖಂಡರೊಂದಿಗೆ ಪಕ್ಷ ಸಂಘಟನೆ ಸಂಬಂಧ ಗುರುವಾರ ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ಹಳೆ ಕರ್ನಾಟಕದಲ್ಲಿ ಮುಗಿಸೇಬಿಟ್ಟಿದ್ದೇವೆ ಎಂದವರೀಗ ಜೆಡಿಎಸ್ ನೆರಳಿನಲ್ಲಿ ರಾಜಕಾರಣ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ನಿಂದ ಭೀತಿ ಶುರುವಾಗಿದೆ. ಜೆಡಿಎಸ್ ಪಕ್ಷದಿಂದಲೇ ಮುಂದಿನ ರಾಜ್ಯರಾಜಕಾರಣ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆ ಕರ್ನಾಟಕ ಭಾಗದಲ್ಲಿಯೇ ಜೆಡಿಎಸ್ ಅನ್ನು ಮುಗಿಸಿಬಿಟ್ಟಿದ್ದೇವೆ. ಈಗಿನ ಬಿಜೆಪಿ ಸರ್ಕಾರ ಉಳಿಯಲು ಸರ್ಕಾರದ ರಕ್ಷಣೆಗೆ ಜೆಡಿಎಸ್ ನ ಸಹಕಾರದ ಹೆಸರು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷವಿದೆ ಎನ್ನುವ ಗುಮ್ಮವನ್ನು ಮುಂದೆ ಬಿಟ್ಟು ಈಗ ಸರ್ಕಾರವನ್ನು ಉಳಿಸಲು ಜೆಡಿಎಸ್ ನೆರಳನ್ನು ಆಶ್ರಯಿಸುತ್ತಿದ್ದಾರೆಂದು ಸೂಚ್ಯವಾಗಿ ಹೇಳಿದರು.
ಪ್ರಾದೇಶಿಕ ನೆಲಗಟ್ಟನ್ನು ಹೊಂದಿರುವ ಜೆಡಿಎಸ್ ಪಕ್ಷ ಇದಾಗಿದ್ದು, ಚಂದ್ರಬಾಬು ನಾಯ್ಡು ದೇವೇಗೌಡರು ಪ್ರಧಾನಿಯಾಗಿದ್ದಾಗ ನೀಡಿದ ಬೆಂಬಲ ಹಿಂಪಡೆಯಲು ಬೆದರಿಕೆ ಹಾಕಿದ್ದರ ಬಗ್ಗೆ ಈಗ ಪತ್ರಿಕೆಗಳಲ್ಲಿ ಚರ್ಚೆಯಾಗುತ್ತಿದೆ. ದೇವೇಗೌಡರಿಗೂ ಜನತಾದಳಕ್ಕೂ ಕಾಂಗ್ರೆಸ್ ಬಿಜೆಪಿಗೂ ಇರುವ ವ್ಯತ್ಯಾಸವೇನು ಎನ್ನುವುದನ್ನು ಉತ್ತರ ಕರ್ನಾಟಕದ ಜನರು ಅರ್ಥಮಾಡಿಕೊಳ್ಳಬೇಕು. ಬೆಂಗಳೂರಿಗರಿಗೆ ಕುಡಿಯಲು ಕಾವೇರಿ ನೀರು ನೀಡಿದ್ದು ದೇವೇಗೌಡರು ನೀಡಿದ ಕೊಡುಗೆಯೇ ಹೊರತು ಕಾಂಗ್ರೆಸ್, ಬಿಜೆಪಿಯಾಗಲೀ ಅಲ್ಲ. ಕರ್ನಾಟಕ ಜನರು ತಮ್ಮ ಶಕ್ತಿ ಎಲ್ಲಿದೆ ಎನ್ನುವುದನ್ನು ಅರಿಯಬೇಕು. ಜನರು ಬುದ್ಧಿವಂತರಾಗದೇ ಇದ್ದರೆ ರಾಜ್ಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಆಗುತ್ತಿರುವ ಅವಮಾನವನ್ನು ಕಾಪಾಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೇಕೆದಾಟು ಯೋಜನೆ ಬಗ್ಗೆ ಸಿ.ಟಿ.ರವಿಗೆ ತಿರುಗೇಟು ನೀಡಿದ ಹೆಚ್.ಡಿ.ಕುಮಾರಸ್ವಾಮಿ, ಕನ್ನಡಿಗ ನಾನು. ಸಿ.ಟಿ.ರವಿ ಭಾರತೀಯನಿರಬಹುದು. ನನ್ನ ತಾಯಿಯನ್ನು ಕಾಪಾಡಬೇಕಾಗಿದ್ದು ನನ್ನ ಕರ್ತವ್ಯ. ನನ್ನ ತಾಯಿಯನ್ನು ಉಳಿಸಿಕೊಳ್ಳಬೇಕು. ಆಮೇಲೆ ಭಾರತೀಯ ತಾಯಿ ಎಂದು ಸೂಚ್ಯವಾಗಿ ಹೇಳಿದರು.
ಈಗಿನ ಬಿಜೆಪಿಯಲ್ಲಿ ನಡೆಯುತ್ತಿರುವುದು ಮಕ್ಕಳ ಆಟವೆಂದು ಟೀಕಿಸಿದ ಎಚ್.ಡಿಕೆ, ಶಿಸ್ತುಬದ್ಧ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಅಪಹಾಸ್ಯಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಮಾರಣ್ಣನವರ ಕಾಲದಲ್ಲಿ ಕೆಲಸಗಳಾಗುತ್ತಿದ್ದವು, ಗೌರವಗಳು ಸಿಗುತ್ತಿದ್ದವು. ಆದರೆ ನಮ್ಮದೇ ಸರ್ಕಾರದಲ್ಲಿ ಕೆಲಸಗಳಾಗುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ಶಾಸಕ ಎಂ.ಪಿ.ಕುಮಾರಸ್ವಾಮಿಯೇ ಹೇಳಿದ್ದನ್ನು ನೋಡಿದರೆ ಈ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲವೆನ್ನುವುದು ಸ್ಪಷ್ಟವಾಗಿದೆ. ಎಂ.ಪಿ.ಕುಮಾರಸ್ವಾಮಿ ಹೇಳಿದಂತೆ ಬಹುತೇಕ ಬಿಜೆಪಿ ಶಾಸಕರ ಆಂತರಿಕ ಭಾವನೆಯೂ ಇದೇ ಆಗಿದೆ ಎಂದರು.
ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಆಗಲ್ಲ: ಯತ್ನಾಳ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಕ್ಷದ ವರಿಷ್ಠರ ಮೇಲೆ ನಿರಂತರ ಒತ್ತಡವೇ ಕಾರಣ ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಬಸವರಾಜ್ ಪಾಟೀಲ್ ಯತ್ನಾಳ್ ಹುಬ್ಬಳ್ಳಿಯಲ್ಲಿಂದು ಹೇಳಿದರು.

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಕ್ಷದ ವರಿಷ್ಠರ ಮೇಲೆ ನಿರಂತರ ಒತ್ತಡವೇ ಕಾರಣ ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಬಸವರಾಜ್ ಪಾಟೀಲ್ ಯತ್ನಾಳ್ ಹುಬ್ಬಳ್ಳಿಯಲ್ಲಿಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಮುಖಂಡರು ತನ್ನದೇ ಆದ ಛಾಪು ಮೂಡಿಸಲು ಬಯಸುತ್ತಾರೆ, ಬೊಮ್ಮಾಯಿ ಇದಕ್ಕೆ ಹೊರತಾಗಿಲ್ಲ. ಮೂರ್ನಾಲ್ಕು ತಿಂಗಳ ಕಾಲ ಅವರು ಆಡಳಿತ ನಡೆಸಲು ಬಿಡಬೇಕು ಎಂದು ಹೇಳಿದ ಯತ್ನಾಳ್, ಕೇಂದ್ರದ ವರಿಷ್ಠರಿಗೆ ವಿಧೇಯರಾಗಿಲ್ಲ, ಶಾಸಕರ ಮಾತನ್ನು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿಯನ್ನು ಬಲವಂತದಿಂದ ಬದಲಾಯಿಸಬಾರದು ಎಂದರು.
ಬೊಮ್ಮಾಯಿ ಎರಡೂ ವರ್ಷ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸಲು ಚಾಮುಂಡೇಶ್ವರಿ ದೇವತೆಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದ ಯತ್ನಾಳ್, ಪ್ರತಿಯೊಬ್ಬರು ಅವರಿಗೆ ಸಹಕರಿಸಬೇಕು, ಸಚಿವ ಸ್ಥಾನ ಸಿಗದ ಶಾಸಕರು, ಅಗತ್ಯವಾದ ಖಾತೆ ಸಿಗದ ಸಚಿವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವುದು ನ್ಯಾಯಯುತವಾಗಿರುವುದಿಲ್ಲ, ಸಚಿವರು, ಶಾಸಕರ ಕುಂದುಕೊರತೆಗಳನ್ನು ನೋಡಿಕೊಳ್ಳುವುದರಲ್ಲಿ ಮುಖ್ಯಮಂತ್ರಿ ನಿರತರಾದರೆ, ಜನರ ಸಮಸ್ಯೆಯನ್ನು ಆಲಿಸುವವರು ಯಾರು ಎಂದು ಅವರು ಪ್ರಶ್ನಿಸಿದರು. ತಾವು ಇಷ್ಟ ಪಟ್ಟ ಖಾತೆ ಸಿಗದೆ ಅಸಮಾಧಾನಗೊಂಡಿರುವವರ ಹಿಂದಿರುವ ಸೂತ್ರದಾರ ಯಾರು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಅವರನ್ನು ವಿರೋಧಿಸಿದ್ದರಿಂದ ಸಚಿವ ಸ್ಥಾನ ಸಿಗಲಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಅರವಿಂದ್ ಬೆಲ್ಲದ್ ಅಥವಾ ಯತ್ನಾಳ್ ತಮ್ಮ ಬೇಡಿಕೆಗಳೊಂದಿಗೆ ಹೊರಗೆ ಬಂದಿದ್ದಾರೆ. ಅದೇ ಶಕ್ತಿಗಳು ರಮೇಶ್ ಜಾರಕಿಹೊಳಿ ಭವಿಷ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ನಾವು ವಿರೋಧಿಸಿದ್ದರಿಂದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಹೇಳಲು ಸರಿಯಾಗಿದೆ. ನಾಯಕತ್ವ ಬದಲಾವಣೆಗೆ ವೇದಿಕೆಯನ್ನು ಸೃಷ್ಟಿಸಿದ ನಂತರ ಬೇರೆಯವರು ಮುಖ್ಯಮಂತ್ರಿಯಾಗಿದ್ದಕ್ಕೆ ಪಶ್ಚ್ಯಾತಾಪ ಪಡುವುದಿಲ್ಲ ಎಂದರು.
1990 ರ ದಶಕದ ಆರಂಭದಲ್ಲಿ ಈದ್ಗಾ ಆಂದೋಲನ ಮತ್ತು ಚಳುವಳಿಗಾರರ ಮೇಲೆ ಪೋಲಿಸ್ ದಾಳಿಯನ್ನು ನಿಗ್ರಹಿಸುವ ಹಿಂದಿನ ಶಕ್ತಿಯಾಗಿದ್ದರಿಂದ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರಿಂದ ಹಿಂದೂ ಹೋರಾಟಗಾರರಿಗೆ ನೋವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ,ಬೊಮ್ಮಾಯಿ ಹಿಂದೂ ವಿರೋಧಿ ನಿರ್ಣಯ ಕೈಗೊಂಡರೆ ಹೋರಾಟಗಾರರು , ಹೋರಾಟಕ್ಕೆ ಧುಮುಕುತ್ತಾರೆ ಎಂದು ಹೇಳಿದ ಯತ್ನಾಳ್, ಪಕ್ಷದ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರವನ್ನು ಒಪ್ಪಿಕೊಂಡಿದ್ದೇನೆ, ಪ್ರತಿಯೊಂದು ವಿಷಯವೂ ಅವರ ಇಚ್ಛೆಯಂತೆ ನಡೆಯುವುದಿಲ್ಲ ಮತ್ತು ಪ್ರತಿ ಸಮಸ್ಯೆಗೆ ಪರಿಹಾರ ಇರುತ್ತದೆ ಎಂದು ಹೇಳಿದರು. (kpc)



