

ಕಳೆದ ಎರಡು ತಿಂಗಳುಗಳಿಂದ ರಾಜ್ಯದಾದ್ಯಂತ ತುರ್ತು ಸೇವೆಗಾಗಿ ಮೀಸಲಾಗಿ ಕಾರ್ಯನಿರ್ವಹಿಸುತ್ತಿರುವ 112 ವಾಹನ ಸಾರ್ವಜನಿಕರಿಗೆ ಸಹಾಯವಾಗುತ್ತಿದೆ. ಹಿಂದೆ ಅಗ್ನಿ ಅವಘಡಕ್ಕೆ, ಅಪಘಾತಕ್ಕೆ ಪ್ರತ್ಯೇಕ ಮಾಹಿತಿ ನೀಡುವ ವ್ಯವಸ್ಥೆ ಇತ್ತು. ಈಗ ಸಾರ್ವಜನಿಕರ ಯಾವುದೇ ತುರ್ತು ಅಗತ್ಯಕ್ಕೆ 112 ಮೀಸಲಾಗಿ ಕಾರ್ನಿರ್ವಹಿಸುತ್ತಿದೆ.ಈ ಸೇವೆ ಆರಂಭವಾಗಿ 2 ತಿಂಗಳುಗಳ ನಂತರ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಅಧಿಕೃತ ಉದ್ಘಾಟನೆ ಮಾಡಿದ್ದು ವಿಶೇಶ.
ಕುಮಟಾ ಸುದ್ದಿ- ದಿನಾಂಕ; 11-08-2021 ರಂದು ಮಧ್ಯಾಹ್ನ ERSS-112 ಗೆ ಸಾರ್ವಜನಿಕರಾದ ಶ್ರೀಮತಿ ದೀಪಾ ಇವರು ಕರೆ ಮಾಡಿ ಹಳೆ ಹೆರವಟ್ಟಾದಲ್ಲಿ ಒಂದು 80 ರಿಂದ 85 ವರ್ಷ ವಯಸ್ಸಿನ ಹೆಂಗಸು ನಮ್ಮ ಮನೆಯ ಒಳಗೆ ಬಂದು ಕುಳಿತಿದ್ದು ಆ ಹೆಂಗಸು ಯಾರೆಂದು ಗೊತ್ತಿಲ್ಲ ಅಂತ ತಿಳಿಸಿದಂತೆ ನಾವು ERSS ವಾಹನದ ಮೇಲೆ ಶ್ರೀಮತಿ ದೀಪಾ ಹಳೆ ಹೆರವಟ್ಟಾ ಇವರ ಮನೆಯ ಹತ್ತಿರ ಹೋಗಿ ಅವರ ಮನೆಯಲ್ಲಿ ಇದ್ದ ಆ ಹೆಂಗಸನ್ನು ವಿಚಾರಿಸಲಾಗಿ ಅವರು ಸರಿಯಾದ ಮಾಹಿತಿಯನ್ನು ನಿಡಿರುವುದಿಲ್ಲ ಹಾಗು ಮಾನಸಿಕ ಅಸ್ವಸ್ಥಳನಂತೆ ಕಂಡು ಬಂದಿದ್ದು ಇರುತ್ತದೆ. ಆಗ ಆ ಹೆಂಗಸಿನ ಪೋಟೋ ತೆಗೆದು ಎಲ್ಲಾ ಕಡೆ ವಿಚರಿಸಲಾಗಿ ಆ ಹೆಂಗಸು ಇರುವ ವಿಳಾಸ ಪತ್ತೆ ಆಗಿದ್ದು ಆ ಹೆಂಗಸನ್ನು ಕರೆದುಕೊಂಡು ಹೋಗಿ ಕುಮಟಾದ ಹೊಸ ಹೆರವಟ್ಟಾದ ನಿವಾಸಿಯಾದ ಅವರ ಸೊಸೆಯಾದ ಶ್ರೀಮತಿ ಲಕ್ಷ್ಮಿ ಗಣಪತಿ ಭಟ್ ಇವರ ತಾಬಾ ನೀಡಿ ಈ ವಿಷಯವನ್ನು ಕುಮಟಾ ಪೊಲೀಸ್ ಠಾಣೆಗೆ ತಿಳಿಸಿರುತ್ತಾರೆ.
ಶಿರಸಿ ವರದಿ- ದಿ: 12-08-2021 ರಂದು 10-45 ಗಂಟೆಗೆ ಸಿರ್ಸಿ-ಬನವಾಸಿ-ಗೋಣೂರು ಗ್ರಾಮದಿಂದ 112ಗೆ ಕರೆ ಬಂದ ತಕ್ಷಣ ತುರ್ತು ಸ್ಪಂದನಾ ವಾಹನ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಅಲ್ಲಿ ತಾಯಿ ಮತ್ತು ಮಗನ ನಡುವೆ ಜಗಳ ವಾಗಿದ್ದು, ತಾಯಿ ಜೊತೆ ಮಗನು ಮನಸ್ಥಾಪಹೊಂದಿ ವಿಷಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕೂಡಲೇ 112 ವಾಹನದ ಸಿಬ್ಬಂದಿಗಳನ್ನು ಆತನನ್ನು ತಕ್ಷಣ ಬನವಾಸಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿರುತ್ತಾರೆ.
ಪೋಸ್ಕೋ ಆರೋಪಿಗೆ ಕಠಿಣ ಶಿಕ್ಷೆ….. ಬನವಾಸಿ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ: 47/2016 ಕಲಂ 363 ಐ.ಪಿ.ಸಿ ಮತ್ತು 08, 10 ಪೋಕ್ಸೋ ಕಾಯ್ದೆ , ಸ್ಪೇಷಲ್ ಕೇಸ್ ನಂ 29/2016. ಬನವಾಸಿ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ: 47/2016 ಕಲಂ 363 ಐ.ಪಿ.ಸಿ ಮತ್ತು 08,10 ಪೋಕ್ಸೋ ಕಾಯ್ದೆ ಪ್ರಕರಣ ದಿನಾಂಕ: 03-04-2016 ರಂದು ದಾಖಲಾಗಿದ್ದು . ಈ ಪ್ರಕರಣದ ಆರೋಪಿತರಾದ 1) ಶಂಕರ ಯಮುನಷಾ ಕಟಾರಿ ಸಾ// ವಾಲ್ಮೀಕಿ ಸರ್ಕಲ್ ಹೊಸಪೇಟೆ ಬಳ್ಳಾರಿ ,02) ರಾಘವೇಂದ್ರ ತಂದೆ ಸದಾನಂದ ನಾಯ್ಕ ಸಾ// ನಂದನಗದ್ದಾ ಕಾರವಾರ ರವರ ವಿರುದ್ದ ದೋಷಾರೋಪಣಾ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ. ತನಿಖಾಧಿಕಾರಿ ಹಾಜರು ಪಡಿಸಿದ ಎಲ್ಲಾ ಸಾಕ್ಷಾಧಾರಗಳನ್ನು ನ್ಯಾಯಾಲಯವು ಕೂಲಂಕಶವಾಗಿ ವಿಚಾರಣೆ ನಡೆಸಿ ಈ ಪ್ರಕರಣದ ಆರೋಪಿತರ ವಿರುದ್ದ ಅಪರಾಧ ಸಾಬೀತಾಗಿದೆ ಎಂದು ದಿ: 12-08-2021 ರಂದು ಮಾನ್ಯ ಜಿಲ್ಲಾ ಸತ್ರ, ಎಪ್.ಟಿ ಎಸ್.ಸಿ-1, ಮಕ್ಕಳ ಸ್ನೇಹಿ ನಾಯಾಲಯ ಕಾರವಾರದ ನ್ಯಾಯಾಧೀಶರಾದ ಶ್ರೀ ಶಿವಾಜಿ ಅನಂತ್ ನಾಲ್ವಡಿ ರವರು ಆರೋಪಿತ 1ನೇಯನಿಗೆ 03 ವರ್ಷ 06 ತಿಂಗಳು ಕಾರಾಗೃಹವಾಸ ಹಾಗೂ 5000/- ರೂ ಜುಲ್ಮಾನೆ ಹಾಗೂ 2ನೇ ಆರೋಪಿತನಿಗೆ 01 ವರ್ಷ 09 ತಿಂಗಳು ಕಾರಾಗೃಹವಾಸ ಹಾಗೂ 2500/- ರೂ ಜುಲ್ಮಾನೆ ಶಿಕ್ಷೆ ವಿದಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀ ಸುಬಾಷ ಪ್ರಭಾಕರ ಕೈರನ್ ರವರು ಎಲ್ಲಾ ಸಾಕ್ಷಿಗಳನ್ನು ವಿಚಾರಣೆಮಾಡಿ ವಾದ ಮಂಡಿಸಿರುತ್ತಾರೆ. ಅಂದಿನ ತನಿಖಾದಿಕಾರಿಯಾದ ಶ್ರೀಮತಿ ಸುರೇಖಾ ಭಾಡ್ಕರ್ ರವರು ತನಿಖೆ ನಡೆಸಿದ್ದು , ಬನವಾಸಿ ಪೊಲೀಸ್ ಠಾಣೆಯ ಎ.ಎಸ್.ಐ ಸಂತ್ರಾಮ ಕಾಂಬಳ್ಳೆ , ಎ.ಎಸ್.ಐ ಪ್ರಶಾಂತ ದೇವಿದಾಸ ನಾಯ್ಕ , ಸಿ.ಪಿ.ಸಿ-977 ಗಣೇಶ ಎಲ್ ಇವರು ಎಲ್ಲಾ ಸಾಕ್ಷಿದಾರರಿಗೆ ಸಾಕ್ಷಿ ನುಡಿಯಲು ಸೂಕ್ತ ತಿಳುವಳಿಕೆ ನೀಡಿ ಸಾಕ್ಷಿ ಹೇಳಲು ಶ್ರಮಿಸಿರುತ್ತಾರೆ. ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿದ , ಅಂದಿನ ಪಿ.ಎಸ್.ಐ. (ಕಾ&ಸೂ) ಶ್ರೀಮತಿ ಸುರೇಖಾ ಭಾಡ್ಕರ್ ಬನವಾಸಿ ಪೊಲೀಸ್ ಠಾಣೆ, ಹಾಗೂ ಬನವಾಸಿ ಠಾಣೆಯ ಕೊರ್ಟ ವಾಚ್ ಕರ್ತವ್ಯದ ಎ.ಎಸ್.ಐ ಸಂತ್ರಾಮ ಕಾಂಬಳ್ಳೆ , ಎ.ಎಸ್.ಐ ಪ್ರಶಾಂತ ದೇವಿದಾಸ ನಾಯ್ಕ , ಸಿ.ಪಿ.ಸಿ-977 ಗಣೇಶ ಎಲ್, ಮತ್ತು ವಿಚಾರಣೆಯನ್ನು ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀ ಸುಬಾಷ ಪ್ರಭಾಕರ ಕೈರನ್ ರವರ ಕಾರ್ಯವನ್ನು ಈ ಮೂಲಕ ಅಭಿನಂದಿಸಲಾಗಿದೆ.





