

ನ್ಯಾಯಾಲಯದಲ್ಲಿ ಸ್ವಾತಂತ್ರ‍್ಯೋತ್ಸವ
ಸಿದ್ದಾಪುರ : ೭೫ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಭಾನುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಸಿದ್ದರಾಮ ಎಸ್.,ಧ್ವಜಾರೋಹಣ ನೆರವೇರಿಸಿದರು.
ಈ ಸಂದರ‍್ಭದಲ್ಲಿ ಮಾತನಾಡಿದ ಅವರು, ‘ಮಹಾತ್ಮ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದ ಹಲವು ನಾಯಕರು ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಸ್ವಾತಂತ್ರ‍್ಯ ದೊರಕಿದ ನಂತರ ದೇಶ ನಡೆಸಲು ಕಾನೂನು ಬೇಕಾಯಿತು, ಇದರಿಂದ ಸಂವಿಧಾನ ರಚನೆಯಾಯಿತು. ನಮ್ಮ ನಡುವೆ ಯಾವುದೇ ಸಮಸ್ಯೆ ಉದ್ಭವಿಸಿದರೂ ಸಂವಿಧಾನದಡಿಯಲ್ಲಿ ಬಗೆಹರಿಸಲು ಸಾಧ್ಯವಿದೆ. ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳ ಅಡಿಯಲ್ಲಿ ಎಲ್ಲವೂ ಬರುತ್ತದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. ನಮ್ಮ ಸಂವಿಧಾನದ ಆಶಯದಂತೆ ಜನರ ನಡುವೆ ಸಹೋದರತ್ವ ಬೆಳೆಯಬೇಕುʼ ಎಂದರು.
ವಕೀಲರ ಸಂಘದ ಅಧ್ಯಕ್ಷ ದಿನೇಶಕುಮಾರ್, ಕಾರ್ಯದರ್ಶಿ ಎಂ.ಎನ್.ಹೆಗಡೆ ಹಾಗೂ ಇತರ ವಕೀಲರು, ಸಹಾಯಕ ಸರ್ಕಾರಿ ಅಭಿಯೋಜಕ ಚಂದ್ರಶೇಖರ್ ಎಚ್.ಎಸ್., ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೇಗಾ ಲೋಕ ಅದಾಲತ್ ನಲ್ಲಿ ದಾಖಲೆ-ಆ.14 ರಂದು ನಡೆದ ಮೇಗಾ ಲೋಕ ಅದಾಲತ್ ನಲ್ಲಿ ಸಿದ್ಧಾಪುರ ನ್ಯಾಯಾಲಯ ದಾಖಲೆ ಮಾಡಿದೆ. 1152 ಪ್ರಕರಣ ಗಳನ್ನು ನ್ನು ಇತ್ಯರ್ಥಪಡಿಸಿರುವ ನ್ಯಾಯಾಲಯ 60 ಲಕ್ಷ, 27 ಸಾವಿರದ ಎಂಟುನೂರು15ರೂಪಾಯಿಗಳನ್ನು ಸಂಗ್ರಹಿಸಿದೆ. ಈ ಕೆಲಸಕ್ಕೆ ಸಹಕರಿಸಿದ ಪೊಲೀಸರು, ತಾಲೂಕು ಕಾನೂನುಸಮಿತಿ ಮತ್ತು ಇತರರಿಗೆ ನ್ಯಾಯಾಧೀಶ ಎಸ್. ಸಿದ್ಧರಾಮ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ಹಾರ್ಸಿಕಟ್ಟಾ ಸುದ್ದಿ- ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಬೆಳೆಗಳ ಕಂಪನಿಯಲ್ಲಿ ನೂತನವಾಗಿ ಆರಂಭವಾದ ಹಿಟ್ಟಿನ ಗಿರಣಿಯನ್ನು ಸುಧಾ ಎಂ.ಹೆಗಡೆ ಕರ್ಕಿಸವಲ್ ಉದ್ಘಾಟಿಸಿದರು. ಕಂಪನಿ ಎಂಡಿ ಎಸ್.ಆರ್.ಹೆಗಡೆ ಕುಂಬಾರಕುಳಿ ಹಾಗೂ ಎಲ್ಲ ನಿರ್ದೇಶಕರು, ಹಾರ್ಸಿಕಟ್ಟಾ ಗ್ರಾಪಂ ಉಪಾಧ್ಯಕ್ಷ ಶಾಂತಕುಮಾರ ಪಾಟೀಲ್, ಸಂಧ್ಯಾ ಭಟ್ಟ ಗಾಳಿಮನೆ, ಕಂಪನಿ ಸಿಇಒ ದರ್ಶನ ಹೆಗಡೆ, ಪ್ರಮೋದ ಕೊಡಿಯಾ ಇತರರಿದ್ದರು.






ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿದ್ದಾಪುರ(ಉ.ಕ)
ದಿನಾಂಕ : ೧೭-೦೮-೨೦೨೧ ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ
ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
೧ ರಾಶಿ ೩೯೯೦೯ ೪೨೫೦೯ ೪೧೯೬೯
೨ ತಟ್ಟಿಬೆಟ್ಟೆ ೩೨೪೧೯ ೪೦೧೦೯ ೩೪೪೬೯
೩ ಕೆAಪಗೋಟು ೨೭೮೯೦ ೩೨೩೬೯ ೩೦೪೦೯
೪ ಬಿಳಿಗೋಟು ೨೭೭೯೯ ೩೫೭೫೯ ೩೪೯೬೯
೫ ಚಾಲಿ ೩೮೬೮೯ ೪೧೧೯೯ ೪೦೮೯೯
೬ ಕೋಕಾ ೨೩೮೯೯ ೩೪೦೯೯ ೩೨೩೧೨
೭ ಕಾಳುಮೆಣಸು ೩೫೪೬೯ ೩೮೬೦೯ ೩೭೩೦೨
ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಆಗಸ್ಟ್ 20 ರವರೆಗೂ ಮಳೆ ಅಬ್ಬರ
ಬಂಗಾಳಕೊಲ್ಲಿಯಲ್ಲಿ ಪ್ರಬಲ ಮಾರುತಗಳ ಕಾರಣ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ಇಂದಿನಿಂದ ಇದೇ ಆಗಸ್ಟ್ 20ರವರೆಗೂ ಮಳೆ ಹೆಚ್ಚಾಗಲಿದೆ…
–

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಪ್ರಬಲ ಮಾರುತಗಳ ಕಾರಣ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ಇಂದಿನಿಂದ ಇದೇ ಆಗಸ್ಟ್ 20ರವರೆಗೂ ಮಳೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ.
ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಈಗ ಮತ್ತೆ ಮಳೆರಾಯನ ಆರ್ಭಟ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ನಾಲ್ಕು ದಿನ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದೂ ವರದಿ ಹೇಳಿದೆ.
ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಧ್ಯಪ್ರದೇಶ ರಾಜ್ಯಗಳಲ್ಲೂ ಇನ್ನೆರಡು ದಿನ ವ್ಯಾಪಕ ಮಳೆಯಾಗಲಿದೆ. ಮಣಿಪುರ, ತ್ರಿಪುರ, ಮಿಜೋರಾಂ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ. (
(kpc)
