

ಬೇರೆಬೇರೆ ಪ್ರದೇಶದ ಜನ ವಿಭಿನ್ನವಾಗಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಪ್ರತಿವರ್ಷ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸುವ ಸಿದ್ಧಾಪುರದ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಈ ವರ್ಷ ಇಲ್ಲಿಯ ಶಿರಳಗಿ ಗ್ರಾಮ ಪಂಚಾಯತಿಯ ಮುಗದೂರಿನ ಪ್ರಚಲಿತ ಆಶ್ರಯಧಾಮದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿತು.
ಆಶ್ರಯಧಾಮಕ್ಕೆ ಅವಶ್ಯವಿದ್ದ ಹೆಂಚು ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ನೀಡಿ ಸಂಘದಿಂದ 50 ಸಾವಿರ ರೂಪಾಯಿ ವ್ಯ ಯಿಸಿತು. ಇದೇ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಈ ಸಂಘದ ಜಿಲ್ಲಾ ಮಾಜಿ ಉಪಾಧ್ಯಕ್ಷ ಸಿದ್ಧಲಿಂಗಪ್ಪ ಕಮಡೊಳ್ಳಿ ಹುಬ್ಬಳ್ಳಿ ಈ ಆಶ್ರಮವಾಸಿಗಳೊಂದಿಗೆ ಸಮಯ ಕಳೆದು ಆಶ್ರಮಕ್ಕೆ ಹತ್ತು ಸಾವಿರ ರೂಪಾಯಿ (ದೇಣಿಗೆ) ಮೌಲ್ಯದ ದಿನಸಿ ನೀಡಿದರು. ಈ ಸಂದರ್ಭದಲ್ಲಿ ಸುದರ್ಶನ್ ಪಿಳ್ಳೆ, ಆರ್.ಜಿ.ಹೆಗಡೆ, ಸುಬ್ರಾಯ ನಾಯ್ಕ, ವಿನಾಯಕ ನಾಯ್ಕ,ನಾರಾಯಣ ನಾಯ್ಕ, ದೇವೇಂ ದ್ರ ನಾಯ್ಕ, ಮೋಹನ ಮಡಿವಾಳ ಸೇರಿದಂತೆ ಸಂಘದ ಸದಸ್ಯರು, ಗುತ್ತಿಗೆದಾರರು ಹಾಜರಿದ್ದರು.





