

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷತಾ ಯೋಜನೆಯಲ್ಲಿ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ನಮೃತಾ ಜಯಂತ ನಾಯ್ಕ ತೆಂಗಿನಮನೆ ಚಿಕಿತ್ಸೆಗಾಗಿ 60ಸಾವಿರ ರೂಗಳ ಚೆಕ್‍ನ್ನು ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಕಾಶ ಜಯಂತ ನಾಯ್ಕ ಅವರಿಗೆ ಬುಧವಾರ ಹಾರ್ಸಿಕಟ್ಟಾದಲ್ಲಿ ವಿತರಿಸಿದರು. ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಎಂ.ಆಚಾರ್ಯ, ಮೇಲ್ವಿಚಾರಕಿ ಪದ್ಮಾವತಿ ಗೌಡ, ಅಭಿಷೇಕ ಗುಡಿಗಾರ ಹಾಗೂ ಸೇವಾಪ್ರತಿನಿಧಿಗಳಿದ್ದರು.
5 ಸಾವಿರ ಸಂಖ್ಯೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಅಪೌಷ್ಠಿಕ ಮಕ್ಕಳ ಪ್ರಮಾಣವನ್ನು ತಗ್ಗಿಸುವ ಹಿನ್ನೆಲೆಯಲ್ಲಿ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಕಾರ್ಯನಿರ್ವಹಿಸುತಿದ್ದು ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಪ್ರಮಾಣ ಶೂನ್ಯಕ್ಕಿಳಿಸುವ ಗುರಿಯೊಂದಿಗೆ ನಮ್ಮ ಕೆಲಸ ನಡೆಯುತ್ತಿದೆ ಎಂದು ವಿ.ಆರ್. ದೇಶಪಾಂಡೆ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ದೇಶಪಾಂಡೆ ಹೇಳಿದರು. ಸಿದ್ಧಾಪುರ ಶಂಕರಮಠದಲ್ಲಿ ಟ್ರಸ್ಟ್ ಸಹಯೋಗದೊಂದಿಗೆ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಶಂಕರಮಠದೊಂದಿಗೆ ಸಂಘಟಿಸಿದ್ದ ಅಪೌಷ್ಠಿಕ ಮಕ್ಕಳಿಗೆ ಕಿಟ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಪೌಷ್ಠಿಕ ಮಕ್ಕಳಿಂದ ಸಾಧನೆ, ಸಾಹಸ ಅಸಾಧ್ಯ ಎಲ್ಲರ ಭವಿಷ್ಯ ಉತ್ತಮವಾಗಬೇಕಾದರೆ ಅಪೌಷ್ಠಿಕತೆ ಶೂನ್ಯಕ್ಕಿಳಿಯಬೇಕು. ಪ್ರತಿ ಪಾಲಕರು ತಮ್ಮ ಹೆಂಡತಿಯೊಂದಿಗೆ ಪುರುಷರೂ ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಯಾರೂ ಅಪೌಷ್ಠಿಕತೆಯಿಂದ ಬಳಲುವುದಿಲ್ಲ. ಮಕ್ಕಳ ಪಾಲನೆ-ಪೋಷಣೆ ಕೇವಲ ಮಹಿಳೆ ಅಥವಾ ತಾಯಿಯ ಜವಾಬ್ಧಾರಿಯಲ್ಲ ಪುರುಷ ಕೂಡಾ ಸ್ತ್ರೀಯರಷ್ಟೇ ಆಸಕ್ತಿಯಿಂದ ಮಕ್ಕಳ ಪೋಷಣೆ ಮಾಡಬೇಕು ಎಂದರು. ತಮ್ಮ ಟ್ರಸ್ಟ್ನಿಂದ ಹಳಿಯಾಳ, ಯಲ್ಲಾಪುರ, ಶಿರಸಿ ಕ್ಷೇತ್ರಗಳಲ್ಲಿ ಅಪೌಷ್ಠಿಕತೆ ವಿರುದ್ಧದ ಕಾರ್ಯಕ್ರಮ ನಡೆಯುತಿದೆ. ಮುಂದೆ ಕರಾವಳಿಯ 3 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಕಾರ್ಯ ನಡೆಯಲಿದೆ ಎಂದರು.
ಇದೇ ಸಂರ್ಭದಲ್ಲಿ ಸಿದ್ಧಾಪುರ ತಾಲೂಕಿನಲ್ಲಿ ಕಳೆದ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಪಡೆದ ವಿದ್ಯಾರ್ಥಿ,ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.





