
ಮಹಾತ್ಮಾ ಗಾಂಧೀಜಿ ತಂಗುವಿಕೆ ಪ್ರಭಾವ: ಬೆಳಗಾವಿಯ ಹುಡ್ಲಿ ಗ್ರಾಮದಲ್ಲಿ ಈಗಲೂ ಗಾಂಧಿ ತತ್ವ ಪಾಲನೆ!
1937ರಲ್ಲಿ ಬೆಳಗಾವಿ ಜಿಲ್ಲೆಯ ಹೂಡ್ಲಿಯಲ್ಲಿ ಮಹಾತ್ಮಾ ಗಾಂಧಿಯವರು ಒಂದು ವಾರ ತಂಗಿದ್ದ ಗ್ರಾಮವೀಗ ಬಹಳ ಬದಲಾವಣೆ ಕಂಡಿದೆ. ಕಳೆದೊಂದು ಶತಮಾನದಿಂದ ಇಲ್ಲಿ ಸಾಮಾಜಿಕ ಸುಧಾರಣೆಯಾಗಿದೆ.

ಈ ಜೈಲಿಗೆ ಹೋಗಿ… ಒಂದು ದಿನ ವಾಸ್ತವ್ಯಕ್ಕೆ ಇಲ್ಲಿದೆ ಅವಕಾಶ!
ಜೈಲಿನೊಳಗೆ ಜೀವನ ಹೇಗಿರುತ್ತೆ. ಅಲ್ಲಿ ಕೈದಿಗಳು ಯಾವ ರೀತಿ ಇರ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಇರುತ್ತೆ. ಇದನ್ನ ತಿಳ್ಕೋಬೇಕು ಅನ್ನೋರಿಗೆ ಇಲ್ಲೊಂದು ಅವಕಾಶ ಸಿಗಲಿದೆ.

ಬೆಳಗಾವಿ: ಜೈಲಿನೊಳಗೆ ಜೀವನ ಹೇಗಿರುತ್ತೆ. ಅಲ್ಲಿ ಕೈದಿಗಳು ಯಾವ ರೀತಿ ಇರ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಇರುತ್ತೆ. ಇದನ್ನ ತಿಳ್ಕೋಬೇಕು ಅನ್ನೋರಿಗೆ ಇಲ್ಲೊಂದು ಅವಕಾಶ ಸಿಗಲಿದೆ.
ಬೆಳಗಾವಿ ಜಿಲ್ಲೆಯ ಹಿಂಡಲಗ ಕೇಂದ್ರೀಯ ಕಾರಾಗೃಹದ ಅಧಿಕಾರಿಗಳು, ‘ಖೈದಿಗಳ ಜೀವನದಲ್ಲಿ ಒಂದು ದಿನ’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಯೋಜನೆಯನ್ನು ಆರಂಭಿಸಿದ್ದಾರೆ. ಈ ಹೊಸ ಯೋಜನೆಯಲ್ಲಿ 24 ಗಂಟೆಗಳ ಬಂಧನದ ಅನುಭವವನ್ನು ಪ್ರವಾಸಿಗರಿಗೆ ನೀಡಲಾಗುತ್ತದೆ. ಕಂಬಿ ಹಿಂದೆ ಕಳೆಯುವ ಅನುಭವವನ್ನು ಅಧಿಕಾರಿಗಳು ಜನರಿಗೆ ಕೊಡಲಿದ್ದಾರೆ.
ಜೈಲು ಜೀವನದ ಅನುಭವ ಪಡೆಯಲಿಚ್ಛಿಸುವ ಜನರು ರೂ.500 ನೀಡಿ, ಜೈಲಿನಲ್ಲಿ ಒಂದು ದಿನ ಕಾಲ ಕಳೆಯಬಹುದಾಾಗಿದೆ. ಈಗಾಗಲೇ ಯೋಜನೆಗೆ ಸಿದ್ಧತೆ ನಡೆಸಿರುವ ಅಧಿಕಾರಿಗಳು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರಾಗೃಹದ ಅಧಿಕಾರಿಗಳು. ಕಾರಾಗೃಹಕ್ಕೆ ಬರುವ ಜನರನ್ನು ಖೈದಿಗಳಂತೆ ನೋಡಲಾಗುತ್ತದೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿಯವರೆಗೂ ಖೈದಿಗಳಂತೆ ಕಾಲ ಕಳೆಯುವಂತಹ ಅವಕಾಶ ನೀಡಲಾಗುತ್ತದೆ. ಜೈಲಿಗೆ ಬರುವ ಅತಿಥಿಗಳಿಗೆ ಖೈದಿಗಳ ಸಮವಸ್ತ್ರ, ಖೈದಿ ಸಂಖ್ಯೆ, ಕೊಠಡಿಗಳು, ಖೈದಿಗಳಿಗೆ ನೀಡಲಾಗುವ ಊಟ, ಖೈದಿಗಳು ಮಾಡುವ ಕೆಲಸಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಜೈಲು ಸಿಬ್ಬಂದಿ ಬೆಳಿಗ್ಗೆ 5 ಗಂಟೆಗೆ ಅತಿಥಿಗಳನ್ನು ಎದ್ದೇಳಿಸುತ್ತಾರೆ. ಟೀ ನೀಡುವುದಕ್ಕೂ ಮುನ್ನ ಕೊಠಡಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನೀಡಲಾಗುತ್ತದೆ. ಇದಾದ 1 ಗಂಟೆ ಬಳಿಕ ಬೆಳಗಿನ ಉಪಾಹಾರ ನೀಡಲಾಗುತ್ತದೆ. 11 ಗಂಟೆಗೆ ಅನ್ನ ಮತ್ತು ಸಾಂಬಾರ್ ಊಟ ನೀಡಲಾಗುತ್ತದೆ. ಸಂಜೆ 7 ಗಂಟೆಗೆ ರಾತ್ರಿ ಊಟ ನೀಡಲಾಗುತ್ತದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾಂಸಾಹಾರ ನೀಡಲಾಗುತ್ತದೆ. ವೀಕೆಂಡ್ ಸಮಯದಲ್ಲಿ ಕಾರಾಗೃಹಕ್ಕೆ ಭೇಟಿ ನೀಡಿದ್ದೇ ಆದರೆ, ಈ ಅವಕಾಶ ಅತಿಥಿಗಳಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.
ದಿನದ ಕೆಲಸಗಳೆಲ್ಲಾ ಮುಗಿದ ಬಳಿಕ ಅತಿಥಿಗಳು ಹಾಸಿಗೆಗಳನ್ನು ಪಡೆದುಕೊಂಡು ಇತರರೊಂದಿಗೆ ನೆಲದ ಮೇಲೆ ಮಲಗಬೇಕು. ಮತ್ತಷ್ಟು ನೈಜತೆಗಾಗಿ ಅತಿಥಿಗಳನ್ನು ಕಾರಾಗೃಹದಲ್ಲಿ ಲಾಕ್ ಮಾಡುವ ಕೆಲಸವನ್ನೂ ಮಾಡುವ ಸಾಧ್ಯತೆಗಲಳಿವೆ ಎಂದು ಮಾಹಿತಿ ನೀಡಿದ್ದಾರೆ.
ಜೈಲಿಗೆ ಭೇಟಿ ನೀಡುವ ಅತಿಥಿಗಳು ಕೆಲವೊಮ್ಮೆ ಕ್ರಿಮಿನಲ್ ಗಳನ್ನು ಮುಖಾಮುಖಿ ನೋಡುವ ಸಾಧ್ಯತೆಗಳು ಎದುರಾಗಬಹುದು. ಜೈಲಿನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 29 ಕೈದಿಗಳಿದ್ದಾರೆ, ಇದರಲ್ಲಿ ದಂಡುಪಾಳ್ಯ ಗ್ಯಾಂಗ್’ನ ಸದಸ್ಯರು, ಸರಣಿ ಅತ್ಯಾಚಾರ ಹಾಗೂ ಕೊಲೆಗಾರ ಉಮೇಶ್ ರೆಡ್ಡಿ ಕೂಡ ಇದ್ದಾರೆ. ಕೈದಿಗಳ ಜೀವನದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಈ ಮೂಲಕ ಜನರು ಅಪರಾಧಗಳ ಎಸಗುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಡ್ಲಿ: 1937ರಲ್ಲಿ ಬೆಳಗಾವಿ ಜಿಲ್ಲೆಯ ಹೂಡ್ಲಿಯಲ್ಲಿ ಮಹಾತ್ಮಾ ಗಾಂಧಿಯವರು ಒಂದು ವಾರ ತಂಗಿದ್ದ ಗ್ರಾಮವೀಗ ಬಹಳ ಬದಲಾವಣೆ ಕಂಡಿದೆ. ಕಳೆದೊಂದು ಶತಮಾನದಿಂದ ಇಲ್ಲಿ ಸಾಮಾಜಿಕ ಸುಧಾರಣೆಯಾಗಿದೆ.
ಇಲ್ಲಿನ ಜನರ ಪ್ರಮುಖ ಉದ್ಯೋಗ ಖಾದಿ ಬಟ್ಟೆ ನೇಯ್ಗೆಯಾದರೂ ಕೂಡ ಈಗ ಬದಲಿ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದಾರೆ. ದೇಶ ಸೇವೆಯ ಉದ್ದೇಶದಿಂದ ಹಲವು ಯುವಕರು ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುತ್ತಿದ್ದಾರೆ. ಅದರ ಜೊತೆ ಖಾದಿ ಉದ್ಯಮ ಮತ್ತು ಕೃಷಿಯನ್ನು ಮುಂದುವರಿಸುತ್ತಿದ್ದಾರೆ. ಇಲ್ಲಿನ ಪ್ರಮುಖ ಸಕ್ಕರೆ ಕಾರ್ಖಾನೆಯಾದ ಬೆಳಗಾವಿ ಸಕ್ಕರೆ ಕಾರ್ಖಾನೆ ಹೂಡ್ಲಿಯ ಕಬ್ಬು ಬೆಳೆಯನ್ನು ಅವಲಂಬಿಸಿದೆ.
ಹುಡ್ಲಿಯಲ್ಲಿ ಮದ್ಯದ ಅಂಗಡಿಗಳು ಇಲ್ಲ, ನಿವಾಸಿಗಳು ಯಾವುದೇ ರೀತಿಯ ಮೂಢನಂಬಿಕೆಗಳನ್ನು ನಂಬುವುದಿಲ್ಲ. ಗ್ರಾಮಸ್ಥರು ಗಾಂಧಿಯವರ ಸಿದ್ಧಾಂತಗಳನ್ನು ದೃಢವಾಗಿ ನಂಬುತ್ತಾರೆ ಮತ್ತು ಮುಂಬರುವ ಪೀಳಿಗೆಗಳು ಸಂಪ್ರದಾಯವನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ ಎನ್ನುತ್ತಾರೆ ಹುಡಲಿ ಖಾದಿ ಗ್ರಾಮೋದ್ಯೋಗ ಉತ್ಪಾದಕ ಸಂಘದ ಉತ್ಪಾದನಾ ವ್ಯವಸ್ಥಾಪಕ ಈಶ್ವರ್ ಕುಲ್ಗೋಡ್.
ಗಾಂಧೀಜಿಯ ಸ್ವಾವಲಂಬನೆಯ ಸಿದ್ಧಾಂತಗಳಿಂದ ಪ್ರೇರಿತರಾಗಿ ಹುಡ್ಲಿಯ ನಿವಾಸಿಗಳು ಖಾದಿ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಗಂಗಾಧರ ರಾವ್ ದೇಶಪಾಂಡೆ — ಗಾಂಧಿಯನ್ನು ಹುಡ್ಲಿಗೆ ಕರೆತಂದವರು ಗ್ರಾಮವನ್ನು ಖಾದಿ ಗ್ರಾಮವಾಗಿ ಪರಿವರ್ತಿಸಿದರು ಮತ್ತು ಅಂದಿನಿಂದ ಇಲ್ಲಿಗೆ ಖಾದಿ ಉತ್ಪಾದನೆ ವೇಗ ಪಡೆದುಕೊಂಡಿದೆ. (kpc)
