ಮಳೆ ಹಾನಿ ಪರಿಹಾರ ಏನು? ಮಳೆ ನಿಂತು ಹೋದ ಮೇಲೆಭಾಗ-೦೨

ಎರಡು ತಿಂಗಳ ಮಳೆಯ ನಂತರ ಕರಾವಳಿ- ಮಲೆನಾಡು ಯುದ್ಧ ಮುಗಿದ ವಾತಾವರಣ ನೆನಪಿಸುತ್ತಿವೆ. ಬೃಹತ್‌ ಮಳೆಯ ನಡುವೆ ಶಿರೂರು ದುರಂತ ನಡೆದು ಹೋಗಿ ವಯನಾಡು ದುರಂತ ಮರೆಯಾಗುವ ಮೊದಲೇ ಕಾರವಾರದ ಕೋಡಿಬಾಗ ಸೇತುವೆ ನೀರು ಸೇರಿದೆ.

ಈ ಮೂರು ಘಟನೆಗಳು ಕರಾವಳಿ ಮಲೆನಾಡಿನ ಭೀಕರ ಮಳೆಗೆ ಸಾಕ್ಷಿ.

ಮಳೆ ಮುಗಿಯುವ ಮುನ್ನ ಸೂಕ್ತ ಪರಿಹಾರಕ್ಕಾಗಿ ವಿರೋಧಿ ಪಕ್ಷ ಬಿ.ಜೆ.ಪಿ. ಮನವಿ ಮಾಡಿದೆ. ಸಿದ್ದಾಪುರದ ಟಿ.ಎಂ.ಎಸ್.‌ ಅಧ್ಯಕ್ಷ ಆರ್.‌ ಎಂ. ಹೆಗಡೆ ಸೇರಿದಂತೆ ಕೆಲವು ಸಹಕಾರಿ ಶುರೀಣರು ಈ ವರ್ಷದ ಮಳೆಯ ಅನಾಹುತ ಪ್ರಸ್ಥಾಪಿಸಿ ಈಗಾಗಲೇ ಅರ್ಧದಷ್ಟು ಬೆಳೆನಾಶ ಆಗಿರುವ ರೈತರೆಲ್ಲರಿಗೆ ಸಾಮೂಹಿಕ ಪರಿಹಾರ ಘೋಶಿಸಬೇಕೆಂದು ಮನವಿ ಮಾಡಿದ್ದಾರೆ. ಕೆಲವೆಡೆ ರೈತ ಸಂಘದ ಮುಖಂಡರೂ ಮಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ರೈತರಿಗೆ ನಾಟಿ ಮಾಡಿದ ಬೀಜ, ಬೆಳೆ ನಾಶವಾದ ಆತಂಕ, ಕೆಲವೆಡೆ ಎರಡೆರಡು ಬಾರಿ ನಾಟಿ ಮಾಡಿದ ಅನಿವಾರ್ಯತೆ, ನಿರಂತರ ಮಳೆಯ ನಡುವೆ ಅಡಿಕೆಗೆ ಕೊಳೆ ಮದ್ದು ಸಿಂಪಡಿಸಲಾರದ ಅನಿವಾರ್ಯತೆ, ಮದ್ದು ಸಿಂಪಡಿಸಿದರೂ ಕೊಳೆ ನಿಯಂತ್ರಿಸಲಾಗದ ಸ್ಥಿತಿ ಈ ಪರಿಸ್ಥಿತಿಯಲ್ಲಿ ರೈತ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ದುಸ್ಥಿತಿ.

ಸರ್ಕಾರ ಈ ಬಗ್ಗೆ ಅಭಿವೃದ್ಧಿ ಅನುದಾನ ಘೋಶಿಸಬಹುದು, ವೈಯಕ್ತಿಕ ಹಾನಿ ಅನುಭವಿಸಿದ ರೈತನ ಸ್ಥಿತಿ ಏನು? ಸರ್ಕಾರ ಕೊಡುವ ಗುಂಟೆಗೆ ಕೊಡುವ ಪರಿಹಾರ ಧನ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ.

ರೈತರಿಗೆ ನೈಸರ್ಗಿಕ ಆಪತ್ತಿನ ರಕ್ಷಣೆ ನೀಡುವ ಬೆಳೆ ವಿಮೆ ಕೆಲವು ಪರಿವಾರದ ಉದ್ಯಮಿಗಳನ್ನು ಕೊಬ್ಬಿಸಿದ್ದು ಬಿಟ್ಟರೆ ರೈತರಿಗೆ ಆದ ಅನುಕೂಲ ಗಣನೆಗೂ ತೆಗೆದುಕೊಳ್ಳುವಂತಿಲ್ಲ. ಸಿದ್ಧಾಪುರ ನಾಣಿಕಟ್ಟಾದ ತ್ಯಾಗಲಿ ಗ್ರೂಪ್‌ ಗ್ರಾಮ,ಗಳ ಸೇವಾಸಹಕಾರಿ ಸಂಘ ಎರಡು ವರ್ಷಗಳ ಹಿಂದೆ ನ್ಯಾಯಾಲಯ ಮೆಟ್ಟಲೇರಿ ಮೋದಿ ಮಹಾಶಯನ ಆಪ್ತ ಉದ್ಯಮಿಗಳ ಜುಟ್ಟು ಹಿಡಿದು ರೈತರಿಗಾದ ಹಾನಿಗೆ ಪರಿಹಾರ ಪಡೆದಿದ್ದರು. ಈಗಲೂ ಈ ಅವಕಾಶ ಇದೆ ಆದರೂ ರೈತರು ವೈಯಕ್ತಿಕವಾಗಿ ಈ ಪರಿಹಾರ, ನ್ಯಾಯದ ಹಿಂದೆ ಬೀಳುವುದು ಅಷ್ಟು ಸುಲಭವಲ್ಲ. ಸರ್ಕಾರ ಪ್ರತಿ ರೈತನಿಗೆ ಸೂಕ್ತ ಪರಿಹಾರ ಒದಗಿಸುವ, ನ್ಯಾಯ ನೀಡುವ ಸಾಮಾಜಿಕ ನ್ಯಾಯದ ಹಾದಿ ಅನುಸರಿಸಬಹುದು ಆದರೆ ಸರ್ಕಾರಕ್ಕೆ ವಿರೋಧ ಪಕ್ಷಗಳ ಕಿರುಕುಳ ದಿಂದ ಪಾರಾಗುವ ಸಂಕಷ್ಟವಾದರೆ ವಿರೋಧಿಪಕ್ಷಗಳಿಗೆ ರೈತರು, ಬಡವರಿಗೆ ನ್ಯಾಯ ಕೊಡಿಸುವುದಕ್ಕಿಂತ ಸರ್ಕಾರ ಬೀಳಿಸಿ ಅಧಿಕಾರ ಹಿಡಿಯುವ ಅಧಿಕಾರ ದಾಹ. ಸಾರ್ವಜನಿಕ ಹಿತಕ್ಕೆ ಮರುಗುವ ಸರ್ಕಾರ ಮತ್ತು ವಿರೋಧ ಪಕ್ಷಗಳನ್ನು ನಡೆಸಿಕೊಳ್ಳುವ ತಾಕತ್ತು ಜನಸಾಮಾನ್ಯನಿಗಿಲ್ಲದಿರುವುದು ಇಂದಿನ ದುಸ್ಥಿತಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *