

ಸಿದ್ಧಾಪುರ: ರೈತ ಮತ್ತು ಸೈನಿಕರು ದೇಶದ ಸಮಗ್ರತೆ, ಶಾಂತಿ ಮತ್ತು ಭದ್ರತೆ ದೃಷ್ಠಿಯಲ್ಲಿ ಸಮಾನ ಕಾರ್ಯಜರುಗಿಸುತ್ತಿದ್ದು ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸೈನಿಕರ ತ್ಯಾಗ, ಬಲಿದಾನ ದೇಶದ ಆಡಳಿತ ದೃಷ್ಟಿಯಲ್ಲಿ ವಿಶೇಷವಾಗಿದೆ. ಯುವ ಜನಾಂಗವು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸಬೇಕೆಂದು ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಸಿದ್ಧಾಪುರ ತಾಲೂಕಿನ ಹೆಗ್ಗರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸೇನೆ ತರಬೇತಿಗೆ ಆಯ್ಕೆಯಾಗಿರುವ ಸವಿನ್ ಹರಿಹರ ನಾಯ್ಕ, ಓಂಕಾರ ಅವರನ್ನು ಗ್ರಾಮಸ್ಥರು ಅಭಿನಂದಿಸಿದ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶ ಸೇವೆ ಶ್ರೇ ಷ್ಟವಾದ ಸೇವೆ. ಪ್ರತಿಭಾವಂತ ಯುವಕರಿಗೆ ಮಾಹಿತಿ ಮತ್ತು ಮಾರ್ಗದರ್ಶನ ಕೊರತೆಯಿಂದ ಸೈನಿಕ ಸೇವೆಗೆ ಸೇರ್ಪಡೆಯಲ್ಲಿ ಯುವಕರು ವಂಚಿತರಾಗುತ್ತಿದ್ದಾರೆ. ಯುವಕರಿಗೆ ಈ ದಿಶೆಯಲ್ಲಿ ಸೂಕ್ತ ಮಾರ್ಗದರ್ಶನ ಅವಶ್ಯ ಎಂದು ರವೀಂದ್ರ ನಾಯ್ಕ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್ ಎಲ್ ಭಟ್ಟ ಮಾತನಾಡುತ್ತಾ ದೇಶದ ರಕ್ಷಣೆಯು ಪ್ರಪಂಚದಲ್ಲಿ ಉತ್ಕ್ರಷ್ಟ ಸ್ಥಾನದಲ್ಲಿದೇ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯಲ್ಲಿ ಸೈನಿಕರ ಕೊಡುಗೆ ಅಪಾರವಾಗಿದೆ. ದೇಶ ಸೇವೆಗೆ ಮಕ್ಕಳನ್ನು ಕಳುಹಿಸಲು ಮನೋಪ್ರವೃತ್ತಿಯನ್ನು ಇಂದಿನ ಪಾಲಕರು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಮಕ್ಕಳಲ್ಲಿಯೇ ಸೈನಿಕ ಸೇವೆ ಕಲ್ಪನೆಯನ್ನು ಬೆಳೆಸಲು ಅವಕಾಶ ಒದಗಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಯುವಕರು ರಾಷ್ಟ್ರ ಮತ್ತು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಸ್ಥಳೀಯ ಪ್ರೌಢಶಾಲಾ ಮುಖ್ಯ ಅಧ್ಯಾಪಕರಾದ ಗುಣಶೇಷಣ ಅವರು ಹೇಳಿದರು.

ಸೈನಿಕ ನವಿನ್ ನಾಯ್ಕ ಮಾತನಾಡುತ್ತಾ ಯುವಕರು ಸ್ವಪ್ರೇರಣೆಯಿಂಂದ ದೇಶ ಸೇವೆಗೆ ತೊಡಗಿಕೊಳ್ಳುವ ಮನೋಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ದೇಶಸೇವೆಗೆ ಸೇರುವುದು ಪುಣ್ಯದ ಕೆಲಸ. ನನಗೆ ಈ ಅವಕಾಶ ಒದಗಿಸಿದ ಪಾಲಕರಿಗೆ ಧನ್ಯವಾದಗಳು ಎಂದು ತರಬೇತಿ ಸೈನಿಕ ನವಿನ್ ನಾಯ್ಕ, ಓಂಕಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಸಭೆಯನ್ನು ಉದ್ಧೇಶಿಸಿ ಸ್ಥಳೀಯ ಧುರೀಣ ಈಶ್ವರ ಗೌಡ ಹುಕ್ಕಳಿ, ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ಮ್ಯಾನೇಜರ್ ಚಂದ್ರಶೇಖರ್ ನಾಯ್ಕ, ಸೈನಿಕ ನವೀನ್ ತಂದೆ ಹರಿಹರ ನಾಯ್ಕ ಮಾತನಾಡಿದರು.
ಸಭೆಯಲ್ಲಿ ನಾಗಪತಿ ಗೌಡ ಸ್ವಾಗತಿಸಿ, ವಂದಿಸಿದರು. ವೇದಿಕೆಯ ಮೇಲೆ ಸೈನಿಕ ನವೀನ್ ಅವರ ತಾಯಿ ವಿನೋಧಿನಿ ನಾಯ್ಕ, ದ್ಯಾವಾ ಗೌಡ, ಬೀರಾ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೀತಾರಾಮ ಗೌಡ ಹುಕ್ಕಳಿ, ಮಂಜುನಾಥ ನಾಯ್ಕ ಮುಂತಾದವರ ನೇತ್ರತ್ವದಲ್ಲಿ ಸಂಘಟಿಸಲಾಗಿತ್ತು.
