

ಉತ್ತರ ಕನ್ನಡ ಜಿಲ್ಲೆಗೆ ಸಂಸದರು,ಸಚಿವರು, ಶಿರಸಿ ಕ್ಷೇತ್ರಕ್ಕೆ ಶಾಸಕರು ಇದ್ದಾರೆಯೆ? ಹೀಗೆಂದು ಪ್ರಶ್ನಿಸಿದವರು ಕೆ.ಪಿ.ಸಿ.ಸಿ. ವಕ್ತಾರ ಮತ್ತು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು.
ಉತ್ತರ ಕನ್ನಡ ಜಿಲ್ಲೆಯ ಯಾವುದೇ ಸಮಸ್ಯೆಗೆ ಸ್ಫಂದಿಸದ ಸಂಸದ ಅನಂತಕುಮಾರ ಹೆಗಡೆ ಚುನಾವಣೆ ಸಮಯಕ್ಕೆ ಬಂದು ಹಿಂದುತ್ವ ಎನ್ನುತ್ತಾರೆ. ಯಾವ ಹಿಂದುಗಳಿಗೆ ಇವರಿಂದ ಅನುಕೂಲ ಆಗಿದೆ? ಪರೇಶ್ ಮೇಸ್ತ ಪ್ರಕರಣದಿಂದ ಕರಾವಳಿ, ಮಲೆನಾಡಿನಲ್ಲಿ ಯೋಗ್ಯತೆ ಇಲ್ಲದವರೆಲ್ಲಾ ಶಾಸಕರು, ಸಂಸದರು ಆದರಲ್ಲ ಅವರಿಗೆ ಪರೇಶ್ ಮೇಸ್ತ ಯಾರೆಂದು ಗೊತ್ತಿದೆಯೆ?
ಶಾಸಕರು, ವಿಧಾನಸಭಾ ಅಧ್ಯಕ್ಷರ ಬಗ್ಗೆ ನಾವು ಮಾತನಾಡಬಾರದು, ಅವರು ಪೀಠದ ಮೇಲೆ ಕುಳಿತಿರುವವರು ಇವರು ಇವರ ಪಕ್ಷದಿಂದ ಯಾರಿಗಾದರೂ ಅನುಕೂಲವಾಗಿದೆಯೆ? ಕ್ಷೇತ್ರ-ಜಿಲ್ಲೆಯಲ್ಲಿ ರಸ್ತೆ ಇಲ್ಲ, ಅಭಿವೃದ್ಧಿ ಕಾಮಗಾರಿ ಇಲ್ಲ, ಅತಿಕ್ರಮಣದಾರರು, ಪ್ರವಾಹ ಪೀಡಿತರನ್ನು ಕೇಳುವವರಿಲ್ಲ. ಯುವಕರಿಗೆ ಉದ್ಯೋಗ ಇಲ್ಲ, ಉದ್ಯಮ ಇಲ್ಲ ಈ ವ್ಯವಸ್ಥೆಯಲ್ಲಿ ಚುನಾವಣೆ ಬಂದಾಗಲೆಲ್ಲಾ ಇವರಿಗೆ ನೆನಪಾಗುವುದು ಹಿಂದುತ್ವ ಹಾಗಾಗಿ ಬಿ.ಕೆ. ಹರಿಪ್ರಸಾದ್ ಉಸ್ತುವಾರಿಯಲ್ಲಿ ಕಾಂಗ್ರೆಸ್ ಸಂಘಟನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸಕ್ಕೆ ಬಾರದವರೆಲ್ಲಾ ಹಿಂದುತ್ವದ ಹೆಸರಲ್ಲಿ ಶಾಸಕರು, ಸಂಸದರಾಗುವುದನ್ನು ತಡೆಯುತ್ತೇವೆ ಎಂದು ವಿವರಿಸಿದ ಗೋಪಾಲಕೃಷ್ಣ ಬೇಳೂರು, ಹಿಂದುತ್ವವಾದಿಗಳು ಅನಂತಕುಮಾರ ಹೆಗಡೆ ಎಲ್ಲಿದ್ದಾರೆ? ಏನುಮಾಡುತಿದ್ದಾರೆ ಎಂದು ಹೇಳಬೇಕು.
ಯಡಿಯೂರಪ್ಪ ಕೆಲಸ ಮಾಡುವ ಮನುಷ್ಯ ಅವರನ್ನು ತೆಗೆದು ಬೊಮ್ಮಾಯಿಯಿಂದ ಅಭಿವೃದ್ಧಿ ಮಾಡಿಸುತ್ತಾರೆಯೆ? ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬಿ.ಜೆ.ಪಿ. ಸರ್ವನಾಶವಾಗಲಿದೆ. ಕಾಂಗ್ರೆಸ್ ರಾಜ್ಯ ವಿಧಾನಸಭೆಯ 150 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ. ಹೈಕಮಾಂಡ್ ತೀರ್ಮಾನದಂತೆ ಮುಖ್ಯಮಂತ್ರಿಗಳ ಆಯ್ಕೆ ನಡೆಯಲಿದೆ. ಅಭಿವೃದ್ಧಿ ಮಾಡದ, ಜನರಿಗೆ ಸ್ಪಂದಿಸದ ಬಿ.ಜೆ.ಪಿ. ಸ್ವಯಂಕೃತ ಅಪರಾಧ ಕಾಂಗ್ರೆಸ್ ಗೆಲುವಿಗೆ ಪೂರಕ ಎಂದರು.
ಬಿಜೆಪಿ ಎಲ್ಲಿ ಅಧಿಕಾರದಲ್ಲಿದೆ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಬಿ.ಜೆ.ಪಿ. ಗೆದ್ದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಇಲ್ಲ, ಯಡಿಯೂರಪ್ಪ ಶಿಕಾರಿಪುರ ಅಭಿವೃದ್ಧಿ ಮಾಡಿದ್ದಾರೆ. ಸಾಗರದಲ್ಲಿ ಯಡಿಯೂರಪ್ಪನವರಿಂದ ಕೆಲವು ಕೆಲಸಗಳಾಗಿವೆ. ಮತ್ತೆಲ್ಲಿ ಅಭಿವೃದ್ಧಿ ಆಗಿದೆ? ಬಿ.ಜೆ.ಪಿ. ಆಡಳಿತದಲ್ಲಿ ಉತ್ತರ ಕನ್ನಡಕ್ಕೆ ಅನ್ಯಾಯವಾದಂತೆ ರಾಜ್ಯದ ಬಹುತೇಕ ಜಿಲ್ಲೆ, ಕ್ಷೇತ್ರಗಳಲ್ಲಾಗಿದೆ. ಇದೇ ಅವರ ಸೋಲಿಗೆ ಕಾರಣವಾಗಲಿದೆ ಎಂದರು.
ಹೀಗೆಲ್ಲಾ ಮಾತನಾಡಿದ ಗೋಪಾಲಕೃಷ್ಣ ಬೇಳೂರು ಜೋಗ ಅಭಿವೃದ್ಧಿ ಸೇರಿದಂತೆ ರಾಜ್ಯದಲ್ಲಿ ಅನೇಕ ಕಾಮಗಾರಿಗಳನ್ನು ಆನ್ ಲೈನ್ ನಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಇವುಗಳ ಹಣೆಬರಹ ಕೂಡಾ ಕೆಲವೇ ತಿಂಗಳಲ್ಲಿ ತಿಳಿಯಲಿದೆ ಎಂದರು. ಸಿದ್ದಾಪುರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಜನಪರವಾಗಿ ಕೆಲಸಮಾಡುತ್ತಿರಬೇಕು, ಪ್ರತಿಭಟನೆ, ಜನಹೋರಾಟದ ಮೂಲಕ ಅವರನ್ನು ಹಿಮ್ಮೆಟ್ಟಿಸಬೇಕು. ಬಿ.ಜೆ.ಪಿ. ಉಪಯೋಗಕ್ಕೆ ಬಾರದ ಪಕ್ಷ, ದೇಶಕ್ಕೆ ಇದರಿಂದ ಯಾವ ಪ್ರಯೋಜನ ಇಲ್ಲ ಎನ್ನುವುದನ್ನು ಜನರಿಕೆ ಮನವರಿಕೆ ಮಾಡಿದರೆ ದೇಶಕ್ಕೆ ಒಳ್ಳೆಯದಾಗಲಿದೆ ಎಂದರು. ತಾಲಿಬಾನ್ ಆಡಳಿತ ವ್ಯವಸ್ಥೆ ವಿರೋಧಿಸುವವರು ಬಿ.ಜೆ.ಪಿ ವಿರೋಧಿಸಬೇಕೆಂದು ಕರೆ ನೀಡಿದರು.
