

ಅಧಿಕಾರಕ್ಕಿಂತ ಪಕ್ಷದ ಧ್ಯೇಯ ಸಾಧನೆ ಬಿ.ಜೆ.ಪಿ. ಗುರಿ ಮತ್ತು ಉದ್ದೇಶವಾಗಿದ್ದು ಅದಕ್ಕಾಗಿ ಬಿ.ಜೆ.ಪಿ. ಕನಿಷ್ಟ 25 ವರ್ಷ ಅಧಿಕಾರದಲ್ಲಿರಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ. ಘಟಕದ ಅಧ್ಯಕ್ಷ ವೆಂಕಟೇಶ್ ನಾಯಕ ಹೇಳಿದ್ದಾರೆ. ಸಿದ್ಧಾಪುರ ಶಂಕರಮಠ ಸಭಾಭವನದಲ್ಲಿ ನಡೆದ ಬಿ.ಜೆ.ಪಿ. ಬೂತ್ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಬಿ.ಜೆ.ಪಿ ರಾಷ್ಟ್ರೀಯ ಏಕತೆಯನ್ನು ಪ್ರತಿಪಾದಿಸುತ್ತದೆ. ಇದನ್ನು ಜಾರಿ ಮಾಡುತ್ತಿರುವ ಈಗಿನ ಸರ್ಕಾರದಿಂದ ಭಾರತ ಭಾರತವಾಗಿ ಉಳಿಯಲು ಸಾಧ್ಯ ಎಂದರು.
ಬೂತ್ ಅಧ್ಯಕ್ಷರಿಗೆ ನಾಮಫಲಕ ಮತ್ತು ಧ್ವಜ ವಿತರಿಸಿ ಮಾತನಾಡಿದ ಪ್ರಮುಖ ನಾಯಕರು ಬಿ.ಜೆ.ಪಿ. ಸಂಘಟನೆಯ ಮಹತ್ವವನ್ನು ತಿಳಿಸಿದರು.ಈ ಸಮಾವೇಶಕ್ಕೆ ಬಿ.ಜೆ.ಪಿ.ತಾಲೂಕಾಘಟಕದ ಅಧ್ಯಕ್ಷ ನಾಗರಾಜ್ ನಾಯ್ಕ ಸ್ವಾಗತಿಸಿದರು. ಪ್ರಸನ್ನ ಹೆಗಡೆ ನಿರೂಪಿಸಿದರು. ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಸೇರಿದಂತೆ ಕೆಲವು ಪ್ರಮುಖ ನಾಯಕರು ವೇದಿಕೆಯಲ್ಲಿದ್ದರು.


