

ಪತ್ರಕರ್ತ ವಿಶ್ವೇಶ್ವರಭಟ್ಟ,”ಯಾವ ಹಳ್ಳಿಯ ಹೆಂಗಸರೆಲ್ಲಾ ಬ್ರಾ ಧರಿಸಿರುತ್ತಾರೋ ಆ ಹಳ್ಳಿ ಮುಂದುವರೆದಿದೆ ಎನ್ನಬಹುದು” ಎಂದು ಕುಹಕವಾಡುವ ಮೂಲಕ ಹೆಣ್ಣುಮಕ್ಕಳು ಧರಿಸುವ ಬ್ರಾ ಬಗ್ಗೆ ತನ್ನ ಕೀಳು ಮಟ್ಟದ ಪುರುಷ ನೋಟ ವ್ಯಕ್ತಪಡಿಸಿದ್ದಾರೆ.
ಅವರ ಈ ಧೋರಣೆಯ ವಿರುದ್ಧ ಅನೇಕ ಹೆಣ್ಣುಮಕ್ಕಳು ತಿರುಗಿಬಿದ್ದಿದ್ದಾರೆ. ಅಕ್ಷರವನ್ನು ಸಾಮಾಜಿಕ ಜವಾಬ್ದಾರಿಯಿಂದ ಪ್ರಯೋಗಿಸುವ ವಿವೇಕವಿಲ್ಲದ ಭಟ್ಟರ ಬೇಜವಾಬ್ದಾರಿಯ ಮಾತನ್ನು ಖಂಡಿಸಿ ನಾನು, “ಪದ್ಮಾಳ ಬ್ರಾ ಮತ್ತು ಜಾವದ ಕುಂಬಳ” ಎಂಬ ಕವಿತೆಯನ್ನು ಬರೆಯುವ ಮೂಲಕ ಸ್ವಾಭಿಮಾನಿ ಹೆಣ್ಣುಮಕ್ಕಳ ಅಕ್ಷರ ಪ್ರತಿರೋಧವನ್ನು ಬೆಂಬಲಿಸಿರುತ್ತೇನೆ. —ಡಾ.ವಡ್ಡಗೆರೆ ನಾಗರಾಜಯ್ಯ
ಪದ್ಮಾಳ ಬ್ರಾ ಮತ್ತು ಜಾವದ ಕುಂಬಳ
ಮೂರು ದಿನಗಳ ಹಿಂದೆ ಮೈನೀರಾಗಿದ್ದ
ಪತ್ರಕರ್ತ ಮುರಾರಿಯ ಹೆಂಡತಿ ಪದ್ಮಾ
ಇಂದು ಹಗಲು ಜಾವ
ಮಡಿಬಿಟ್ಟು ಮೈಮಿಂದು
ಕಿರುಮನೆಗೆ ಬಂದು
ಬ್ರಾ ತೊಟ್ಟುಕೊಳ್ಳುತ್ತಿದ್ದಳು.
ಅಂದಿನ ಪತ್ರಿಕೆ ಮತ್ತು
ಸಾಮಾಜಿಕ ಜಾಲತಾಣಗಳಲ್ಲಿ
ಬ್ರಾ -ಗಳದ್ದೇ ಸುದ್ದಿ.
ಮಂಚದ ಮೇಲೊರಗಿದ್ದ ಮುರಾರಿ ತನ್ನ
ಮೂಗಿನ ಮೇಲಿನ ಚಾಳೀಸು ಸರಿಮಾಡಿಕೊಳ್ಳುತ್ತಾ
ಮೂತಿ ಕೊಂಕರಿಸಿಕೊಂಡು
ಪದ್ಮಾಳು ತೊಡುತ್ತಿದ್ದ
ಬ್ರಾ ಕಡೆಗೆ
ಕಣ್ಣುಬಿಟ್ಡು ನೋಡಿದ!
ಅರರೆ!
ಮನದನ್ನೆಯ ನುಣುಪು ಮೊಲೆಗಳು
ಚೂಜಗೆ ಬಿರಿದು ನಿಂತಿವೆಯಲ್ಲಾ
ಅ ಆ ಅಕ್ಷರಗಳ ಬಿಡಿಸಿ ಬರೆದಂತೆ!!
ಇರುಳು ಜಾವ ನೋಡಲಾಗದ
ಪದ್ಮಾಳ ಬ್ರಾ ಹಿಂದಿನ
ಗುಜುಮು ಗುಲ್ಲಾರಿ ಮೊಲೆಗಳನ್ನು
ಹಗಲು ಜಾವ ನೋಡೋಣು ಎಂದು
ಜೊಲ್ಲು ಸುರಿಸಿ
ಬಳಿಸಾರಿ ಬಂದು ನಿಂತು…..
“ಯಾಕೋ ಇತ್ತೀಚೆಗೆ
ಮೊಣಕೈ ಬಾತುಕೊಂಡಿದೆ ಕಣೇ…
ಎತ್ತಲಾಗದು ಇಳಿಸಲಾಗದು”
ಎಂದವನೇ
ಅವಳೆದೆಯ ಕಡೆಗೆ ಚಾಚಲೋದ ಕೈಯನ್ನು
ಕೆಳಗಿಳಿಸಿ ನೀವಿಕೊಂಡು
ಹಗಲು ಜಾವದಲಿ
ತನಗೊದಗಿದ ಪಾಡು ನೆನೆದು ಕುದಿದು ಕುಳಿತ ಮಳ್ಳಗೆ!
ಹೊತ್ತು ಮೂಡಿ ಹೊತ್ತು ಮುಳುಗಿ
ಚಂದ್ರಾಮನು ಬೆಳಕು ಚೆಲ್ಲಿದ
ಇರುಳು ಜಾವದಲ್ಲಿ ದೀಪ ಮುಡಿಸಿ
ದೀವಿಗೆಯ ಬೆಳಕಂತೆ
ಸಿರಿ ಸಿಂಗಾರಿಯಾದ ಪದ್ಮಾ
ಹಾಸಿಗೆ ಹಾಸಿ ದೀಪವ ತುಂಬಿ
ಮುರಾರಿಯು ಮಲಗಿದ್ದ
ಮಂಚದ ಮೇಲೆ ಮಗ್ಗುಲಾದಳು…
“ಇವತ್ತು ಭುಜಗಳು ತೊಡೆಗಳು ಸೋತು
ಬಲು ಬಾಧೆ ಕೊಡುತ್ತಿವೆ ಕಣೇ…
ನನಗೆ ಶುಗರು ಬೀಪಿ ಲೆವೆಲ್ ಜಾಸ್ತಿ ಆಗಿದೆ…
ನೀ ಮಂಚದ ಮೇಲೆ ಮಲಗು
ನಾ ಆಚೆ ಅಂಗಳದಲ್ಲಿ ಮಲಗುತ್ತೇನೆ
ಮನೆಗೆ ಕಳ್ಳರು ಬರಬಾರದಲ್ಲ”
ಎಂದು ಹಾಸಿಗೆ ಇಚ್ಛೆಯ ಶಪಿಸಿ
ಆಂಗಳವ ಸೇರಿ ಬಿದ್ದುಕೊಂಡ.
ನಿದಿರಾದೇವಿ ಸುಳಿಯದೆ ಒದ್ದಾಡುವಾಗ
ಮುಗಿಲ ಚಂದ್ರಾಮನ ಕಿರಣಗಳು
ಕಣ್ಣು ಚುಚ್ಚುತ್ತಿರಲು ಅರೆಗಣ್ಣು ಬಿಟ್ಟು
ಕಿರುಗಣ್ಣು ತೆರೆದು ಮನೆಯೊಳಗೆ ಇಣುಕಿ
“ಆಗ ಹಗಲು ಜಾವದಲ್ಲಿ ಬ್ರಾ ಒಳಗಿನ
ಗುಜುಮು ಗುಲ್ಲಾರಿ ಮೊಲೆಗಳ
ಸೌಂದರ್ಯವ ನಾನು ಅನುಭವಿಸದಾದೆ…
ಈಗ ಇರುಳು ಜಾವದಲ್ಲಿ ಮಂಚದ
ನಿದ್ದೆಯ ಸುಖವನೂ ನಾನು ಕಾಣದಾದೆ
ಎಂಥಾ ಪಾಡು ಬಂತಲ್ಲೋ
ಮುರಾರಿ… ಮುಕುಂದಾ… ಗೋವಿಂದಾ…”
ಎಂದು ಹಗಲು ಕುದಿದವನು ಇರುಳೂ ಕುದಿಯತೊಡಗಿದ.
ಇಂಥಾ ಮುರಾರಿಗೆ ಮೊದಲ ಜಾವದ ನಿದ್ದೆಗವಿದಿರಲು
ಹಗಲು ಜಾವ ತನ್ನ ಮನೆಯ ಗೋವಿನ
ಮೈನೀವಿ ಹಾಲು ಕರೆದುಕೊಟ್ಟಿದ್ದ ಜಾವದ ಕುಂಬಳ
ಇರುಳು ಜಾವ ಹಾಲುಬಾನವ ಸವಿಯಲು
ಹಿತ್ತಲಿನಲ್ಲಿ ಬಟ್ಟಲು ಹಿಡಿದು ಕಾಯುತ್ತಿದ್ದ.
ದೀಪತುಂಬಿ ಮಂಚದ ಮೇಲೆ ಮಲಗಿದ್ದ
ಪದ್ಮಾಳ ಬ್ರಾ ಮೇಲೆ ಮುಗಿಲ ಚಂದ್ರಾಮ
ಕಿರಣಗಳ ಚಿತ್ತಾರ ಬಿಡಿಸಿದ್ದ!
ಚಂದ್ರಾಮನು ಮೈಸೋಕಿದ ಹಿತಕ್ಕೆ
ಅವಳು ತೊಟ್ಟಿದ್ದ ಬ್ರಾ ಪಟಾರನೆ ಹರಿದುಹೋಗಿತ್ತು…
ಪದ್ಮಾಳ ಗುಜುಮು ಗುಲ್ಲಾರಿ ಮೊಲೆಗಳೀಗ
ಬ್ರಾ ಕಳೆದು ಚೂಜಗೆ ಸೊನೆವೇರಿ
ಬೆಳ್ದಿಂಗಳ ಹಾಲಿನ ಹೊಳೆಯಂತೆ ಹಿತವಾಗಿದ್ದವು
ಜಾವದ ಕುಂಬಳನ ಬಟ್ಟಲಿಗೆ ಹಾಲುಬಾನವ ನೀಡುವಾಗ!!
-ಡಾ.ವಡ್ಡಗೆರೆ ನಾಗರಾಜಯ್ಯ
8722724174


